ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

[ದಿತಿಜರಿಗೆದುರಾಂತ] ಕೃತಾಂತಗತಿ ನೀ ನಮಗೆ ಗುಣವಂತ ಹನುಮಂತಪ. ಕೇಸರಿತನಯ ದಕ್ಷಿಣಗಾಗಿ ಬಂದೆ ವ-ರುಷಗಳಿಂದಲಿ ಬಲುಗಿರಿಯನು ತಂದೆಈಶ ರಘುಪತಿ ಸೇವೆ ಘನವಾಗಿ ನಿಂದೆಅಸುರ ರಾವಣನ ಸರ್ವ ಸೈನ್ಯವ ಕೊಂದೆ 1 ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆಕುಬುದ್ಧಿಯ ರಾವಣನ ಪುರವ ಸೂರೆಗೊಂಡೆವಿಬುಧರ ಸ್ನೇಹವ ಮಾಡಿದೆ ಬಲುಗಂಡೆಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ 2 ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ ಪ್ರಿಯವಾದ ಭವತರುವಿನ ಬೇರ ಕಿತ್ತೆಭಯವ ಖಂಡಿಸಿ ನಮಗಭಯವನಿತ್ತೆಜಯಜಯ ಪ್ರಾಣನಾಥ ನಮೋ ನಮಸ್ತೆ 3
--------------
ವಾದಿರಾಜ
ಇಂದು ಶ್ರೀರೂಪವ ಛಂದಾದಿಂದಲಿ ನೋಡುವೆನು ಆನಂದ ಪಡುವೆನು ಪ. ಬಿಳಿಯ ಕುಪ್ಪುಸವಾ ತೊಟ್ಟಳು ನೋಟವ ನೋಡುವಳು 1 ಪಾದಾಕೊಪ್ಪುವ ಋಳಿ ಪೈಜಣಿ ಕಾಲುಂಗರದಂದಾ ಸಾಲಿನೊಳಗೆ ಅಘಾದ ಪರಿಪೂರ್ಣ 2 ಗಳದಿ ಕಠಾಣೆಯಕಟ್ಟಿ ಅದರ ಮೇಲ್ ಗೆಜ್ಜೆಯ ಟೀಕಿ ಪುಥಲಿಸರ ಚಂದ್ರಹಾರಗಳು ವೈಯಾರದಿ ಬರುವೋಳೂ 3 ಮುದ್ದು ಮುಖಕ್ಕೆ ತಕ್ಕ ಮುಖುರೆ ಬುಲಾಕು ದ್ರಾಕ್ಷಝೂಲರ ಬುಗುಡಿಯ ಬೆಳಕು ಆನಂದ ಸುರಿಯೋಳು ಇವಳು ಮನಕ 4 ಚವರಿ ಚಂದ್ರಾ ಜಡಿ ಭಂಗಾರದ ರಾಗುಟಿ ಬೈತಲ ಮುತ್ತನಿಟ್ಟ ಹೇಳ ಭಂಗಾರ ಗೊಂಡೆವ ಕಟ್ಟಿ ಇವಳ್ಯಾರು ಧಿಟ್ಟಿ 5 ಮಂದರ ಮಲ್ಲಗಿ ಸುಗಂಧಿಯು ತ್ಯಾದಿಗಿ ನೂತನದ ಪಾರಿಜಾತವನ್ನು ಇಂದು ತಾಂಬೂಲ ಮೆಲುವುತ ಮುಗುಳು ನೆಗಿಯು ನಗುತ 6 ತರುಣಿಯೆನ್ನದಿರು ಹರಿಯಾ ರೂಪಾವ ವ್ಹಾ ನೋಡು ಛಂದಾಮನ ಕಾನಂದಾ 7 ನೀನು ಶ್ರೀರಂಗನಾಯಕನೆ ಕಾಳಿಂಗಶಯನನೆ ನರಶಿಂಗನೋ 8 ಯೇಷ್ಟುನೋಡಿದರು ಈ ಧಿಟ್ಟ ಮೂರುತಿಯ ದೃಷ್ಟಿ ತಾಕುವ ದಯ್ಯ ಕಾಳಿಯ ಮರ್ಧನ ಕೃಷ್ಣರಾಯಾ 9
--------------
ಕಳಸದ ಸುಂದರಮ್ಮ
ಶ್ರೀನಿವಾಸನೆ ಗಾನಲೋಲನೆ ಸಾನುರಾಗದೊಳೀಕ್ಷಿಸೈ ಜ್ಞಾನಪೂರ್ಣನೆ ಸೂನುವೆಂಬಭಿಮಾನದಿಂ ಪರಿಪಾಲಿಸೈ ಪ. ದೀನಪಾಲಕ ದಾನವಾಂತಕ ದೈನ್ಯದಿಂ ಮೊರೆಹೊಕ್ಕೆನೈ ಜ್ಞಾನಗಮ್ಯನೆ ಭಾನುತೇಜನೆ ನೀನೇ ಗತಿಯೆಂದೆಂಬೆವೈ ಅ.ಪ. ಸಾರಸಾಕ್ಷನೆ ಶ್ರೀರಮೇಶನೆ ಸಾರಿ ಬಾ ಭವದೂರನೇ ಗಾರುಗೊಂಡೆವು ಪಾರುಗಾಣಿಸು ನೀರಜೋದ್ಭವ ಜನಕನೆ ಕಾರ್ಯಕಾರಣ ಕರ್ತೃ ನೀನಹುದಾರಯಲ್ ಜಗದೀಶನೆ ಬೇರೆ ಕಾಣೆವದಾರ ನಿನ್ನನೆÉೀ ಸಾರೆ ಬೇಡುವೆ ದೇವನೆ 1 ಸಾರ ಸಂಗ್ರಹ ಮಾಡುತೆ ಆರ್ಯಕೀರ್ತಿಯ ಸಾರಿಪಾಡುತೆ ವೀರನಾದವ ಗೈಯುತೆ ಭೂರಿ ವೈಭವವೆಲ್ಲವಂ ಧೈರ್ಯದಿಂ ನಲವೇರೆ ಕೀರ್ತಿಸಿ ಕಾರ್ಯಸಿದ್ಧಿಯ ಪೊಂದುವೋಲ್2 ನಿರ್ಗುಣಾತ್ಮನೆ ನಿರ್ವಿಕಲ್ಪನೆ ನಿತ್ಯನಿರ್ಮಲಚರಿತನೆ ಮಾರ್ಗದರ್ಶಕನಾಗಿ ನಮ್ಮೊಳಗಾವಗಂ ಕೃಪೆ ಗೈವನೇ ಸಾರ್ವಭೌಮನೆ ಸರ್ವಶಕ್ತನೆ ಶೇಷಶೈಲ ನಿವಾಸನೇ ಸಾರ್ವಕಾಲದೊಳೋವುದೆಮ್ಮನು ಪಾರ್ವತೀಪತಿ ಮಿತ್ರನೆ 3
--------------
ನಂಜನಗೂಡು ತಿರುಮಲಾಂಬಾ
ಸರಳಕವಿ ರಾಮಾರ್ಯ ಹರುಷದಿ ವಿರಚಿಸಿದ ವರವೆಂಕಟೇಶನ ಪರಮಲೀಲೆಯ ಚರಿತೆಯುನ್ನತ ಕೀರ್ತಿಯಾಂತಿಹುದು ನರರ ಭಕ್ತಿಯ ಪೆರ್ಚಿಸಲ್ಕಿದು ಕರದ ದಿವ್ಯಜ್ಯೋತಿಯಪ್ಪುದು ಬರೆದಕವಿಯಾಸೂರಿವಂಶದ ಶರಧಿಚಂದಿರನು 1 ಭರತಭಕ್ತಿ ಯೆನಿಪ್ಪ ಚರಿತೆಯ ಬರೆದು ತಾನೇ ಭರತನಾಗಿಹ ಪರಿಯ ತೋರುವ ಭಕ್ತಿಬೋಧಕ ಭಾವಭಂಗಿಯಲಿ ಸರಸ ಸರಳತೆ ಲಲಿತಪದಗಳ ಶರಧಿಯಪ್ಪುದು ಕಾವ್ಯಮಿದನಾ ದರದಿ ಮುದ್ರಣಗೊಳಿಸಿ ಹಂಚಿದ ಕವಿಯು ಧನ್ಯನಲೇ 2 ಕವಿ ವಿಶಿಷ್ಠಾದ್ವೈತತತ್ವೋ ದ್ಭವನು ಹರಿಹರ ಭೇದರಹಿತನು ನವರಸಾಲಂಕೃತಯುತ ಗೋಕರ್ಣ ಮಹಿಮೆಯನು ಶಿವನ ಸನ್ನುತಿಗೈದು ರಚಿಸುತೆ ಭುವಿಯ ರಕ್ಷಣೆಗೈವ ಶಿವಕೇ ಶವರ ನಾಮವನೇಕ ವೊಬ್ಬನೆ ದೈವತಾನೆಂಬ 3 ಭಕ್ತಿಕಾವ್ಯಂಗಳನು ರಚಿಸಿಹ ಭಕ್ತನೀತನ ವಹ್ನಿಪುರಕಾ ಸಕ್ತಿಯಾಂತೈತರ್ಪುದೆಂದೆವು ವೇಂಕಟೇಶ್ವರನ ಭಕ್ತಿಬೋಧಕ ಕೃತಿಗೆ ಮಂಗಳ ದುಕ್ತಿಯುತ್ಸವಕಾಗಿ ನಾವತಿ ಭಕ್ತಿ ಸುಸ್ವಾಗತವನೀವೆವು ಕೈಗಳಂ ಮುಗಿದು 4 ಕೃತಿಯ ರಚನೆಗೆ ಮೋಹಗೊಂಡೆವು ಕೃತಿಯನೋದಿಸಿ ಕೇಳಿ ನಲಿದೆವು ಕೃತಿಯ ಬರೆದಾ ಕವಿಯ ಭಕ್ತಿಗೆ ಮನವ ತೆತ್ತಿಹೆವು ಕೃತಿಯ ಕರ್ತಗೆ ಮಣಿದು ಮಹದುಪ ಕೃತಿಯ ಗೈದಿಹಿರೆಂಬುದಲ್ಲದೆ ಕೃತಿಯ ಬರೆದವಗಾವಭಾಗ್ಯವನಿತ್ತು ತಣಿಸುವೆವು5 ಪರಮಭಕ್ತನಿಗಿಂದು ವಂದಿಸಿ ನೆರೆದ ಪಂಡಿತ ಪೌರಸಭಿಕರ ನೇಮಗಳಪೊತ್ತು ಹರಿಯ ಪಾದಂಗಳಿಗೆ ವಂದಿಸಿ ವರಕವಿಗೆ 'ಕವಿರತ್ನ’ ನೆನ್ನುವ ಬಿರುದನೀವೆವು ಸರಳಕವಿವರನಿದನು ಕೈಗೊಳಲಿ 6 ಗಮಕಕೋಕಿಲನೆನಿಪ ಕೌಶಿಕ ನಮಲಕೃತಿವಾಚನವಗೈಯಲು ಅಮಿತಸಂತಸದಿಂದ ವಿವರಿಸುತಂತರಾರ್ಥಗಳ ಕ್ರಮದಿ ಪೇಳಲು ಸೂರ್ಯನಾರಣ ನಮಿತ ಹರ್ಷಾಂಬುಧಿಯೊಳಿಳಿಯುತೆ ರಮೆಯ ರಮಣನ ಪಾದಕೆರಗಿದ ಸರಳಕವಿರತ್ನ7 ಆ ಮಹಾಮುನಿ ಸೂತನಂದದಿ ರಾಮಚರಿತಾಮೃತವ ರಚಿಸುತೆ ಆ ಮಹೇಶ್ವರನಾತ್ಮಲಿಂಗವು ಭೂಮಿಗಿಳಿದಾಕಥೆಯ ಕಾವ್ಯವ ನೀ ಮಹಾಮತಿ ರಚಿಸಿ ಮುಕ್ತಿಯ ಮಾರ್ಗವಿಡಿದಿಹನು8 ಸರಳಕವಿರತ್ನನಾಸೂರಿ ರಾಮಾರ್ಯತಾಂ ವಿರಚಿಸಲಿ ಸದ್ಭಕ್ತಿ ಕಾವ್ಯಗಳನೋರಂತೆ ಸಿರಿಕಾಂತನೀತಂಗೆ ದೀರ್ಘಾಯುರಾರೋಗ್ಯಗಳ ಕುಡಲಿ ಕಡುಕೈಪೆಯೊಳು ನೆರೆ ಗಮಕ ಕಲೆಯ ಸತ್ಕೀರ್ತಿ ವಿಸ್ತರಗೊಳಲಿ ಸಿರಿಗನ್ನಡಂ ಚಿರಂ ಬಾಳ್ಗೆ ಸುಕ್ಷೇಮದಿಂ ವರವಹ್ನಿಪುರದರಸನೆಲ್ಲರಂ ರಕ್ಷಿಸಲಿ ಭದ್ರಂ ಶುಭಂ ಮಂಗಳಂ9
--------------
ಪರಿಶಿಷ್ಟಂ
ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ