ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ನರಹರಿಯೆ ಸುಕ್ಷೇಮವ ಪ. ಪರಮಪ್ರಿಯರಿಗೆ ಇತ್ತು ವರ ಸೇವೆ ಕೈಕೊಂಡು ನಿರುತದಿ ಪಾಲಿಸೆನ್ನ ಘನ್ನ ಅ.ಪ. ದಾಸ ಗುರುಕುಲತಿಲಕರಿವರಿಗೆ ನೀನೀಗ ಘಾಸಿಗೊಳಿಸುವುದುಚಿತವೆ ದೋಷದೂರನೆ ಎಮ್ಮ ಮನವನರಿತವ ಜನರ ದೂಷಣೆಗೆ ಗುರಿ ಮಾಳ್ಪರೆ ಘಾಸಿಪಡುತಿಹರ ಆಯಾಸಪಡಿಸುವುದು ಬಹು ಲೇಸಲ್ಲ ನಿನಗೆ ಥರವೆ ಶೇಷಶಯನನೆ ಎಮ್ಮ ಮಾತು ಲಾಲಿಸಿ ಈಗ ಪೋಷಿಸಲಿ ಬೇಕೊ ಸ್ವಾಮಿ ಪ್ರೇಮಿ 1 ಕಲ್ಪತರುವಂತಿಹರು ಶಿಷ್ಯವೃಂದಕೆ ಇವರು ಇಪ್ಪರೋ ಚಂದ ಜಗದಿ ತಪ್ಪದಲೆ ಆಯುರಾರೊಗ್ಯ ಕೊಟ್ಟು ನೀ ಸರ್ಪಶಯನನೆ ರಕ್ಷಿಸೊ ಒಪ್ಪದಿಂದಲಿ ಎಮ್ಮ ಸೇವೆ ಸಫಲವಗೊಳಿಸಿ ಅಪ್ಪ ಸಂತಸವಪಡಿಸೊ ಬಪ್ಪ ಪೋಪ ಕೀರ್ತಿ ಅಪಕೀರ್ತಿ ನಿನ್ನಡಿಗೆ ಪುಷ್ಪದಂತರ್ಪಿಸುವೆನೊ ನೃಹರಿ 2 ಮನವಚನ ಕಾಯದಲಿ ಅನ್ಯ ಬಗೆಯದೆ ಎಮ್ಮ ಗುರುಗಳನು ಸೇವಿಸುವೆವೊ ಚಿನುಮಯನೆ ನೀ ಸಾಕ್ಷಿಯೋ ಮನುಜರಿದನೇನ ಬಲ್ಲರು ಕೇಳು ತಂತಮ್ಮ ಮನ ಬಂದ ತೆರ ನುಡಿವರೊ ಎನಗದರ ಗೊಡವೇನು ನೀನಿರಲು ಭಯವೇನು ಘನ ಮಹಿಮ ಪೊರೆಯೊ ಬೇಗ ಸ್ವಾಮಿ 3 ಪಂಚಪ್ರಾಣರು ಇವರು ವಂಚನಿಲ್ಲದೆ ಪೇಳ್ವೆ ಮುಂಚೆ ನೀ ಕಾಪಾಡೆಲೊ ಸಂಚಿತಾಗಾಮಿ ಪ್ರಾರಬ್ಧ ದುಷ್ಕರ್ಮಗಳು ಮಿಂಚಿನಂದದಿ ಮಾಡೆಲೊ ಸಂಚಿತಾಗಾಮಿಗಳ ಶಿಷ್ಯರಿಗೆ ಕಳೆವರಿಗೆ ಕೊಂಚ ಬಾಧೆಯ ಕೊಡದೆಲೊ ಸಂಚಿತಿತ ಪ್ರದನೆ ಎನ್ನ ಮೊರೆ ಲಾಲಿಸು ಅಚಂಚಲದ ಕ್ಷೇಮವೀಯೋ ದೇವ 4 ಪರಿ ಪ್ರಾರ್ಥಿಸುವೆ ಶ್ರೀ ಪತಿಯೆ ದಯವ ಮಾಡೊ ನಾ ಪೇಳ್ವುದಿನ್ನೇನು ನಿನ್ನ ಸೇವಾದಿಗಳು ಕೃಪೆಯಿಂದ ಗುರುಗಳಿಂದ ಪಾಪ ಪರಿಹರನೆ ನೀ ಕೈಕೊಂಡು ಕೀರ್ತಿಯನು ಈ ಪೃಥ್ವಿಯಲ್ಲಿ ನೆಲಸೊ ಗೋಪಾಲಕೃಷ್ಣವಿಠ್ಠಲನೆ ನೀ ಕಾಪಾಡು ಕಾಪಾಡು ಜಗದ್ರಕ್ಷಕ ಹರಿಯೆ 5
--------------
ಅಂಬಾಬಾಯಿ
ಇಹಸುಖ ಮೊದಲೇಯಿಲ್ಲ | ಕೃಷ್ಣ ಅಹಹ ಪರಸುಖವಾಗುವುದ್ಹ್ಯಾಗೊ ಪ ಸಾಹಸಿನಾನೆನುತ ಜನರ ಮೆಚ್ಚಿಸುವೊಡೆ ಕುಹಕ ಮಾತುಗಳ ಕೂಗಿ ಬಾಯಾರಿದೆ ಅ.ಪ ಶ್ರವಣ ಮನನ ನಿಧಿ ಧ್ಯಾಸನ ವೊಂ- ದೆವೆ ಮಾತ್ರವು ನಿಜವಾಗಿ ಕಾಣೆನುನಾ ಬವನಾಶಿ ಧರಿಸಿ ದಾಸನೆಂದು ನಾ ಬರಿದೆ ದೇಶಗಳ ತಿರುಗಿ ಬೆಂಡಾದೆನು 1 ಯಮನಿಯಮಾಸನ ಯೋಗ | ಗಳ ಭ್ರಮೆಯ ಪಡುತ ಬಳಲುವೆಯಾವಾಗ ಮಮಯೆಂಬುದರಿಂ ಬಂದಿತು ರೋಗ 2 ಶಂಕರ ಮುಖ ಸುರವಂದ್ಯ | ಅರಿ ಶಂಖ ಗದಾಧರ ಶ್ರೀಶ ಮುಕುಂದ ಸಂಕಟ ಬಂದಾಗ ವೆಂಕಟರಮಣೆಂದು ಮಂಕುಜನರು ಪೇಳ್ವಗಾದೆಯಂತಾಯಿತು 3 ಕಾಸಿಗೆ ತಿರುಗಿದೆನಲ್ಲದೆ | ದಿವ್ಯ ಕಾಶಿಗಯಾಯಾತ್ರೆಯ ಮಾಡಿದೆನೇ ಘಾಶಿಪಟ್ಟಿ ಸಾಕು ಸಾಕಿದರ ಗೊಡವೇ 4 ಕೊಟ್ಟದ್ದರೆ ಹರಿಕೊಡುವ | ಯಂ ಕೊಟ್ಟರುವದಕು ಕೊಡದಿರುವದಕೂ ಕೃಷ್ಣ ನೀನರಿಯದೆ ನಾನು ಸ್ವತಂತ್ರನೇ 5 ಕಣ್ಣಿಲ್ಲದ ಚಿಂತೆವಂದು | ಸದಾ ಬನ್ನ ಬಡುವದು ಯೋಚನೆಯೆರಡು ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ- ಕಣ್ಣು ಕೊಟ್ಟು ನಿನ್ನ ಸೇವೆಯ ಪಾಲಿಸೋ 6 ಛಳಿ ಜ್ವರದ ಯಾತನೆ ಪಡುವೆ | ನಿನ್ನ ಕರೆಕರೆ ಪಡಿಸುವುದು ನಿನಗೆ ತರವೇ 7 ಆರು ಜನರ ಸೇವೆ ಕೊಡಿಸೋ | ಯೀ ಆರು ಜನರ ಸಂಘವ ಪರಿಹರಿಸೋ ಮೂರು ಜನದ ಕೂಟ ಮೊದಲೇ ಬಿಡಿಸೋ ತಾಳಲಾರೆಯಿವರು ಬಲು ಕ್ರೂರಾತ್ಮರು 8 ಆಸೆಯ ಪರಿಹರಿಸಯ್ಯಾ | ನಿಜ ದಾಸನೆನಿಸಿ ನೀ ಪಿಡಿಯೆನ್ನ ಕೈಯ್ಯಾ ಈಸಲಾರೆ ಗುರುರಾಮ ವಿಠ್ಠಲ ಜೀಯಾ 9
--------------
ಗುರುರಾಮವಿಠಲ
ಮಾನಹೀನರಿಗೆ ಅಭಿಮಾನವೇಕೆ - ಪ್ರಧಾನಿಯಿಲ್ಲದ ಅರಸುತನವೇಕೆ ಕೃಷ್ಣಾ ? ಪ.ಕಾಡಿನೊಳು ತಿರುಗುವಗೆಕನಕ ಭೂಷಣವೇಕೆ ?ಓಡಿನಲಿ ಉಂಬುವಗೆ ಹರಿವಾಣವೇಕೆ ?ಬೇಡಿದರೆ ಕೊಡದ ಲೋಭಿಗೆ ಬಿಂಕವೇಕೆ ?ಪಾಡಲರಿಯದೆ ಪ್ರೌಡತನವೇಕೆ ಕೃಷ್ಣಾ ? 1ಪತಿ ಮೀರಿ ನಡೆವಳ ವ್ರತ ನೇಮತನವೇಕೆ ?ಸತಿಗಳುಕಿ ನಡೆವವಗೆ ಸ್ವಾತಂತ್ತ್ಯವೇಕೆ ?ಮತಿಗೆಟ್ಟು ತಿರುಗುವಗೆ ಮಂತ್ರ - ತಂತ್ರಗಳೇಕೆ ?ಅತಿಯಾಸೆ ಬಿಡದ ಸಂನ್ಯಾಸಿ ತಾನೇಕೆ 2ಕಾಮವಿಲ್ಲದವರಿಗೆ ಕಾಂತಿಯರ ಗೊಡವೇಕೆ ?ಪ್ರೇಮವಿಲ್ಲದ ಬಂಧು - ಬಳಗವೇಕೆ ?ಸ್ವಾಮಿ - ಶ್ರೀ ಪುರಂದರವಿಠಲ ನೆನೆಯದತಾಮಸದ ಜನರಿಂಗೆ ಕೈವಲ್ಯವೇಕೆ ? 3
--------------
ಪುರಂದರದಾಸರು