ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಪಂಡರಿವಾಸ ಏಳು ಶ್ರೀ ದೇವೇಶ ಏಳು ಮುಕ್ತ ಗಿರೀಶ ಏಳು ಹೃದೇಶ ಪ. ಏಳು ಮೂಲೋಕದೀಶ ಏಳು ಹೃತ್ಪದವಾಸ ಏಳು ಏಳಯ್ಯ ಶ್ರೀಶಾ ಏಳು ಸರ್ವೇಶಾ ಅ.ಪ. ಗಂಗಾ ಭಾಗೀರಥಿ ತುಂಗಭದ್ರಾ ಯಮುನ ಸಂಗಮ ತ್ರೀವೇಣಿ ಸರಸ್ವತಿ ಸರಯೂ ಮಂಗಳೆ ಚಂದ್ರಭಾಗೆಯೋಳ್ ಕೂಡಿ ಸೇವಿಸೆ ರಂಗಾ ಬಾಗಿಲೋಳ್ ನಿಂತು ಕಾದಿಹಳಯ್ಯ 1 ಪುನಗು ಜವಾಜಿ ಕಸ್ತೂರಿ ಬೆರಸಿದ ಜಲ ನಿನಗೆ ತೈಲವನೊತ್ತಿ ಎರೆವೆನೆಂದು ಕನಕ ರತ್ನದಿ ಭೂಷಿತರಾದ ದೇವ ಕನ್ನಿಕೆಯರು ಕಾದಿಹರೈಯ್ಯ ಲಕುಮಿಪತಿ 2 ಪಂಚಬಾಣನ ಪಿತನೆ ಪಂಚಾಮೃತ ತಂದು ಪಂಚಕನ್ನೆಯರು ಎರೆವೆನೆಂದು ಮಿಂಚು ಕೋಟಿಯತೇಜಾಭರಣ ಪೀತಾಂಬರ ಪಂಚ ರೂಪಗೆ ಉಡಿಸಿ ಶೃಂಗರಾಗೈಯುವರು 3 ಕಸ್ತೂರಿ ತಿಲಕವು ಕನಕಾಂಬರದ ಶಾಲು ಸುತ್ತಿದ ಮುಂಡಾಸು ಶೃಂಗರಿಸಿ ಮತ್ತೆ ಕಾಸಿದ ಹಾಲು ಹಣ್ಣು ಸಕ್ಕರೆ ಕೊಟ್ಟು ಎತ್ತಿ ಬೆಳಗುವ ಮುತ್ತಿನಾರುತಿ ವಿಠಲ 4 ಪಾಪರಹಿತ ಏಳು ಪಾವನ್ನ ರೂಪ ಏಳು ಗೋಪಾಲಕೃಷ್ಣವಿಠಲ ಹರಿ ಏಳು ಶ್ರೀಪದ್ಮಭವಮುಖರಾಪಾರ ಮುನಿಗಳು ರೂಪ ನೋಡಲು ಇಲ್ಲಿ ಕಾದಿಹರೇಳಯ್ಯ5
--------------
ಅಂಬಾಬಾಯಿ
ಭಾರತೀರಮಣ ಸದ್ಭಕ್ತ ಬಂಧೋ ಭವ ಭಯ ಪರಾಭವಗೈಸು ಬೇಗ ಪ ಲೋಕಾಂತರಾತ್ಮಕನೆ ಈ ಕಮಲಜಾಂಡದೊಳು ನೀಕೈಯ ಪಿಡಿದು ಕೃಪಾವಲೋಕನದಿಂದ ಜೋಕೆ ಮಾಡುವುದೆನ್ನ ಮೈನಾಕಿವರಜನಕ 1 ಅನಿಲ ಎನ್ನವಗುಣಗಳೆಣಿಸಲು ಕಡೆಯುಂಟೆ ಕೊನೆಗೆ ನೀನೆ ಗತಿಯೋ ಅನಿಮಿಷೇಶಾ ಜನನಿ ಜನಕ ಭ್ರಾತ ಜನಪ ಗುರುವರ ಮಿತ್ರ ಎನಗೆ ನೀ ಸಕಲ ಸೌಖ್ಯದನೆಂದು ಪ್ರಾರ್ಥಿಸಿದೆ 2 ಹನುಮ ಭೀಮಾನಂದ ಮುನಿರಾಯ ನಿನ್ನ ಪ್ರಾ ರ್ಥನೆ ಗೈಯುವರು ವಾಣಿ ಫಣಿಪ ಮೃಡರು ಅನಿಮಿತ್ತ ಬಾಂಧವ ಶ್ರೀ ಜಗನ್ನಾಥ ವಿಠ್ಠಲನ ತನಯ ತಾವಕರ ಬಂಧನವ ಮೋಚನ ಮಾಡೋ 3
--------------
ಜಗನ್ನಾಥದಾಸರು
ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ ತಿರುನಾಮದವರೆನಲು ನಂಬಬಹುದೇ ಪ ಪರವಾಸುದೇವನನು ಮರೆತು ಸತಿಸುತರ ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ ಹರಿನಿವೇದನಕಾಗಿ ಕರದಿ ಫಲಪುಷ್ಪಗಳ ತರುವವರು ದಕ್ಷಿಣೆಯ ಇರಿಸಿಹರೋ ಎಂದು ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ ದರಿತಾಗ ಕೋಪ ನಿಷ್ಠುರ ಗೈಯುವರು 1 ಈಶಾಯನಮಃ ಓಂ ಶ್ರೀಶಾಯ ನಮಃ ಪ ರೇಶಾಯ ನಮಃ ಎಂಬುದಕೆ ಬದಲು ಆಶೋತ್ತರವನಾಂತು ಕ್ಲೇಶಪೂರಿತರಾಗಿ ನಾಶವಾಗಲಿ ಕುಡದಜನರೆಂಬರಕಟಾ 2 ಮಾನವೋತ್ತಮ ಮಾತ್ರ ತಿರುನಾಮಧಾರಿ ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹೊನ್ನು ಹೆಣ್ಣು ಮಣ್ಣು ಮಾಯೆಯದು ಮೂರು ರೂಪಗಳ ನಾನು ಪೇಳುವೆನು ಹೊನ್ನು ಹೆಣ್ಣು ಮಣ್ಣು ಎಂಬ ಮೂರವುಗಳ್ ಅವುಗಳನು ಹಂಬಲಿಸಿ ಕೆಡಬೇಡ ಮರುಳೆ ನೀನ್ ಅವುಗಳೇ ಮೃತ್ಯುವಿನ ಕಡೆಗೊಯ್ಯುವವುಗಳ್ 52 ಕಷ್ಟದಿಂ ಸೃಷ್ಟಿಯಲಿ ನಗ್ನತೆಯೆ ಸುಂದರವು ಕಷ್ಟದಿಂ ಮರಣದಲಿ ನಗ್ನತೆಯ ದೇಹ ಕಷ್ಟವಿಕ್ಕ್ಕೆಡೆಗಳಲಿ ನಾಸ್ತಿಸುಖ ಮಧ್ಯದಲಿ ಕನಕ ಕನಕವದೆಂದು ಹೊನ್ನ ಪೇಳುವರು53 ಮೋಹಿನಿಯು ತಾನಾಗಿ ದ್ಯೆತ್ಯರನು ವಂಚಿಸಿದ ಮೋಹಿನಿಯು ತಾನಾಗಿ ರುದ್ರ ವಂಚಿತನು ಮೋಹಿನಿಯು ತಾನಾಗಿ ಸುಂದೋಪಸುಂದ ವಧೆ ಮೋಹಿನಿಯು ಪೆಣ್ಣು ಮೋಸವದಲ್ತೆ ಮನುಜ? 54 ಮಣ್ಣಿನಿಂದಲೆ ಹರಿಯು ದೇಹವನು ಸೃಷ್ಟಿಸುವ ಮಣ್ಣೆ ಅನ್ನವದಾಗೆ ಪಾಲಿಸುವ ನಮ್ಮ ಮರಣಕಾಲದಲದುವೆ ಮಣ್ಣನಪ್ಪುವದು ತಿಳಿ ಮಣ್ಣಿಗಾಗಿಯೇ ನೀನು ಹಂಬಲಿಪೆಯೇಕೆ 55 ಪ್ರಾಣದೇವರೆ ನಿನ್ನ ಉಸಿರಾಟ ಕಾರಣರು ಪ್ರಾಣನುಸಿರಾಟವದು ಯಾರಿಂದಲಹದು? ಅವನೆ ಪರಮಾತ್ಮ ತಿಳಿ ದೇವಾಧಿದೇವನವ ನಿನ್ನ ಬಾಳಿಗೆ ಕಾರಣರು ಇಬ್ಬರಹರು56 ಸೂರ್ಯದೇವನು ನೇತ್ರತತ್ವಕ್ಕೆ ಒಡೆಯನವ ಸೂರ್ಯನದು ಕಣ್ಣು ಯಾರಿಂದ ತೋರುವುದು? ಅವನೆ ಪುರುಷೋತ್ತಮನು ಪರಮಾತ್ಮ ಹರಿಯವನು ಆ ವಿಶ್ವರೂಪಿಯೇ ವಿಶ್ವಧಾರಕನು57 ವಾಸದಿಂ ಬೆಳಗಿಸುವ ಕಾರಣದಿ ಭಗವಂತ ವಾಸುದೇವಾತ್ಮಕನು ಸೃಷ್ಟಿಮೂಲನವ ವಸುದೇವಪುತ್ರನಾಗವತರಿಸಿ ಸಿರಿವರನು ಉಡುಪಿಯಲಿ ಪೂಜೆಗೊಂಬನು ನಿಜವ ಪೇಳ್ವೆ 58 ಕೃತಯುಗದ ಭಾರ್ಗವನು ತ್ರೇತೆಯಲಿ ದಾಶರಥಿ ದ್ವಾರಪದ ಕೃಷ್ಣ ನೀನೇಯಿರುವೆ ದೇವಾ ಮಧ್ವವರದನು ನೀನು ಭಾರ್ಗವನ ನೋಡಲ್ಕೆ ಉಡುಪಿಗೇ ಬಂದಿರುವೆ ಪರಮಾತ್ಮ ನೀನು 59 ಪರಶುರಾಮ ಕ್ಷೇತ್ರ ಶ್ರೀಕೃಷ್ಣನ ಕ್ಷೇತ್ರ ಪದ್ಮನಾಭಕ್ಷೇತ್ರ ಶಂಕರಕ್ಷೇತ್ರ ಹಲವಾರು ದೇವತೆಗಳಿಲ್ಲಿ ನೆಲೆಗೊಳ್ಳುತ್ತ ಪಾವನವ ಗೈಯುವರು ಭೂಮಿಯನ್ನಿದನು 60 ತುಲೆಯಲ್ಲಿ ತೂಗಿದಾಗುತ್ತಮವದದರಿಂದ ತುಲು ದೇಶವಿದು ಜಗದಿ ವಿಖ್ಯಾತವಹುದು ತುಲು ಲಿಪಿಯೆ ಸರ್ವಮೂಲ ಗ್ರಂಥ ಲೇಖನಕೆ ವೇದಾದ್ರಿಯಾಯಿತಿದು ವೇದಾಂತಭೂಮಿ 61 ಮಧ್ಯಗೇಹದ ಭಟ್ಟರಿಂ ಸೇವೆಯ ಪಡೆದು ವಾಯುದೇವೋತ್ತಮನ ಮಗನಾಗಿ ಕೊಡಿಸಿ ಸಜ್ಜನರ ಹೃದಯದಲಿ ಮುಖ್ಯ ತತ್ವವ ತಿಳಿಸೆ ಸರ್ವಜ್ಞ ಮೂರ್ತಿಯನು ತಂದಿರುವೆ ದೇವಾ62 ಪರಶುರಾಮನ ರೂಪದಿಂ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದ ನೀನು ಅವನ ಹೃದಯವ ಪೊಕ್ಕು ಮಧ್ವಮತವನು ನೀನು ಪಸರಿಸಿದೆ ಹರಿಯೆ 63
--------------
ನಿಡಂಬೂರು ರಾಮದಾಸ