ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿಕ್ಕೆಯಿಲ್ಲ ನಮ್ಮ ಕಡೆಗೆ ಸೊಕ್ಕಿ ಬಂದರಾರೆರು ಚಿಕ್ಕ ಮನುಷ ಕೆಂಚೆಗೌಡ ಠಕ್ಕ ಮುನಿಯ ಭಾವಬಿರಿಯ ಬೆಂಕಿಯಂತೆ ತೋರ್ಪನೊಬ್ಬ ಪರಶುರಾಮನು ಪ ಆನೆಯಲ್ಲಿ ತೇಜಿಯಿಲ್ಲ ಸೇನೆ ಬಹಳವಾಗಿಯಿಲ್ಲ ಹೀನಗೆಟ್ಟು ದಂಡು ಬಂದು ಮಾನಗೊಂಡು ಹೆಣ್ಣುಗಳನು ಭಾನು ಮುಟ್ಟಲೆತ್ತಿ ಆಸಿಯ ದೀನ ಬೇಕು ಬೇಡೆಂದೆಂಬರಿಲ್ಲ 1 ಮನೆಗಳನ್ನು ಹೊಕ್ಕು ಚಾರುವರಿದು ಕೊಟ್ಟ ಕಣ್ಣಿಯ ಸೂರೆಮಾಡಿ ಕಟ್ಟಿಕೊಂಡು ತೆರೆದ ಮನೆಯ ಸುಟ್ಟು ದಾರಿದೆಗೆದು ಹೋಗುವಾಗ ಧೀರರಾಗಿ ನಿಲ್ಲಿರೆಂದು ಎಂಬವರೊಬ್ಬರಿಲ್ಲ ವೋ 2 ಯಾವಜನರ ದಂಡು ಗಂಟು ಹಣದಾಸೆಗಾಗಿ ಮಾಡಿ ದಾವ ಕಡೆಗೆ ಬರುವರೆಂದು ಸೋವ ನೋಡು ತಲ್ಲಿತಮ್ಮ ಜೀವ ದೊಳಗೆ ಜೀವ ವಿಲ್ಲದಾಗಿ ಜನರುಬಾಯಬಿಡಲು ಕೋವಿ ಕತ್ತಿ ಎಂಬುದೊಂದು ಶಬ್ದವಿಲ್ಲ ನಮ್ಮ ಕಡೆಗೆ 3 ಬೀಸಿ ಬೀಸಿ ಕತ್ತಿಯನ್ನು ಸಾಸವನ್ನು ತೋರಿರೋರ ದಾಸೆಗಾಗಿ ಕಂಡ ಜನರ ಮೋಸದಿಂದ ಕಡಿದುಕೊಚ್ಚಿ ಲೇಸುಗಾಣದಾಗಿ ಮತ್ತೆ ಭಾಸೆಯಿಂದ ತಮ್ಮ ತಾವೆ ಮಾರ್ಗವಿಡಿಯೆ4 ಕೆಟ್ಟು ಪ್ರಜೆಯು ನಾಶವಾಗಿ ಸುಟ್ಟು ಮನೆಯು ಮಾರುಬಿದ್ದು ನಿಟ್ಟು ಹಾಳುಸುರಿಯೆ ಪ್ರಜೇಯು ಹೊಟ್ಟೆಗಿಲ್ಲ ದಳಲುತಿಹುದು ಸೃಷ್ಟಿ ಗೊಡೆಯನಾದ ಲಕ್ಷ್ಮೀರಮಣ ಬಲ್ಲನೆಲ್ಲವನ್ನು 5
--------------
ಕವಿ ಪರಮದೇವದಾಸರು
ಅಲ್ಲೇನು ಇಲ್ಲವೋ ಪ ಸಿರಿಯು ಇರುವದೆಂದು ನೀನು ಗರುವದಿಂದ ಹರಿಯ ಮರೆತು ಉರುಳಿ ಪೋಪ ತನುವ ಪೋಷಿಸುತಲಿ ಬಹುತೋಷಿಸೂತಲಿ 1 ಮತಿಯ ತೊರೆದು ಪತಿತನಾಗಿ ಬಾಳ ಬೇಡೆಲೊ ಗತಿತೋರರವರೆಲೊ 2 ಧರಣಿಗೊಡೆಯನಾದ ನಿನ್ನ ಭರದಿ ಯಮನ ಚರರು ಕರೆಯೆ ನೀ ತಿಳಿದು ನೋಡಲೆ 3 ಬನ್ನ ಬಿಟ್ಟು ಲಜ್ಜೆ ಬಿಟ್ಟು ಬಲು ನೀಚನಾದೆಲೊ 4 ಮಂದಮತಿಯೆ ಕೇಳು ನೀನು ಮುಂದೆ ಹಿರಿದು ಬಳಲಬೇಡ ಪೊಂದಿ ಭಜಿಸೊ ರಂಗೇಶವಿಠಲನ ಸುಖವೀವ ದೊರೆಯನ 5
--------------
ರಂಗೇಶವಿಠಲದಾಸರು
ಯಾಕೋ ಕೋಪ ಕೃಷ್ಣಾ ನಿನಗೆ ಎನ್ನ ಮೇಲೆ ಎಲ್ಲ ಸಾಕಬೇಕು ಎಂಬ ನಿಜವಾ ಪ ಲೋಕನಾಯಕನಾದ ಲಕ್ಷ್ಮೀಲೋಲಗೋವಿಂದ ಅನೇಕ ಅವತಾರಗಳೆತ್ತಿದ ಹರಿಯೆ ಮುಕುಂದಾ -------ಜನರೊಳಗಿನ್ನು ಹೀನನ ಮಾಡಿ ಬಿಡಿಸಿ ------------------------------ 1 ತಂದೆತಾಯಿ ಬಂಧು ಬಳಗ ದೈವ ನೀನೆಂದು ಇನ್ನು ಎಂದೆಂದು ಭಕ್ತರ ಸಲಹೊ ಇಂದು ನಿನ್ನ ದ್ವಂದ್ವ ಚರಣಾನಂದದಿಂದ ಹೊಂದಿದವನು ಕಂದನೆಂದು--------- ಅಂದದಿಂದ ಪೊರೆಯದಿರುವದು ಹೇಗೊ 2 ಅಷ್ಟು ಜಗಕಾಧ್ಯಕ್ಷನಾದ ಆದಿಮೂರುತಿ ನಿಷ್ಟ ನೀನು ಶಿಷ್ಟ ಜನರ ಹೃದಯದಿರುತಿ ಇಷ್ಟು ಕಷ್ಟ ಬಡುತ ನಾನು ಇಷ್ಟದಿಂದ ಮೊರೆಯ ಹೊಕ್ಕರೆಸೃಷ್ಟಿಗೊಡೆಯನಾದ 'ಹೊನ್ನವಿಠ್ಠಲ’ ನಿನ್ನ ಇಷ್ಟ ಇಲ್ಲದೆಲ್ಲಾ 3
--------------
ಹೆನ್ನೆರಂಗದಾಸರು
ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ