ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸನು ಕಂಡೆನು ಕೇಳೌ ಘನ ಶ್ರೀ ಗುರು ಬಂದು ಶಾಸ್ತ್ರ ತತ್ವವ ಪೇಳ್ದಂ ಮನಸಿನ ಸಂಶಯವಳಿಯಿಸಿ ತನಯಗೆ ರಾತ್ರಿಯೊಳು ತೋರಿದಂ ಸತ್ಪಥಮಂ ಕಂದ ಕನಸನು ಕಂಡೆನು ಕೇಳೌ ಶ್ರೀಗುರುಭರದಿಂ ತಾ ಬಂದೂ ಪ ತನಯನ ಸಂಶಯವಳಿಯಿಸಿ ಪರತರ ಗತಿಯನು ತಾ ಕೊಡುವ ಅ.ಪ ಶ್ರೀಹರಿ ಪೂಜೆಯು ಸ್ತೋತ್ರವು ಚಿಂತನೆ-ಶ್ರೀಹರಿಮಂತ್ರವನೂ ಶ್ರೀಹರಿ ಲಾಂಛನ ಧರಿಸುತ ಸಂತತ ವಿಠಲನ ಭಜಿಸೆಂದು 1 ಬಂಧುರದೇಗುಲ ವರಕ್ಷೇತ್ರದೊಳಾನಂದವನೋಡುತಲೀ ನಿಂದಿಹ ಪರಿಪರಿ ಸಾಧುವೈಷ್ಣವರಿಗೊಂದನೆಮಾಡೆಂದ 2 ಸತ್ಯಪ್ರಬಂಧವು ಅಷ್ಟಾಕ್ಷರಿಜಪತತ್ವ ಸುದ್ವಯಮಂತ್ರ ನಿತ್ಯಹೃದಯದೊಳು ಸೋಹಂಭಾವದಿ ಭಕ್ತಿಯೊಳ್ಬೆರೆಯೆಂದ 3 ವರಮಹದೇವನ ಪುರಶ್ರೀರಂಗನಚರಣವ ಗುರಿಮಾಡೀ ಮರೆಯದೆ ಧ್ಯಾನಿಸು ನಾನೇ ನಿನ್ನನು ಪೊರೆಯುವೆನೆಂತೆಂದ 4
--------------
ರಂಗದಾಸರು
--------ನೆ ಮಾಡುವೆಯಂದರೆ ಅರಸುಳ್ಯ ದ್ವಂದ್ವಪಾದಕೆ ನಾ ವಂದನೆ ಪ ಅಂದು ಜಲದೊಳಾಡಿ ಕೊಂದ ಸೋಮಕನ ವೇದತಂದೂ ------ಗಿತ್ತಾಗೊಂದನೆ ಮಂದರಗಿರಿಯ ನೆತ್ತಿ ಚಂದದಿ --------- ಭೂಮಿ ಮೂಗಿನಿಂದ ಸೀಳಿದ ದೇವಗೆ ವಂದನೆ 1 ತರುಳನಿ ಗೋಸ್ಕರ ಸ್ತಂಭದೊಳಗೆ ಬಂದಾ ನರಹರಿ ರೂಪಗೆ ವಂದನೆ ಮುರುಡನಾಗಿ ದಾನ ಮೂರು ಪಾದವು ಕೇಳಿ ಧರುಣಿಯ ಗೆದ್ದವಗೆ ವಂದನೆ 2 ಪ್ರೇಮಸಲ್ಲದೆ ಪಿತೃವಾಕ್ಯವು ಮನ್ನಿಸಿ ಪಡೆದಮ್ಮನ ಹೊಡೆದಾತಗೆ ವಂದನೆ ತಾಮಸ ದಾನವರಗಳ ಖಂಡಿಸಿದ ಶ್ರೀರಾಮ ದೇವರಿಗೆ ವಂದನೆ 3 ಗೊಲ್ಲರ ಸ್ತ್ರೀಯರ ಕೂಡಿ ಮೆರೆದಾಡುವಂಥ ನಲ್ಲ ಕೃಷ್ಣಗೆ ವಂದನೆ ಎಲ್ಲಾನೂ ತೊರೆದು ಬತ್ತಲಲ್ಲಿ ಇರುವ ನಮ್ಮ ಬೌದ್ಧಾವತಾರಗೆ ವಂದನೆ 4 ಚಲುವ ಅಶ್ವವನೇರಿ ಚರಿಸಿದ ಮಹಾಮಹಿಮ ಕಲ್ಕಿ ಸ್ವರೂಪಗೆ ವಂದನೆ ಸುಲಭದಿ ಭಕ್ತರ ಚನ್ನಾಗಿಸಲಹುವ ಶ್ರೀ ಹೆನ್ನೆ ವಿಠ್ಠಲಗೆ ವಂದನೆ 5
--------------
ಹೆನ್ನೆರಂಗದಾಸರು
ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ನಿಂದೆಯಾಡಬೇಡೋ ಪರ ನಿಂದೆ ಮಾಡಬೇಡೋ ಪ ಇಂದಿರೇಶನಪಾದಗ್ಹೊಂದಿ ಭಜಿಪರಿ ಗೊಂದನೆ ಮಾಡೋ ಅ.ಪ ಕುಂದುವರಿಯಬೇಡೋ ಮನಸೇ ಮಂದನಾಗಬೇಡೋ ಎಂದಿಗಾದರು ಒಂದಿನ ಈ ಜಗ ಕುಂದಿಪೋಗುವ ಭವಬಂಧಕ್ಕೀಡಾಗಬೇಡೋ 1 ಕೋಪಗೊಳ್ಳಬೇಡೋ ಮನಸೇ ಪಾಪಕ್ಹೋಗಬೇಡೋ ಗೌಪ್ಯವಳಿಯಬೇಡೋ ಶಾಪಕೊಳ್ಳಬೇಡೋ ಆ ಪರಬ್ರಹ್ಮನ ಶ್ರೀಪಾದಪಾಡೋ 2 ಸೊಕ್ಕು ಮಾಡಬೇಡೋ ಯಮನ ಲೋಕಕ್ಹೋಗಬೇಡೋ ಏಕಚಿತ್ತದಿ ಲೋಕೈಕ ಶ್ರೀರಾಮನ ಭಕುತಿಂ ಭಜಿಸಿ ಮುಕುತಿಯ ಕೂಡೋ 3
--------------
ರಾಮದಾಸರು