ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಬ್ಬವನು ಮಾಡಿದನು ಗುರುರಾಯ ಇಬ್ಬರೊಡಗೂಡಿಸುವದಿಂಗಿತದ ನೆಲೆಯರಿದು ಪ ಶ್ರವಣದಕ್ಷತೆ ಕೊಟ್ಟು ಪರಮಾರ್ಥ ದೌತಣದಿ | ಅವನಿಯೊಳು ಪರಮ ಕರುಣ ಸ್ನೇಹದಿ | ಸುವಿವೇಕ ವೈರಾಗ್ಯ ವೆಂಬ ಜಲ ಸಮಬೆರಸಿ | ತವಕದಲಿ ಮಜ್ಜನವ ಗೈಸಿದನು ಮುದದಿ 1 ಸ್ಥಿರ ಚಿತ್ತ ದಾಸನದಿ ಕುಳ್ಳಿರಿಸಿ ಸದ್ಭಾವ ಬೋಧ ಸುಧೆಯಾ ಪರಿ ಪರಿಯಲುಣಿಸಿ ಅಪರೋಕ್ಷದನುಭವ ಕಲಶ ನೆರೆವಿಡಿಸಿ ಕೈದೊಳಿಸಿ ಭವದೆಂಜಲ ಗೆಳಸೀ 2 ಸಹಜಾವಸ್ಥೆ ತಾಂಬೂಲವನು ಕರದಿತ್ತು | ವಿಹರಿಸುತ ನಿರ್ವಿಕಲ್ಪ ಸಮಾಧಿಯಾ | ವಿಹಿತದುಡುಗೊರೆ ಹೆಗಲಲಿಪೊದಿಸಿ ಪಾಲಿಸಿದ | ಮಹಿಪತಿ ಸ್ವಾಮಿ ನಂದನಗ ದಯ ಬೀರಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿರಿಯ ಒಡೆಯಕಂಡೆನಮ್ಮಾ ಧರಿಯ ಮ್ಯಾಲೊಂದುನಾ ಸಿರಿಯಾ ವರ್ಯನಾದನೀತ ಸಿರಿಯ ಕಾಣೆನಾ ಪ ಶರಣ ಹೃದಯ ಮಾಡದಲ್ಲಿ ಅರಹು ಘಂಟಮಾಲೆ ನವ ಪರಿಯ ಶುಕ್ಯಶಾವಿಗಿಯ ಹರುಷ ಸಕ್ಕರೆ ಪರಮ ಜ್ಞಾನವೆಂಬ ತ್ವರಿತ ದೀವಿಗೆಯ ಕೊಂಡು ಮೆರೆವ ಕೀರ್ತ ಪ್ರೇಮ ಜಘ್ಲ್ಯಡೊಳ್ಳು ಹೊಯಿಸುವಾ 1 ಕಡ್ಡಿ ವಿಡಿದು ಗುಡ್ಡ ಮಾಡಿ ಗುಡ್ಡವನ್ನೇ ಕಡ್ಡಿಮಾಡಿ ಒಡ್ಡಿ ಮಾಯಾಜಾಲದಿಂದ ನೆಲೆಯ ತೋರದೇ ದೊಡ್ಡ ದೊಡ್ಡವರನೆಲ್ಲ ವೆಡ್ಡೆಮಾಡಿ ಬಿಟ್ಟತನ್ನ ಅಡ್ಡ ಸುಳಿದವರ ಕೈಯ್ಯ ದುಡ್ಡನಾರ ಕೊಂಬುರೇ 2 ಚಿನ್ನ ಕೊಂಡವರ ಮೂಲವನ್ನು ಕಿತ್ತಿ ತೋರಿಸುವ ತನ್ನ ನಂಬಿದ್ದವರ ಸ್ಥಾಪನೇ ಮಾಡುವ ಯನ್ನ ಮನೆ ದೈವವಾಗಿ ಧನ್ಯಗೈಸಿದನು ಕೂಡಿ ಉನ್ನತ ಮಹಿಪತಿ ನಂದ ನೊಡಿಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು