ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಿಗ್ಯಾತಕೆ ಮೊರೆಯಿಡಲಿ ಸಾರಿದವರನ ಪೊರೆವ ಶ್ರೀರಮಣ ನೀನಿರಲು ಪ ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ ಅಳತಿಗೆ ಇನ್ನೊಬ್ಬನೆ ಹಾಗೆವೆ ವಳತಿಗೊಬ್ಬರು ದೊರೆಗಳೆ ಮ್ಯಾಲೆನ್ನ ಪ್ರಳಯಕೆ ಮತ್ತೊಬ್ಬನೆ ಪರಿಪರಿ ಖಳರ ಮಾತುಗಳೇ ಸ್ವಾಮಿ 1 ಆಕಾಲ ನೀನೆವೆ ಈ ಕಾಲದಲಿ ನೀನೆ ಸಾಕುವನು ಇನ್ನೊಬ್ಬನೆ ಸ್ಥಿರವಾಗಿ ತಾಕು ತಗಲಿಲ್ಲದೆಲೆ ಬೊಮ್ಮಾದಿ ಲೋಕಪತಿಗಳ ಒಡಿಯನೇ ಈ ವ್ಯಾಳ್ಯ ಲೋಕರನ ಕಾಯಬೇಕೊ ಸ್ವಾಮಿ 2 ಕಾಸು ಒಬ್ಬರಿಗಿಲ್ಲ ಲೇಸು ತೋರದಲೇವೆ ದೇಶಕೊಬ್ಬರು ಪೋದರೋ ಪೊಟ್ಟಿಗೆ ಕೂಸುಗಳ ಮಾರುಂಡರೋ ಈ ಜನರ ಕ್ಲೇಶಬಡಸದಲೆ ಪೊರಿಯೊ ಕರುಣದಲಿ ವಾಸುದೇವವಿಠಲ ಸ್ವಾಮಿ 3
--------------
ವ್ಯಾಸತತ್ವಜ್ಞದಾಸರು
ಎನಗೊಬ್ಬರು ಇಲ್ಲಾ ನೋಡಿ ಸಿರಿನಲ್ಲ ಪ ಮನದಿ ಯೋಚಿಸಲು ತಂದೆ ತಾಯಿಸತಿ ತನಯ ಸಹೋದರ ಮಿತ್ರರೆಂಬುವರು ಅ.ಪ ಒಬ್ಬರಾದರೂ ಇವರಲಿ ಇದ್ದರೆ ಹಬ್ಬವಾಗಿ ಸಂತೋಷ ಪುಟ್ಟುವುದು ತಬ್ಬಲಿಯಾದೆನು ಸಂಸ್ಮರಣವೆಂಬ ಹೆಬ್ಬುಲಿಯಕೈಗೆ ಸಿಕ್ಕಿರುವೆನು ನಾಂ1 ಯಾರಿಗೆ ಮೊರೆಯಿಡಲೀ ಕಷ್ಟ ಕಿವಿ- ಯಾರ ಕೇಳಿ ಪರಿಹರಿಸುವರಾರು 2 ರಾಯ ತಂದೆ ಧರ್ಮವೆ ಸೋದರರು ಸತಿ ನೋಯಿಸದಿರುವುದು ಮಿತ್ರನು ಇವರೊಳು 3 ಈ ಬಂಧುಗಳುಳ್ಳವಗೆ ನಿರುತವು ಮ- ಹಾಭಾಗ್ಯವುಯಿಹಪರ ಸೌಖ್ಯವು ನಾ ಭ್ರಾಂತಿಯೊಳೆಲ್ಲೆಲ್ಲಿ ತಿರುಗಿದರು ವೋ ಭಗವಂತ ಮಹಂತಾನಂತನೆ 4 ಹೊರಗಿನವರ ಬಾಲ್ಯದಿ ಕಾಣದೆ ಕರೆ ಗುರುರಾಮವಿಠಲ ಹೊರವೊಳಗೂನೀ ನಿರುವೆ ಕರುಣಿಸೈ ಸರ್ವವು ನೀನೆ 5
--------------
ಗುರುರಾಮವಿಠಲ
ಕೇಳಿರೋ ಕೇಳಿರೋ ಆಲಿಸಿ ಜನರು | ಕಲಿಯುಗದೊಳಗ ಒಡಿಯ ನಾಟವನು ಪ ಫುಲ್ಲನಾಭನ ಭಕ್ತಿ ಎಳ್ಳೆನಿತಿಲ್ಲಾ | ಹುಲ್ಲು ಕಲ್ಲು ದೈವಕ ಎರಗಿ ನಡೆವರು | ಬೆಲ್ಲವು ಕಹಿಯಾಗಿ ಸಿಹಿ ಬೇವಾಯಿತು | ಅಲ್ಲ-ಹುದೆಂಬುದು ಬಲ್ಲವರಾರು 1 ಸಾಧು ಸಂಗಕ ಕಾಲು ಏಳುವು ನೋಡಿ | ಸಾಧಿಸಿ ದುರ್ಜನರಾ ನೆರಿಯ ಸೇರುವರು | ಮಾಧವ ನಾಮ ಉಣ್ಣಲು ಮುಖರೋಗ | ಭೂದೇವಿ ನಿಸ್ಸಾರವಾದಳು ನೋಡಿ2 ನೀಚರಿಗುದ್ಯೋಗ ಊಚರಿಗಿಲ್ಲ | ಆಚಾರ ಸದ್ಗುಣ ಆಡವಿ ಸೇರಿದವು | ಯೋಚಿಸಿ ಒಬ್ಬರಿ ಗೊಬ್ಬರು ಕೇಡಾ | ಭೂಚಕ್ರದೊಳು ಎಲ್ಲಾ ತೀರಿ ತಿಂಬುರೈಯಾ3 ಇಲಿಯು ಹೆಗ್ಗಣ ಹೆಚ್ಚಿ ತೋಳ ಬಡಿದು | ದಾಳಿಯಿಟ್ಟವು ಲಂಕಾ ಯೋಧ್ಯದ ನಡುವೆ | ಇಳಿಯೊಳು ಹತ್ತೆಂಟು ಕಾಲ-ವೀಪರಿಯಾ | ತಲಿ ತಲಿಗಿನ್ನು ನಾಯಕರಾಗಿ ಇರಲು 4 ಮ್ಯಾಲೊಬ್ಬ ನಿಂದಲಿ ಸುಖದಲಿ-ರಲಿಕ್ಕೆ | ಕುಲ ಅನ್ಯ ಇಲ್ಲದ ರಾಜೇಶನಾ | ಕಾಲಿಲಿ ಸರ್ವ ಸಂಕರ ವಾಗುತಿರಲು | ಹೊಳೆವನು ಗುರುಮಹಿಪತಿ ಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು