ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದ-ಬಂದ _ ಇಂದಿರೇಶ ನಂದನಂದನಾ ನಿಖಿಳ ಜನಕ ಕಂಧರಾಶ್ರಯಾ ಪ ಬಂದ ಬಂದ ಭಜಕ ಬಂಧು ಮಂದರಾದ್ರಿಧರ ಅರ- ವಿಂದನಯನ ಸುಂದರಾಂಗ ಸಿಂಧುಶಯನ ನಳಿನನಾಭ ಅ.ಪ. ನೀಲಮೇಘ ಶ್ಯಾಮಸುಂದರಾತನಿಗೆ ಮೇಲುಸಮರು ಇಲ್ಲವೆನಿಸಿದ ಲೀಲೆಯಿಂದ ಜಗವ ಸೃಜಿಸಿ ಪಾಲಿಸುತ್ತ ಮತ್ತೆ ಅಳಿಸಿ ಆಲದೆಲೆಯಮೇಲೆ ಸಿರಿ ಲೋಲನಾಗಿ ಮೆರೆವ ಕೃಷ್ಣ 1 ಐದು ರೂಪದಿಂದ ಕ್ರೀಡಿಪಾ ಪ್ರಕೃತಿ ಬೋಧ್ಯ ಸಿರಿಗುನಾಥ ನಾಯಕಾ ಆದಿಮಧ್ಯ ಅಂತ್ಯ ಶೂನ್ಯ ಮೋದಪೂರ್ಣ ಜ್ಞಾನಕಾಯ ಮೋದ ಮುನಿಯ ಹೃದಯಸದನ ಗೋಧರಾತಪತ್ರ ಶ್ರೀಪ 2 ಆದಾನಾದಿ ಕರ್ತ ಬ್ರಹ್ಮನೂ ದಿವಿಜ ಸಾಧುಸಂಘ ಸೇವೆ ಗೊಂಬನೂ ವೇದವೇದ್ಯ ವೇದ ವಿನುತ ವೇದ ಭಾಗಗೈದು ಪೊರೆದ ಛೇದ ಭೇದರಹಿತ ಗಾತ್ರ ಸಾಧು ಪ್ರಾಪ್ಯ ಬಾದರಾಯಣ 3 ದಾಸಜನಕೆ ಮುಕ್ತಿನೀಡುವ ಮಹಿ- ದಾಸಕಪಿಲ ಪೂರ್ಣ ಕಾಮನೂ ದೋಷ ದೂರ ನಾಶರಹಿತ ವಾಸುದೇವ ಕ್ಲೇಶವಿದೂರ ಈಶವಿಧಿಗಳನ್ನು ಕುಣಿಪ ಕೇಶವಾದ್ಯನಂತ ರೂಪ4 ಮೊತ್ತಜಗಕೆ ಸತ್ತೆನೀಡುವಾ ನಿಖಿಳ ಸತ್ಯ ಜಗದ ಚೇಷ್ಟೆನಡೆಸುವಾ ಮೊತ್ತಶಬ್ದ ಘೋಷವರ್ಣ ಮತ್ತೆ ಪ್ರಣವ ಮಂತ್ರಗಣದಿ ನಿಖಿಳ ಯಜ್ಞ ಭೋಕ್ತನಾಥ ಅಂಗಭೂತ 5 ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ ವಿಷ್ಣು ಪುರುಷಸೂಕ್ತ ಸುಮೇಯಾ ವಿಶ್ವಕರ್ತ ವಿಶ್ವಭೋಕ್ತ ವಿಶ್ವರೂಪ ವಿಶ್ವಭಿನ್ನ ವಿಶ್ವವ್ಯಾಪ್ತ ಶಶ್ವದೇಕ ತೈಜಸ ಪ್ರಾಜ್ಞತುರ್ಯ 6 ಸತ್ಯಧರ್ಮಗಳನು ಕಾಯುವಾ ದುಷ್ಟ ದೈತ್ಯತತಿಯ ದಮನಗೈಯ್ಯುವಾ ಮತ್ಸ್ಯಕೂರ್ಮ ಕೋಲ ಚರಿತ ಭೃತ್ಯಭಾಗ್ಯ ನಾರಸಿಂಹ ಸತ್ಯಶೀಲ ಬಲಿಯವರದ ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ7 ವಿಶ್ವ ಬಿಂಬನು ರಾ ಜೀವಪೀಠನನ್ನು ಪಡೆದನೂ ರಾವಣಾರಿ ಕೃಷ್ಣ ಬುದ್ಧ ಭಾವಿಕಲ್ಕಿ ನಿತ್ಯಮಹಿಮ ಭಾವಜಾರಿ ಪ್ರೀಯ ಸಖನು 8 ಹಯಗ್ರೀವ ದತ್ತ ಋಷಭನೂ ಅಪ್ರ- ಮೇಯ ಹಂಸ ಶಿಂಶುಮಾರನು ಜಯಮುನೀಂದ್ರ ವಾಯುಹೃಸ್ಥ ಜಯೆಯ ರಮಣ ಕೃಷ್ಣವಿಠಲ ದಯದಿ ಪೊರೆಯಲೆಮ್ಮನೀಗ ಜಯವು ಎನುತ ನಲಿದು ನಲಿದು 9
--------------
ಕೃಷ್ಣವಿಠಲದಾಸರು
ರಕ್ಷಿಸೋ ಶ್ರೀ ವೇದವ್ಯಾಸ | ಬದರಿನಿವಾಸ | ಆಶ್ರಿತ ಜನತೋಷ ಪ ಭೃತ್ಯ ಮತ್ಸ್ಯ | ವ್ಯಕ್ತನಾದನು ಹರಿ ಅವ್ಯಕ್ತ | ಕರೆಸಿದ ಸತ್ಯ | ವತಿಯಸುತ ಗೋಪ್ತ 1 ಕಾಲ ತಾಪ | ಬಟ್ಟರು ಜನ ಪ್ರಲಾಪ |ಶ್ರೀಪತಿ ತಾಳ್ದನು ರೂಪ | ವ್ಯಾಸ ರೂಪ | ದೋಷ ನಿರ್ಲೇಪ |ದ್ವೀಪದೊಳುದಿಸಿತೀರೂಪ | ಯಮುನಾ ಸಮೀಪ | ಪರಾಶರ ಜನೆನಿಪ 2 ಸೂತ್ರ ದಾತ | ಎನ್ನೊಳು ಪ್ರೀತ | ನಾಗು ಭಕ್ತಿ ಪ್ರದಾತ 3 ಜನಿತ | ಸಕಲ ಭಸ್ಮೀಭೂತ 4 ಭೋಗಾದಿಂ ಪ್ರಾರಬ್ಧ ಪೋಗಾಡಿದಂಥ | ಕಾರ್ಯಾಖ್ಯ ಬ್ರಹ್ಮಪ್ರಾಪ್ತ |ಯೋಗೀಜನ ಪ್ರಳಯೇಪಿ ಅಜನ ಪ್ರಾಪ್ತ | ಇತ್ಯಾದ್ಯವಸ್ಥಾದಿಯೊಳ್ಗತ |ಮಾರ್ಗಗಳು ಶೇಷ ಗರುಡಾದಿಯೋಳ್ಗತ | ಈ ಪರೀಯಿಂ ಸಮಸ್ತ |ಯೋಗೀ ಜನಂಗಳಿಗೆ ಆ ಅಜಸಮೇತ | ವಿರಜಾ ಸ್ನಾನ ಪ್ರಾಪ್ತ ||ಸ್ನಾನದಿಂದಲಿ ಲಿಂಗನಾಶ | ಮಾಡುವೆ ಶ್ರೀಶ | ಆದರವರು ನಿರ್ದೋಷ |ಅನಂತರ್ಹರಿ ಉದರ ಪ್ರವೇಶ | ಕೆಲವರು ಶ್ರೀಶ | ಆನಂದವೇ ವಪುಷ |ಜ್ಞಾನಿ ಇನ್ನಿತರರು ತದ್ದೇಶ | ದಲ್ಲಿವಾಸ | ಆನಂದಾನನುಭವ ಶ್ರೀಶ |ನಾನಾ ಪರಿಯೋಗ್ಯರ ಶ್ರೀಶ | ಪ್ರಳಯದಲ್ಲೀಶ | ಧರಿಸುವಸರ್ವೇಶ 5 ಪರಿ ಕಾರಣಂಗಳಿಂದ ನಿನ್ನ | ಇಚ್ಚಾಖ್ಯ ಆವರಣವಪಸಾರಿಸೀ |ತುಷ್ಟೀಯಿಂದಲಿ ಸ್ವಸ್ತಯೋಗ್ಯಸುಖವ | ಅಭಿವ್ಯಕ್ತಿಂಗಳಂ ಗೈಯ್ಯುವಾ |ಲಕ್ಷ್ಣ ಮುಕ್ತಿದ ಮಾಯೆ ಪತಿಯು ಆದ | ಶ್ರೀವಾಸುದೇವನ ದರ್ಶನ ||ವಾಸುದೇವನ ಕಂಡನಂತರ | ಮತಿವಂತರ | ಪೊಗಿಸುವಾಗಾರ |ಶ್ರೀಸಿತ ದ್ವೀಪಾದಿ ಆಗಾರ | ವರ ಮಂದಿರ | ವೈಕುಂಠಾಗಾರ | ಲೇಸಾಗಿ ಸ್ವಯೋಗ್ಯ ಸುಖಸಾರ | ಅತಿಪರತರ | ಅನುಭವಿಪ ವಿಸ್ತಾರ | ಆಶಾಮಾತ್ರದಿ ಸರ್ವ ಸುಖಸಾರ | ಸೃಷ್ಟ್ಯಾದಿ ಇತರ | ಇತ್ತು ತೋಷಿಪೆ ಅವರ 6 ಚಾರು ಕೌಪೀನ ಮದನ ದರ ಪೋಲ್ವಧದನ | ತುಳಸಿಯ ವನ | ಮಾಲೆಗಳ್ಹಸನ |ನಂದನಂದನ ನಿನ್ನ ಕರುಣ | ಗುಣಾಭರಣ | ತೊಡಿಸಯ್ಯ ಪ್ರಧನ 6 ಪ್ರೀಯಾ ಪ್ರೀಯ ಸರ್ವ ವಿಷಯಕೆಲ್ಲ | ನೀನೇ ಮೂಲನೆಂದು ತಿಳಿಸೋ |ಕಾಯಾ ವಾಚಕ ಮಾನಸೀಕ ಸರ್ವಾ | ಕರ್ಮಾದಿಗಳೆಲ್ಲವಾ ||ಜೀಯಾ ನಿನ್ನಯ ಚರಣಕಿತ್ತು ನಮಿಪ | ಬಿಂಬಕ್ರಿಯಾಜ್ಞಾನವಾ ||ರಾಯಾ ನೀನೆನಗಿತ್ತು ಪಾಲಿಸಯ್ಯ ಮುದದೀ | ನಿನ್ನನ್ನು ನಾ ಬೇಡುವೆ ||ತುತಿಪ ಜನರ ಸುರಧೇನು | ಕಾಮಿತವನೆ | ಕರುಣಿಪ ಕಲ್ಪದ್ರುಮನೆ |ಮತಿಗೆಟ್ಟ ಮನುಜನು ನಾನೆ | ನಿನ್ನ ಪಾದವನೆ | ನಂಬಿ ಬಂದಿಹೆ ನಾನೇ |ಹಿತದಿಂದ ನೀನೆನ್ನ ಕರವನೆ | ಪಿಡಿ ಎಂಬೆನೆ | ನಾ ಬೇಡುವೆ ನಿದನೆ |ಅತುಳ ಮಹಿಮ ಜಗದೀಶನೆ | ಮಧ್ವೇಶನೆ | ಗುರು ಗೋವಿಂದ ವಿಠಲನೆ 8
--------------
ಗುರುಗೋವಿಂದವಿಠಲರು