ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ದಶಾವತಾರ ಶ್ರೀಹರ ನಿನ್ನ ಲೀಲೆ ಏನು ಹೇಳಲಯ್ಯ ನಾನು ಪ ಮೋಹಗೊಳಿಸಿ ಲೋಕವನ್ನು ಪಾಲಿಸುತ್ತಿಹೆ ಅ.ಪ ಮತ್ಸ್ಯನಾಗಿ ವೇದ ತಂದೆ ಆಮೆಯಾಗಿ ಅಮೃತ ವಿತ್ತೆ ವರಹನಾಗಿ ನೀನು ಧರಣಿ ಹೊತ್ತೆಯೈ 1 ನರಹರಿ ತರಳರಕ್ಷ ಬ್ರಹ್ಮಚಾರಿ ಇಂದ್ರಪಾಲ ದಾ ಶರಥಿಯೆ ನೀನು ಧರ್ಮ ತೋರ್ದೆಯೈ 2 ಬಾಲಕೃಷ್ಣ ಲಾಲಿಲೀಲೆ ಪರುಶುಧಾರಿ ಪಿತೃಭಕ್ತ ಬಲ್ಲರಾಮನಾಗಿ ನೀನು ಬುದ್ಧಿ ಪೇಳ್ದೆಯೈ 3 ಕಲ್ಕಿಯಾಗಿ ಕೆಸರ ತೊಳೆವೆ ವಿಷ್ಣು ಜಾಜಿಶ್ಯಾಮವನ್ನು ಶುಲ್ಕವಿಲ್ಲದಂತೆ ನಿನ್ನಲ್ಲಿಗೊಯ್ವುದೈ 4
--------------
ಶಾಮಶರ್ಮರು
ಈ ಭಾಗ್ಯ ನೋಡ ಒಯ್ಯಾರಿನಮ್ಮ ಸೌಭಾಗ್ಯ ಶ್ರೀ ಕೃಷ್ಣ ಕೈ ಸೇರಶೌರಿ ಪ. ಅರಳು ಅರಳು ಮೊದಲಾಗಿ ಏ ನಾರಿಸಕ್ಕರೆಯ ತಂದಿಟ್ಟು ಮಾರುವವರು ಕಡೆಯಿಲ್ಲ 1 ಕುಂಕುಮ ಅರಿಷಿಣ ಅಲಂಕಾರ ದ್ರವ್ಯವಅಂಕ ಅಂಕಣಕ ನೆರವ್ಯಾವ ಏನಾರಿ ಅಂಕ ಅಂಕಣಕ ನೆರವ್ಯಾವ ಬೆಲೆ ಮಾಡೊಕಂಕಣದ ಕೈಯ ಕೆಲದೆಯರು ಕಡೆಯಲ್ಲಾ ಏ ನಾರಿ 2 ಬುಕಿಟ್ಟು ಪÀರಿಮಳ ದ್ರವ್ಯ ಪೊಟ್ಟಣ ಕಟ್ಟಿತರಹತರಹ ಏ ನಾರಿಪೊಟ್ಟಣವ ಕಟ್ಟಿ ತರಹತರದ ದ್ರವ್ಯವ ಕೊಟ್ಟು ಕೊಂಬುವರು ಕಡೆಯಿಲ್ಲ ಏ ನಾರಿ3 ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು ಸೂಜಿ ಮಲ್ಲಿಗೆ ಸರಗಳ ರಂಗನ ಪೂಜೆಗೊಯ್ವೊ ಪುರುಷರು ಏ ನಾರಿ4 ನಾಲ್ಕು ದಿಕ್ಕಿಗೆ ದಿವ್ಯ ಆಕಳ ಹಿಂಡುಗಳು ಸಾಕುವ ಎರಳೆ ಎಳಿಗಾವು ಏ ನಾರಿಸಾಕುವ ಎರಳೆ ಎಳಿಗಾವು ಹೂಂಕರಿಸಿ ಬಾಹೋ ಚಲ್ವಿಕೆಯ ಏ ನಾರಿ 5 ಎತ್ತೆತ್ತ ನೋಡಿದರೂ ಮುತ್ತಿನ ಪಲ್ಲಕ್ಕಿಉತ್ತಮ ರಥವ ಹಿಡಿದೇಜಿ ಏ ನಾರಿಉತ್ತಮ ರಥವ ಹಿಡಿದೇಜಿ ಮ್ಯಾಲಿನ್ನು ಹತ್ತಿ ಬಾಹುವರು ಕಡೆಯಿಲ್ಲ ಏ ನಾರಿ6 ಬಾಜಾರದೊಳಗಿನ್ನು ರಾಜಸಿಂಹಾಸನ ರಾಜ ರಾಮೇಶ ಕುಳಿತಲ್ಲಿಯೆ ಏ ನಾರಿ ರಾಜ ರಾಮೇಶ ಕುಳಿತು ಪೂಜೆಗೊಂಬೊಮೂರ್ಜಗವು ಮುದದಿಂದ ಏ ನಾರಿ7
--------------
ಗಲಗಲಿಅವ್ವನವರು
ಕಾಲ ಪ ಏಳು ಏಳು ಎಂದು ಯಮನ ಆಳು ಬಂದು ಪಾಶವಿಕ್ಕಿ ಕಲ್ಲು ಮುಳ್ಳು ಮೇಲೆ ಎಳೆದು ಒಯ್ವ ಹೊತ್ತು 1 ಅಷ್ಟಪುರದ ಕಾವಲವರು ಕಟ್ಟ ಕಡೆಗೆ ತೊಲಗೆ ಬಾಯ ಬಿಟ್ಟು ಹೊರಗೆ ಜೀವ ಕೆಂಗಟ್ಟು ಹೋಗುವಂಥಕಾಲ 2 ದಾರಿಯೊಳಗೆ ಪಾಪಿಗಳನು ಘೋರ ಬಡಿಸಿ ದಂಡದಿಂದ ಗೊಯ್ವ ಹೊತ್ತುವ್ಯಾಳ್ಯಾ 3 ಹೆಂಡಿರಿಲ್ಲ ಮಕ್ಕಳಿಲ್ಲ ಬಂಧು ಬಳಗವಿಲ್ಲವಲ್ಲಿ ಕಾಲ 4 ಬುದ್ದಿವಂತರಾದರೆಚ್ಚರಿದ್ದು ಪಾಪವನ್ನು ಮಾಡ ಭವನಗೆಲವ ಹೊತ್ತು 5
--------------
ಕವಿ ಪರಮದೇವದಾಸರು
ಗುರುವೆ ಪರಬ್ರಹ್ಮ ವಾಸುದೇವಾರ್ಯಗುರುವೆ ಪರಬ್ರಹ್ಮ ಪಅರಿವು ಮರವೆಗಳ ಪರಿಯ ನಿರೂಪಿಸಿಅರಿ'ನ ಘನವಾಹ ತೆರಗೈದು ಪಾಲಿಪ ಅ.ಪಸುಖಬುದ್ಧಿುಂಪಾಪಾಸಕ್ತ ಮಾನಸರನುಯುಕುತಿುಂದಲಿ ಹರಿಭಕುತಿಗಳವಡಿಪ 1ಭಾಗವತಾರ್ಥದಿ ರಾಗವ ಪುಟ್ಟಿಸಿಹಾಗೆ ಗೀತಾಮೃತ ಸಾಗರದೆಡೆಗೊಯ್ವ 2ನಾನಾಮತಗಳೊಳು ಮಾನಿಸಹೊಗದಂತೆಶ್ರೀನಿವಾಸನ ಪಾದಧ್ಯಾನವ ಬಲಿಸುವ 3ಕಾಮಾದಿ ಕಲುತ ತಾಮಸ ಜನರನುಪ್ರೇಮದಿಂದಲಿ ಸಪ್ತ ಭೂ'ುಕೆಗೇರಿಪ 4ಒಂದೊಂದರೊಳು ಮತಿನಿಂದು ತಿಳಿದೊಳಿಸೆಂದು ನಡೆದೂ ಪೂರ್ಣಾನಂದರಹುದಮಾಳ್ಪ 5ಹೊರಗೊಳಗುಗಾಣದೆ ಬರಿಯರಿವಳಮಲಪರಮನೆ ನಾನೆಂಬ ಪರಿಗೈದು ಪೊರೆವ 6ಕರುಣದಿಂ ಚಿಕನಾಗಪುರದಿ ಭಜಕರಿಗೆಕರದು ಜ್ಞಾನಾಮೃತವೆರೆವ ವಾಸುದೇವಾರ್ಯ 7
--------------
ವೆಂಕಟದಾಸರು
ಗೋದಾ ಎನ್ನೊಳ್ವಿನೋದದಿಂದ ಪಾದ ಪ ಸಾಧು ಸಜ್ಜನರಿಗೆ ಸ್ನಾನದಫಲ ಕೊಟ್ಟು ಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ 1 ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆ ಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ 2 ದೂರದಿ ಬಂದೆ ನಾ ಗೋದಾವರಿಯೆ ನೀನು ತೋರೆ ಭೀಮೇಶಕೃಷ್ಣನ್ನೂರು ದಾರಿಗಳ 3
--------------
ಹರಪನಹಳ್ಳಿಭೀಮವ್ವ
ಪ್ರಾಣ ಸಂಕರುಷಣಭವ ಜಗತ್ರಾಣ ಮುಖ್ಯಪ್ರಾಣ ಪ ತೃಣಜೀವರಾದಿ ಜಂಗಮಜಡದೊಳು ಪೂರ್ಣನಹುದೊ ಶ್ರೀಹರಿಪ್ರೇರಣೆಯಿಂದ ಅ.ಪ ಪ್ರಾಣ ನಿನ್ನಿಂದಲೆ ಸರ್ವರತ್ರಾಣ ಪ್ರವೃತ್ತಿಯೂ ನಿನ್ನಯ ಆಣತಿಯಂತಿರ್ಪುದಯ್ಯಾ ಮುಖ್ಯ ಪ್ರಾಣನೆ ತ್ರಿವಿಧಜೀವರೊಳನವರತದಿ ನೀ ನೆಲೆಸಿ ಏನೇನು ಮಾಳ್ಪಕರ್ಮಂಗಳೆಲ್ಲವು ನಿನ್ನಿಂದೈಯ್ಯಾ ಪ್ರಾಣೋಪಾನವ್ಯಾನೋದಾನಸಮಾನರ ತ್ರಾಣ ನಿನ್ನದೊ ಮುಖ್ಯಪ್ರಾಣದೇವನೆ ಪ್ರಾಣಿಗಳಲಿ ಪಂಚಪ್ರಾಣರೂಪದಲಿಹೆ ಪ್ರಾಣಿಕಾರ್ಯಕ್ಕೆಲ್ಲ ನೀನಾಧಾರನೋ 1 ಸ್ಥೂಲಶರೀರದೊಳು ಪಾಯೂಪಸ್ಥದಿ ಸ ಕಲಮಲಗಳಾದ್ಯಪಸರಣಾದಿಗಳಿಂದ ರಕ್ಷಣೆ ಎಲ್ಲಪಾನನಿಂದಲಿ ಮಾಡಿಸಬಲ್ಲೆ ಮುಖನಾಸಿಕನೇತ್ರದಿ ಎಲ್ಲಶ್ವಾಸಾದಿಗಳಾಡಿಸಬಲ್ಲೆ ಕಾಲಕಾಲಕುಶ್ವಾಸಪ್ರಣಯದಿಂದಲಿ ಎಲ್ಲಕಾಲದೊಳು ಪ್ರಾಣನೆಂಬರೋ ಎಲ್ಲ ಜೀವರೊಳು ನಿಂತು ನಡೆವೆ ಶ್ರೀ- ನಲ್ಲನಾಜ್ಞೆಯಂತನುವರ್ತಿಸುವೆಯೊ 2 ಎಪ್ಪತ್ತೆರಡು ಸಾವಿರವಿಹ ನಾಡಿ ಒಡಗೂಡಿ ಅನುದಿನ ಇಪ್ಪ ಈ ಜಡದೇಹವನೇ ನೋಡಿ ವ್ಯಾಪಿಸಿ ವ್ಯಾನನಿಂದ ರಸಗಳಾ ನಾಡಿಗೆ ಕೊಂಡೋಡಿ ತಪ್ಪದೆ ನಾಡಿಕಾರ್ಯವನೆಲ್ಲ ಕ್ರಮದಿ ಮಾಡಿ ಒಪ್ಪೆ ಉದಾನಸುಷುಮ್ನನಾಡಿಯೊ ಒಪ್ಪಿಸುವೆ ಸುಖದುಃಖಫಲವನು ಪಾಪಪುಣ್ಯದಂತೆ ಜೀವರಿಗೆ ಲೋಕವ ಪ್ರಾಪಿಸಿಕೊಡುವಿಯೊ ಆಜ್ಞೆಯಿಂ 3 ಭುಕ್ತವಾದನ್ನವೆ ಮೊದಲಾದ್ದೆಲ್ಲ ತತ್ತಸ್ಥಳಗಳಿಗೊಯ್ವಪ್ರಯುಕ್ತ ಪ್ರಾಣಾಪಾನರಮಧ್ಯಪ್ರಾದೇಶವಾದ ನಾಡಿಯಲಿದ್ದ ಸಮಾನವಾಯುವಿಂ ಶಕ್ತಿಯಸಕಲಾವಯವಕೀವ ಶಕ್ತಿಯಿಲ್ಲದತ್ಯಲ್ಪಜೀವರಿಗೆ ಶಕ್ತಿಯಿತ್ತು ಜ್ಞಾನೇಂದ್ರಿಯ ವೃತ್ತಿಯ ವ್ಯಕ್ತಮಾಡಿ ಫಲವಿತ್ತು ಪೊರೆವೆಯೋ ಮುಕ್ತರೊಡೆಯನಿಗೆ ಅತ್ಯಂತ ಹಿತಕರ 4 ಪ್ರಾಣಾ ನೀ ಬಾಹ್ಯಾದಿತ್ಯನೊಳಿದ್ದು ಅಧ್ಯಾತ್ಮನೆನಿಸಿ ಕಣ್ಣೀನೊಳಾದಿತ್ಯನಲಿ ಬಂದು ಅಧಿಭೂತನೆನಿಸಿ ಕಣ್ಣೀನಭಿಮಾನಿಪ್ರಾಣನ ಸೇರಿ-ಅಧಿದೈವವೆಂದು ಎಣಿಪರೊ ಈ ವಿಧ ತ್ರಯಗತನೆಂದು ತೃಣ ಮೊದಲಾದ ಸರ್ವಜೀವರ ಪ್ರಾಣಪಂಚರೊಳು ಮುಖ್ಯಪ್ರಾಣನೆ ಫಣಿಗಿರೀಶ ಶ್ರೀ ವೆಂಕಟೇಶನ- ಪ್ಪಣೆಯಂತೆ ನೀ ನಿಯಾಮಕನಾಗಿಹೆ 5
--------------
ಉರಗಾದ್ರಿವಾಸವಿಠಲದಾಸರು
ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ ಸಾರ ಪಾಕಗಳಿಲ್ಲ ಊರೂರಿಗೊಯ್ವುದಕೆ ಭಾರವಲ್ಲ ಅ.ಪ ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1 ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2 ನಾರಾಯಣಾಯೆಂಬ ನೀರ ಬೆರಸಿರೋದಿದಕೆ ಸಾರತರ ರಸಪಾಕ ತೋರುವಾ ಮಾತ್ರೆ3 ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ [ಮೂರೊತ್ತು ಸೇವಿಸೆ ಮನಕಹುದು ಹಿತ] 4 ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ ಶರಣಜನವರದನೆಂದೊರೆವರು ಸದಾ 5 ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲಕ್ಷ್ಮೀ ದೇವಿ ಕಾದಿರುವಳು ರುಕ್ಮಿಣಿ ಕೃಷ್ಣ ಬರುವನೆಂದು ಪ. ಕರವ ಪಿಡಿವನೆಂದು ಅ.ಪ. ವಿಪ್ರನ್ನ ಕಳುಹಿರುವೆನು ಕ್ಷಿಪ್ರದೊಳು ಗುಡಿಯೊಳಿಹೆನು ಅಪ್ರಮೇಯ ನಿನ್ನಡಿಗಳನ್ನು ಸುಪ್ರಕಾಶ ನಂಬಿರುವೆನೆಂದು 1 ಶಿಶುಪಾಲನೊಲ್ಲೆನೆಂದು ವಸುಧೀಶ ನೀನೆ ಗತಿಯೆಂದು ಹಸುಳೇಯ ಸಲಹು ಎಂದು ಬೆಸಸಿಹೆನು ಪತ್ರವೆಂದು 2 ರಥವೇರಿ ಬರುತಲಿಹನೊ ಪಥದೊಳು ಕಾದಿರುವನೊ ರತಿಪತೀ ಪಿತನ ಪದವ ಅತಿಶಯದಲಿ ಕಾಣುವ ತವಕದಿ 3 ಶಂಕಾತುರಂಗಳಿಂದ ಶಂಕರೀಯಪೂಜೆಗೈದು ಕಿಂಕಿಣಿಯ ನಾದದಿಂದ ಶಂಕರಾದಿವಂದ್ಯ ಬರುವ ಪಥದಿ ಬಂದು 4 ಬಂದಾನೋ ಬಾರನೋ ಎನುತಾ ಇಂದಿರೆಯ ಅರಸನ್ಹೊರತು ಪೊಂದಲಾರೆನನ್ಯರನೆನುತ ಸುಂದರೀಮಣಿ ಕೃಷ್ಣನಾಗಮ ನೋಡುತ 5 ದ್ವಾರಕಿಯಾ ನಾಥ ಬಂದು ಪಾರುಗಾಣಿಸುವನೆಂದು ಚಾರುಕರದೊಳೆತ್ತಿ ಎನ್ನ ದ್ವಾರಕೆಗೊಯ್ವ ಶ್ರೀ ಶ್ರೀನಿವಾಸನೆಂದು 6
--------------
ಸರಸ್ವತಿ ಬಾಯಿ