ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಶೇಖರ ರಕ್ಷಿಸೋ ಎನ್ನ ತಂದೆ ಶಂಕರ ಹಿಂದೆ ಪೊಂದಿದ ದೇಹದ ಮತ್ತಿಂದು ಹಿಡಿಯುತ ಪ ಹಿಂದೆ ಬಿಸುಟೊಡಲು ಮರು ಕೊಳಿಸಿ ಸಾರಿ ಬಂದುದು ತಂದೆ ತಾಯಿಯ ಗಣನೆ ಉರ್ವಿಸಿಕವನು ಮೀರಿತು ಅಂದು ಮೊದಲು ಜನನೀಸ್ತನವನುಂಡು ಪಾಲಸವಿದುದು ಇಂದು ಕಂದು ಗೊರಳನೆ 1 ಕಾಲ ಬಾಲವನಿತೆ ಬಾಳು ಬದುಕಿನೊಳಗೆ ತೊಳಲಿ ಬಳಲಲು ಕಾಯದೊಳಗೆ ಮುಸುಕಲು ಕೊಳುವೋದೆ ಯಮಗೆ ಶೂಲ ಪಾಣಿ ನೀಲಕಂಠನೆ 2 ಎನ್ನದಾನದೆಂಬ ಹಮ್ಮವಶದಿ ಸುಮ್ಮನೆ ಹೊನ್ನು ಹೆಣ್ಣು ಮಣ್ಣು ಮೂರು ತನ್ನದೆಂದು ನಂಬುತ ಬನ್ನ ಬಟ್ಟು ಸಾಯುತ ಭವದಶರಧಿ ಬೇಗೆಯನ್ನು ಈಸಲಾರೆನೋ 3 ಸಿಂಧು ತೆರೆಯೊಳು ಮಂದ ಗಜವು ಕುಣಿಯೋಳ್ ಬಿದ್ದು ಏಳಲಾರದಂದದಿ ಇಂದ್ರಜಾಲದೊಳಗೆ ಸಿಲುಕಿಮಂದಗೆಟ್ಟು ನೊಂದೆನೋ 4 ದುರಿತ ಮರಣ ಕಾಲದೊಳಗೆ ನಾಮಸ್ಮರಣೆ ಯಾದಗುವಂದದಿ ತರಣಿ ತಮವ ಕಡಿಸಿ ಧರೆಯ ಬೆಳಗುವಂತೆ ಹೃದಯದಿ ಕರುಣದಿಂದಲಿ ನಿರುತಸಲಹೋ ಇಕ್ಕೆರಿ ಅಘೋರೇಶಲಿಂಗನೆ 5
--------------
ಕವಿ ಪರಮದೇವದಾಸರು
ನೆರೆನಂಬಿದೆನು ನಾನಿನ್ನ ಪಾದಾಂಬುಜವನು ಕರುಣದಿ ಸಲಹೋ ಎನ್ನಾ ಪ ಹರನದೊಡೆಯ ಗೌರಿ ವರನಾಗಿ ಮೆರೆದಿಹ ಸ್ಮರಹರ ಕರ್ಪೂರ ಧವಳಾಂಗಾ ರಿಪುಭಂಗಾ ದೇವತುಂಗಾ ಮೃಢೇಶ್ವರಲಿಂಗಾ ದೇವರದೇವ ನೀನೆಂದು ರಾವಣ ಬಂದು ದೇವಾ ನೀ ಸಲಹೋ ಇಂದು ಭಾವಕಿ ಬೇಡಿಕೊಂಡರೆ ಭಾವಜೆಯವಗೆ ನೀ ಪಾರ್ವತೀಶ್ವರನೇ ನೆರೆ ಹರಿಧರಹರನೀನೆಂದು ಹರಿಯುತಾ ಬಂದು ಹರನೆ ರಕ್ಷಿಸೋ ನೀ ಎಂದು ಕರದು ಹರಿಮಿತ್ರನ ಕರುಣದಿ ವರವಿತ್ತ ಕರಿಗೊರಳನೆ ಅಮಿತಸರ್ವೇಶಾ ನೆರೆ ಪಡುಗಡಲೊಡೆಯನೆಂದು ಪಾಡುತಬಂದು ಪೊಡವಿಯೊಳ್ ಸ್ತುತಿಪನೆಂದೂ ಒಡೆಯ ಲಕ್ಷ್ಮಣನಿಗೆ ಒಡನೆ ಅಭಯವಿತ್ತ ರಿಪುಭಂಗಾ ಹರನೆ ಭಸಿತಾಂಗಾ
--------------
ಭಟಕಳ ಅಪ್ಪಯ್ಯ
ಪಾರ್ವತೀಪತಿಯೆ ಎನ್ನಪಾಲಿಸುವುದು ಪ ದೂರು ನೋಡದೇ ಗುರುವ ಸಾರುವುದು ಸತತಾ ಅ.ಪ ಭಜಕರ ಸರ್ವಕಾವನ ನಿಜದಾಸರೊಳ್ಕೂಡಿಸಿ ಭಜನೆಯ ಮಾಡಿಸೋಬೇಗ ಭುಜಗಭೂಷಣನೆನೀನು 1 ನಂದಿ ವಾಹನನೆ ಎನ್ನಾ ಮಂದಮತಿಗಳ ಹರಿಸಿ ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ 2 ಇಂದು ಗರ್ವವ ಬಿಡಿಸಿ ಕಾರಣಕರ್ತಹರಿಯೆ ಶ್ರೀರಮಣನ ತೋರೋ 3 ಭೂತನಾಥನೆ ನೀನು ಮಾತನು ಲಾಲಿಸುವುದು ದಾತಾನೆ ಸಲಹೊ ಎನ್ನಾ ಪಾತಕವನು ಹರಿಸಿ 4 ಶುದ್ಧಭಕುತಿಯನೆ ಕೊಟ್ಟುಸದ್ವೈಷ್ಣವರ ಪ್ರೀಯನೆ ಮಧ್ವಾಂತರ್ಗನಾದ ಮುದ್ದುಮೋಹನವಿಠಲನ ತೋರು 5
--------------
ಮುದ್ದುಮೋಹನವಿಠಲದಾಸರು
ಶ್ರೀ ಮಹಾದೇವರು ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1 ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2 ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
--------------
ಶಾಮಸುಂದರ ವಿಠಲ