ಒಟ್ಟು 6 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೇನಿನಗಂದೆನೋ ಬಿಡದೆ ಪವ ಮಾನ ಪಾಲಿಸೋ ಎನ್ನನು ಪ ದೀನರ ಪಾಲಿಪ ದಾನವಾಂತಕ ಎನ್ನ ಜ್ಞಾನಾನಂದದ ನಾಮ ಧ್ಯಾನವಗೈದೆನೊ ಅ.ಪ ಶರಧಿ ಲಂಘಿಸಿ ರಘು ವರನ ಕುಶಲವಾರ್ತೆಧರೆಜಾತೆಗೆ ಅರುಹಿ ದಶಾಶ್ಯನ ಪುರವ ದಹಿಸಿದಂಥ ಪರಮಸಮರ್ಥನೆಂದರಿತ ಕೊಂಡಾಡಿದೆನಲ್ಲದೆ || ತರು ಚರುವರನೆಂದಿನೆ | ಶಿರದಿ ಕಲ್ಲು ಧರಿಸಿ ತಂದವನೆಂದಿನೆ | ಬ್ರಹ್ಮಾಸ್ತ್ರಕೆ ಭರದಿ ಸಿಲ್ಕಿದಿ ಎಂದೆನೆ ಭಕ್ತೀಲಿ ಭಾವಿ ಸರಸಿಜಾಸ್ರನನೆಂದು ಸ್ಮರಿಸಿದೆನಲ್ಲದೆ 1 ಕೃತಯುಗದಲಿ ಕುಂತಿಸುತನಾಗಿ ಜನಿಸುತ ಪತಿ ಪಿತನಂಘ್ರಿ ಭಜಿಸುತಲಿ ಕ್ಷಿತಿ ಭಾರಕೆ ಖಳ ತತಿಯ ಸಂಹರಿಸಿದಾ ಪ್ರತಿಮಲ್ಲ ನೀನೆಂದು ಸ್ತುತಿಸಿದೆ ನಲ್ಲದೆ ಖತಿವಂತ ನೀನೆಂದಿನೆ ದುನುಜಾತೆಗೆ ಪತಿಯಾದವನೆಂದಿನೆ ಅವಳ ಕೂಡಿ ಸುತನ ಪೆತ್ತವನೆಂದನೆ ಯಾಮಿನಿಯಲಿ ಸತಿಯೆನಿನದವ ನೆಂದೆನೇ ನಿನ್ನನು ಬಿಟ್ಟು ಗತಿನಮಗಿಲ್ಲೆಂದು | ನುತಿಸಿದೆ ನಲ್ಲದೆ 2 ನಡುಮನಿಸುತನಾ ಪೊಡವಿಯೊಳಗೆ ಪುಟ್ಟ ಉಡುಪಿ ಕ್ಷೇತ್ರದಿ ಶಾಮಸಂದರನ ಧೃಡವಾಗಿ ಸ್ಥಾವಿಸಿ | ಜಡ ಕುಮಾಯ್ಗಳಗೆದ್ದ ಸಡಗರ ಮುನಿಸುತನಾಗಿ ಪೊಡೆವಿಯೊಳಗೆ ಪುಟ್ಟ ಉಡುಪಿ ಕ್ಷೇತ್ರದಿ ಶಾಮಸುಂದರನ ಧೃಡವಾಗಿ ಸ್ಥಾಪಿಸಿ | ಜಡ ಕುಮಾಯ್ಗಳಗೆದ್ದ ಸಡಗರ ಮುನಿ ಎಂದು ನುಡಿದೆನಲ್ಲದೆ ಹುರಳಿಮೆದ್ದ ಬಡದ್ವಿಜ ಶಿಶುವೇದಿನೆ | ಎತ್ತಿನ ಬಾಲ ಪಿಡಿದೋಡಿ ದವನೆಂದಿನೆ | ಬೆಸರದಿಂದ ಮಡದಿ ಬಿಟ್ಟವ ನೆಂದಿನೆ ಕಡಿಗೆ ಬೋರಿ ಗಿಡವ ಸೇರಿದಿ ತೋರೆಂದು ಅಡಿಗಳಿಗೆರಗಿದೆ ನಲ್ಲದೆ 3
--------------
ಶಾಮಸುಂದರ ವಿಠಲ
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಒಂದು ದಿನ ರುಕ್ಮಿಣಿಯ ಮಂದಿರಕೆ ಶ್ರೀಕೃಷ್ಣಅಂದ ಮಾತನುಕೇಳಿನೊಂದು ರುಕ್ಮಿಣಿ ತಾನುಅಷ್ಟ ಲಕ್ಷ್ಮಿಯರೊಳು ಅಧಿಕಳು ನೀನೆಂದುಎಷ್ಟು ಜನ್ಮದಿ ತಪವಗೈದೆನೊ ನಾ ಕಾಣೆ
--------------
ಗೋಪಾಲದಾಸರು