ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಕದಾಸರು ಕನಕಾ ನಿನ್ನ ಕೆಣಕಿ ನಾನು ತಿಣಕಲಾರೆನೊ ಕ್ಷಣಕು ಕ್ಷಣಕು ತಿಣಿಕಿ ತಿಣಿಕಿ ದಣಕೊಲಾರೆನೊಅಡಿಗಡಿಗೊಗೆದ ಮುಂಡಿಗೆಯನು ಒಡಿಯಲಾರೆನೊಒಡೆಯಲು ದುಡುಕಿ ದುಡುಕಿ ದಣಿವನು ತಡಕೊಲಾರೆನೊ 1 ಒಡೆಯ ದೇವನೆಂದಟ್ಟಿದ ಕುನಕವ ಮುಟ್ಟಿಲಾರೆನೋ ಮಡಿಯ ದೇವರೆಂದೊದಗಿಸಿದುರಗನ ಬಳಿಯ ಸಾರೆನೋ ಪಾತ್ರೆಯ ಒಳ ಮೈಯ್ಯ ಮಾತ್ರ ತೊಳೆದುದು ತಿಳಿಯಲಾರೆನೋಗೋತ್ರವ ಕೇಳಿ ಸುಸೂತ್ರದೊಳುತ್ತರ ಪಡೆಯಲಾರೆನೋ 2 ಅದಕೊ ಇದಕೊ ಯಾವುದಕೊ ನಾ ಕೆದಕಲಾರೆನೊಗದುಗಿನ ವೀರನಾರಾಣನ ಮರೆಯಲಾರೆನೊ 3
--------------
ವೀರನಾರಾಯಣ
ಮೂರ್ಖ ತಿಳಿವನೆ ಗುರುವೆ ನಿನ್ನ ಬೋಧದ ಸವಿಯ ಅರ್ಕನಾ ತೇಜವನು ಗೊಗೆಯರಿದಪುದೇ ಪ ನೀನೆ ಪರಮಾತ್ಮನಿಹೆ ಎಂದು ನೀ ಬೋಧಿಸಲು ಮಾನವ ನಾನು ಪರಮಾತ್ಮನೆ ಏನಾದರೂ ಪೇಳಿ ಮೋಸಮಾಳ್ಪನು ಎಂದು ಸ್ವಾನುಭವ ಪಡೆಯದಲೆ ನಿನ್ನ ನಿಂದಿಸುವಾ 1 ಕರ್ಮದಾ ಸಂಕಲೆಯ ಕಟ್ಟಿಕೊಂಡಿಹ ಜೀವ ಕರ್ಮ ಕಳೆಯುವ ದಿವ್ಯ ಜ್ಞಾನವರಿಯುವನೇ ದುರ್ಮತಿಯು ದ್ವೇಷಿಸುತ ಬೋಧದಲಿ ಮನವಿಡದೆ ಧರ್ಮವಂತನು ಎಂಬ ಒಣ ಹೆಮ್ಮೆ ಪಡುತಿರುವ 2 ಈ ನಿಂದೆ ಸ್ತೋತ್ರಗಳಿಗೊಳಗಾಗುವವನೆ ನೀ ಸ್ವಾನುಭವಸಂವೇದ್ಯ ಕೇವಲಾನಂದಾ ನೀನೆ ಸರ್ವವ್ಯಾಪಿ ನಿನ್ನ ನಿಂದಿಸಿದೊಡೆ ತಾನು ತನ್ನನು ಬೈದು ದೂರಿಕೊಂಡಂತೆ 3 ಜಗದ ಸುಖಕಾಗಿ ಬಲು ಕಾತರಿಪ ಮನುಜನಿವ ಜಗದಾಚೆಗಿಹ ಪರಮಶಾಂತಿಯರಿಯುವನೇ ಸೊಗಸಾಗಿ ತಿಳಿಯುವೊಡೆ ಜಿಜ್ಞಾಸುವಲ್ಲದೆ ಅಘನಾಶಶಂಕರನೆ ಅನ್ಯರರಿಯುವರೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಙ್ಞÕನವೊಂದೇ ಸಾಕು ಮುಕ್ತಿಗೆ - ಇ - |ನ್ನೇನು ಬೇಕು ಹುಚ್ಚುಮರುಳು ಮಾನವನೆ ಪ.ಪಿತ ಮಾತೆಸತಿ ಸುತರನಗಲಿರಬೇಡ |ಯತಿಯಾಗಿ ಆರಣ್ಯ ಚರಿಸಲು ಬೇಡ ||ವ್ರತ - ನೇಮವ ಮಾಡಿ ದಣಿಯಲು ಬೇಡ |ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ 1ಜಪತಪವನೆ ಮಾಡಿ ಸೊರಗಲುಬೇಡ |ಕಪಿಯಂತೆ ಅಡಿಗಡಿಗೆ ಹಾರಲುಬೇಡ ||(ಉಪವಾಸಪಾಶಕ್ಕೆ) ಸಿಕ್ಕಲುಬೇಡ |ಚಪಲತನದಲೇನು ಫಲವಿಲ್ಲೋ ಮೂಢ 2ಜಾಗರದಲಿ ನಿದ್ರೆ ಕೆಡಿಸಲು ಬೇಡ |ಓಗರವನು ಬಿಟ್ಟು ಒಣಗಲು ಬೇಡ ||ಸೋಗುಮಾಡಿ ಹೊತ್ತು ಕಳಿಯಲು ಬೇಡ |ಗೊಗೆ ಹಾಗೆ ಕಣ್ಣು ತಿರುಗಿಸಬೇಡ 3ಹೊನ್ನು - ಹೆಣ್ಣು - ಮಣ್ಣು ಜರೆದಿರಬೇಡ |ಅನ್ನ - ವಸ್ತ್ರಗಳನ್ನು ತೊರೆದಿರಬೇಡ ||ಬಣ್ಣದ ದೇಹವ ನೆಚ್ಚಲುಬೇಡ |ತಣ್ಣೀರೊಳಗೆ ಮುಳುಗಿ ನಡುಗಲು ಬೇಡ 4ಮಹಾವಿಷ್ಣುಮೂರ್ತಿಯ ಮರೆತಿರಬೇಡ |ಸಾಹಸದಿಂದಲಿ ಶ್ರಮ ಪಡಬೇಡ ||ಕುಹಕ ಬುದ್ಧಿಯಲಿ ಕುಣಿದಾಡಬೇಡ |ಮಹಿಮ ಪುರಂದರವಿಠಲನ ಮರೆಯದಿರೊ ಮೂಢ 5
--------------
ಪುರಂದರದಾಸರು