ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಏಳೆನುತ ಭಾನು ಬರುತಿಹ |ಹೇಳುವರ್ಯಾರಿಲ್ಲ ನಿಮಗೆ ಜ್ಞಾನವ ಪ ಇರುಳೆಲ್ಲ ನೀವಿನ್ನು ವಿಷಯಕೆ ಮರುಳಾಗಿ |ಹರಟಿಯೊಳಗೆ ಸೊರಗುತಿಹರೀ ||ತರಳಾಕ್ಷಿಯರ ಅಂಗಸಂಗಕೆ ಬೆಂಡಾಗಿ |ಬರದ ಆಯುಷ್ಯ ಬರಿದೇ ಕಳೆವಿರೀ 1 ಮಾಡಲಿಲ್ಲವು ಧ್ಯಾನ ಯೋಗ ಜಪ ತಪ |ನೀಡಲಿಲ್ಲವು ದಾನ ಧರ್ಮವ ||ನೋಡಲಿಲ್ಲವು ಸಾಧುಸಂತರ ನಡತೆಯ |ಕೇಡ ಬಂದಿತು ಮುಂದೆ ನೋಡಲು 2 ತಂದೆ ಭವತಾರಕನೆ ಹಿಂದಾದುದಾಗಲಿ |ಮುಂದಾರ ನೀವಿನ್ನು ಒಂದು ನಿಮಿಷವು |ಗೊಂದಲ ಬಿಟ್ಟು ಅರಿತು ಕೊಂಡು | ಹೊಂದಿರಿ ಪೂರ್ಣ ಆನಂದವನೆಂದು 3
--------------
ಭಾವತರಕರು
ಕೃಷ್ಣಲೀಲೆ ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ ಪ ಆನೆ ಬರುತಾದೆ ಎಲ್ಲರು ನೋಡಿರಿ ಒಂ-ದಾನೆಯ ಕೊಂದ ಮದ್ದಾನೆಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿತಾನೇ ತಾನಾಗಿ ಮದ ಸೊಕ್ಕಿದಾನೆಅ ನೀರ ಮುಳುಗಿ ಖಳನ ಕೊಂದು ವೇದ ತಂದುಬರಮದೇವಗಿತ್ತ ಮದ್ದಾನೆಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದಜಾರ ಕೃಷ್ಣನೆಂಬ ಸೊಕ್ಕಿದಾನೆ 1 ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತ್ತಿದೆಕುಸುಮಶರನ ಪೆತ್ತ ಮದ್ದಾನೆದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದದಶರಥಸುತನೆಂಬ ಮದ ಸೊಕ್ಕಿದಾನೆ 2 ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟುಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮಬೆಂಬಿಡದೆ ದೈತ್ಯರನು ಕೊಂದ ಗುಣ ಸಂಪನ್ನಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ 3 ಸಾವಿರ ತೋಳವನ ಸರಸದಿಂದಲಿ ಕಡಿದಭುವನ ರಕ್ಷಕನಾದ ಮದ್ದಾನೆಯೌವನದ ಗೋಪಿಯರ ಕಣ್ಮಣಿ ಎನಿಪ ವಸುದೇವಸುತನೆಂಬ ಮದ ಸೊಕ್ಕಿದಾನೆ 4 ಗರುಡವಾಹನವೇರಿ ಧಿಮಕೆಂದು ಬರುತಾನೆಸರುವ ಲೋಕರಕ್ಷಕನೆಂಬ ಮದ್ದಾನೆಉರೆ ಪೂತನಿಯ ಹೀರಿ ಮಾವ ಕಂಸನ ಕೊಂದಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ 5
--------------
ಕನಕದಾಸ
ಬಾರವ್ವ ಜಗದಂಬೆ ಶರಣೆಂದು ಬಲಗೊಂಬೆ | ಪಾದ ಪದ್ಮ ಪೂಜೆಗೊಳೆ ಸುಖದಿಂಬೆ ಪ ಕೈವಲ್ಯ - ಗತಿ - ದಾಯಿ ಮೂರು ಲೋಕದಾ ತಾಯೀ ಆವಾಗ ನೆನೆವೆ ನಿಮ್ಮ ಅರ್ಥಿಯಿಂದಾತುಕೊ ಬಾಯೀ 1 ಅಷ್ಟದಳ ಗದ್ದುಗೆಯಲಿ ಭಕ್ತಿರಂಗ ಹಾಕಿರಲೀ ಇಷ್ಟೇನು ಜ್ಞಾನದೀಪಾ ಕಟ್ಟಿ ನಿಜದ್ಯಾಸ ಮಾಲೀ2 ವೇದಶಾಸ್ತ್ರಗಳಿಗೆ ಮುನ್ನೆ ಮಹಿಮೆ ತಿಳಿಯದು ಪ್ರಸನ್ನೆ ಸುರರು ನಮೋ ಎನ್ನೆ3 ಅನುವಾಗಿ ನಾಮ ಪಾಡಿ ಗೊಂದಲ್ಹಾ ಕುವೆನುಛಂಧಾ4 ಕೊಂಡಾಡುತಿಹೆ ನಿನ್ನ ಗುರು ಮಹಿಪತಿಜನಾ ಮಂಡಿಮ್ಯಾಲ ಕೈಯನಿಟ್ಟು ಪಾಲಿಸೇ ಅನುದಿನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು