ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಉತ್ಸವಗೀತೆ ಕೋಲುವ ನೋಡುವ ಬನ್ನಿ ಶ್ರೀರಂಗನಾಯಕಿಯ ಕೋಲುವ ನೋಡುವ ಬನ್ನಿರೆಲ್ಲ ಪ ಚಪ್ಪರವನು ಶÀೃಂಗರಿಸಿ ಪಟ್ಟುಪೀತಾಂಬರದ ಮೇಲೆ ಕಟ್ಟುಗಳಿಂದ ವಿಸ್ತರಿಸಿ ಕದಳಿಯಕೊನೆ ಕಬ್ಬು ತೆಂಗಿನ ಫಲಗಳ ವಿಧವಿಧವಾಗಿ ಶೃಂಗಾರ ಮಾಡಿದರು 1 ಭಾದ್ರಪದ ಕನ್ಯಾಮಾಸದಲ್ಲಿ ಶುದ್ಧಪಾಡ್ಯದಲ್ಲಿ ಭದ್ರೆ ಶ್ರೀರಂಗನಾಯಕಿಯು ಬಂದು ಮಜ್ಜನವನು ಮಾಡಬೇಕೆನುತಲೆ ಮೂದ್ರ್ವಾರಮಧ್ಯದಲಿ ತಾ ನಿಂದಳು 2 ತಂದು ಹರವಿದರು ಬತ್ತವ ವಿಸ್ತಾರವಾಗಿ ತಂದಿಟ್ಟು ಕರ್ಪೂರಬಟ್ಟಲುಗಳು ತುಂಬಿ ಕಲ್ಪೋಕ್ತ ದಿಂದಲೆ ಪೂಜೆಯ ಮಾಡಿದರು 3 ಎಂಭತ್ತೊಂಬತ್ತು ಬಟ್ಟಲಲ್ಲಿ ಇರುವ ಉದಕವನು ರಂಭೆಗಭಿಷೇಕವ ಮಾಡೆ ಗಂಧವ ಅಂಬೆ ಶಿರದೊಳು ಧರಿಸಿ ಪೂಮಾಲೆಯ [ಸಂಭ್ರಮದಿ]ಧರಿಸಿ ನಿಂದಳು ದೇವಿ 4 ಸುಖನಿಧಿ ಪದ್ಮಾನಿಧಿಗೆ ಹಣ್ಣಿನ ಹರಿವಾಣವ ಶಂಕೆ ಇಲ್ಲದೆ ಭಕ್ತರು ಪಿಡಿದು [ನಿಂತಿರುವ] ಶಂಖನಾದವು ತಾಳಮೇಳ ವಾದ್ಯಗಳಿಂದ ಪಂಕಜಮುಖಿಗಭಿಷೇಕವ ಮಾಡಿದರು 5 ಪುಷ್ಪದ ಮಂಟಪದಲ್ಲಿ ಪುರುಷೋತ್ತಮನ ಒಪ್ಪವಾದ ಅಶ್ವವ ತಂದಿರಿಸಿದರು ಆನಂದದಿ ಕಲ್ಪೋಕ್ತದಿಂದಲೆ ಪೂಜೆ ನೈವೇದ್ಯವ ಮಾಡಿ ಒಪ್ಪುವ ಕಂಕಣವನು ಕಟ್ಟಿದರಾಗ 6 ರತ್ನದ ಕಿರೀಟವಿಟ್ಟು ಲಲಾಟದಲ್ಲಿ ಮತ್ತೆ ತಿದ್ದಿದ ಕಸ್ತೂರಿಬಟ್ಟು ರತ್ನದ ಪದಕವು ಇಟ್ಟು ಕೊರಳೊಳು ಇಂದಿರೆ ವಂದಾಳು 7 ಮಧ್ಯದ ಕೊಟ್ಟಿಗೆಯಲ್ಲಿ ವಿಪ್ರರು ಕೈಕಟ್ಟಿ ನಿಂದು ಸೇವೆಯ ಮಾಡುತಿರಲು ಅರ್ತಿ ಯಿಂದಲೆ ಧೂಪದೀಪ ನೈವೇದ್ಯದಿ ಲಕ್ಷ್ಮೀ ದೇವಿಗೆ ಪೂಜೆಯ ಮಾಡಿದರು 8 ಭೇರಿ ದುಂದುಭಿ ವಾದ್ಯಗಳಿಂದ ತಾಳಮೇಳವು [ನಾರಿಯರ] ರ ಸಾಲುಗಳಿಂದ ಬಾಣ ಬಿರುಸು ಮತಾಪು ಅಗರುಬತ್ತಿ [ಗಳ ನಡುವೆ] ನಾರಾಯಣನರಾಣಿ ಕೋಲುವಿನಲ್ಲಿ 9 ಛತ್ರಿಚಾಮರ ಸೂರೆಪಾನ ಪಿಡಿಯೆ ಮದ ಹಸ್ತಿಗಳು ಮಾಡುವ ಸಲಾಮು ಸುತ್ತಿ ದೀವಟಿಗೆಯು ತುತ್ತೂರಿ ನಾದವು ಮತ್ತಧಿಕಾರಿಗಳು ಮಂಟಪದಲಿ 10 ಆರುದಿವಸದಲ್ಲೊರೆಗೊಂಡು ಪಾನುಪಟ್ಟಿಯು ಸೂರ್ಯಚಂದ್ರರು ಮುತ್ತಿನಬಟ್ಟು [ಆ]ರಾಗಟೆಹೆರಳು ಭಂಗಾರಗೊಂಡೆಗಳಿಟ್ಟು ವ ಯ್ಯಾರದಿಂದಲೆ ಬಂದಳು ಮಂಟಪಕೆ 11 ಸಪ್ತದಿನದಲಿ ಲಕ್ಷ್ಮೀದೇವಿಗೆ ಉತ್ರಾಜಿಮಾಲೆ ಹಸ್ತವಡಗೆ ಹರಡಿವಂಕಿ ದಕ್ಷಿಣ ಹಸ್ತದಿ ರತ್ನದಹಂಸವು ವಾಮ ಹಸ್ತವ ಮೊಣಕಾಲಿನೊಳಿಟ್ಟಳು 12 ಅಂದುಗೆ ಗೆಜ್ಜೆ ಮುಂಗೈಮುರಾರಿ ಉಂಗುರವು ಕುಂದಣದ ಪಾಗಡವಿಟ್ಟು ಹಿಂದಿನತೋಳಿಗೆ ಬಂದಿ ತಾಯಿತನಿಟ್ಟು ಕುಂದಣದ ಮಂಟಪದಲಿ ಕುಳಿತಳು 13 ಅಷ್ಟಮ ದಿವಸದಲ್ಲಂದು ಸೃಷ್ಟಿಗಿರೀಶ್ವರಿಗೆ ಕಟ್ಟಿದರು ಕಲ್ಕೀತುರಾಯಿ ದೃಷ್ಟಿಯಬಟ್ಟು ರತ್ನದ ಕುಂಡಲ [ಇಟ್ಟು] ಮತ್ತರಗಿಣಿಯನು ಮಾತಾಡಿಸುತ 14 ಮುಕ್ತಿದಾಯಕಿಗೆ ಮೂರು ಪಾವಡೆಯನುಡಿಸಿ ಮತ್ತೆ ವಡ್ಯಾಣವನಿ[ಡಲು] ರತ್ನದ ಹಸ್ತದಿ ಅಭಯವ ಕೊಡುತ [ನಿಂತಳು] ಮೊರ್ನೋಮಿಯ ಮಂಟಪದಲ್ಲಿ 15 ಮುಂದೊಂಭತ್ತು ದಿನದಲ್ಲಿ ರಂಭೆರಂಗನಾಯಕಿಯು ಮಿಂದು ಮಡಿಗಳ ತಾನುಟ್ಟು ಚಂದದಿ ನೈವೇದ್ಯವ ಭಕ್ತರಿಗಿತ್ತು ಬಂದು ಆಸ್ಥಾನದಿ ನಿಂದಳು ದೇವಿ 16
--------------
ಯದುಗಿರಿಯಮ್ಮ
ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ ಶ್ರೀಕಾಂತ ಮಂಗಳ ಮೂರುತಿ ವರದೇವಾ ಪ ಶ್ರೀಮಣಿಮೌಳಿ ಮಸ್ತಕದ ಕಸ್ತುರಿಯ ಲ ಲಾಮವೆಸೆವ ವರ ಫಣಿಯಾ ಭ್ರೂಮಧ್ಯದೊಳೆಳೆವರೆಯಂತೊಪ್ಪುವ ನಾಮದ ಪಿರಿನೊಸಲಾ1 ತಾಮರಸಾಯತನೇತ್ರದಾನತಸು ಕ್ಷೇಮಾಂಕುರದ ನೋಟದ ಚಾಮೀಕರ ಕುಟ್ಮಲ ನಾಸಿಕದಭಿ ರಾಮ ಸುಮೌಕ್ತಿಕದಾ2 ಮಾ ಮನೋಹರ ಚುಬುಕಾಗ್ರದ ನವಪಲ್ಲ ವಾ ಮಿಳಿತಾಧರದ ಸೋಮವದನದೆಳನಗೆಯೂ ಪೊಳೆವಟ್ಟ ಕೌಮುದಿಯಾ ಸೊಗಸಿನಾ 3 ರಾಮಣೀಯಕವದನ ಮಕರಕುಂಡಲದ ಸು ರಾಮಯದ ಕದಪಿನ ಕಾಮನೀಯ ಕಂಬುಕಂಠದ ಸಿರಿತುಳ ಸೀ ಮಂದಾರಮಾಲೆಯ 4 ಜೀಮೂತ ಸವಿಯನೆ ರಂಜಿಪ ಸು ಶ್ಯಾಮಲ ರುಚಿರಾಂಗದ ಕಮಲ ಕಂಬು ನಿ ಸ್ಸೀಮ ಚಕ್ರಾಯುಧಂಗಳಾ 5 ಶ್ರೀಮೆರೆವುರದ ಶ್ರೀವತ್ಸಕೌಸ್ತುಭ ದಿ ವ್ಯಾಮೋದ ಗಂಧ ಲೇಪದ ಸೌಮಾನಜಂ ತಾಳ್ದುಪವೀತದ ಮಣಿ ಸ್ತೋಮಾಭರಣಂಗಳಾ 6 ಸಾಮಾಜಿಕರ ಸನ್ನಿಭ ರಂಜನದು ದ್ದಾಮ ಸುಬಾಹುಗಳಾ ನೇಮಿತಾಂಗದ ತೋಳಬಂದಿ ಕಂಕಣಮುಂ ಗೈಮುರಾರಿ ಮುದ್ರೆಯಾ 7 ಐಮೊಗದಹಿಯ ತೆರದ ಕರಕಮಲದ ಸೈಮಿರುಪಂಗುಲಿಗಳಾ ರೋಮಾವಳಿಯ ಪೊಳೆವ ಪೊಡೆವಲರ ಪಿ ತಾಮಹಮುದಿತ ನಾಭಿಯಾ 8 ಹೇಮಾಂಬರದಸಿಮಧ್ಯದ ಕಾಂಚೀ ಧಾಮದ ಕಟಿತಟದ ಪ್ರೇಮಿತ ಊರುಗಳ ಸಜಾನುಗಳ ಮುದದಿಂ ತಾಳ್ದ ವಾಮಜಂಫೆಯ ತೊಡರಿನ ಪೊಂಗೆಜ್ಜೆಗಳ9 ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ ಶೋ ಮಹಿಮೆಯ ಚೆಲ್ವಿನಾ ಪ್ರೇಮದೊಳಾನತರಂ ಸಲಹುವ ಸುರಪುರ ಮ - ಹಾಮಾತೆ ಲಕ್ಷ್ಮೀಪತಿ ಪಾದಪದ್ಮದ 10
--------------
ಕವಿ ಲಕ್ಷ್ಮೀಶ