ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕರುಣೆಗೈದೆ ನಳಿನಾಕ್ಷ ಪ ಈ ನಿನ್ನ ಭಕ್ತನೊಳೇನು ಮಮತೆಯೋ ನಿನಗೆ ಅ.ಪ. ಹಿಂದೆ ಬಲಿಯು ತಾ ಯಜ್ಞವ ಮಾಡಲು ಇಂದ್ರ ಪದವು ಪ್ರಾಪ್ತಿ ನಿನ್ನಿಂದಲ್ಲದೆ ಇಂದು ಆ ಪದವಿಯನತಿಯುಕ್ತಿಯಿಂದಲಿ ಸಂದೇಹವಿಲ್ಲದೆ ಸೂರೆಗೈದವ ನೀನೆ 1 ಪರಮ ವಿದ್ವಾಂಸರನು ಧೈರ್ಯಶೀಲರನು ನೆರೆಮೋಹಗೊಳಿಸುವುದೈಹಿಕ ಭಾಗ್ಯವು ಪರಮ ಕಾರುಣ್ಯದಿಂದೊಲಿದು ನೀನಿವನನು ಸಿರಿಮೋಹದಿಂದಲಿ ಪಾರುಮಾಡಿದೆ ದೇವ 2 ನೀನಿಂದು ಗೈದುದು ಪರಮೋಪಕಾರವು ನಾನದರೊಳು ಲೇಶದೋಷವೆಣಿಸನಯ್ಯಾ ಶ್ರೀನಿಧಿ ಕರಿಗಿರೀಶನೆ ನಿನ್ನ ಚರಣಕ್ಕೆ ಆನಮಿಸುವೆನಿಂದು ದೀನವತ್ಸಲ ಸ್ವಾಮಿ 3
--------------
ವರಾವಾಣಿರಾಮರಾಯದಾಸರು
ಏನು ಸುಕೃತವೋ ಮಧುರಾ ನಗರಕೆ ಪ ಗಾನಲೋಲ ಹರಿ ತಾ ನೆಲೆಸಿಹುದು ಅ.ಪ ವರ ವಿಭವಗಳುಳ್ಳ ಪುರಗಳಂತಿರಲು ಪರಮ ಪುರುಷ ಹರಿ ವಿರಾಜಿಸುತಿರಲು 1 ಭೂಪ ನಗರಗಳಿಗೀ ಪರಿಯುಂಟೆ ಗೋಪಾಲಕ ಹರಿ ಕಾಪಾಡುತಿಹುದು 2 ಸುಮನಸಪುರವಾದ ಅಮರಾವತಿಗುಂಟೆ ಕಮಲನಯನ ಹರಿ ಸಮಾಗಮವು ಸದಾ 3 ದಿವಿಜರೊಡೆಯ ಹರಿ ಭುವಿಯಲಿ ಅರಿಸಿ ಅವತರಿಸುತ ತನ್ನ ಪ್ರವಾಸಗೈದುದು 4 ನಿರುಪಮ ಆನಂದಪೂರ್ಣ ಪ್ರಸನ್ನನು ಪರಿಪರಿ ವಿಧದಲಿ ವಿರಾಜಿಸುತಿರಲು 5
--------------
ವಿದ್ಯಾಪ್ರಸನ್ನತೀರ್ಥರು
ನಿನಗಿದುಸರಿಯೆ ನನ್ನ ದೊರೆಯೆ ಪ ದಯಮಾಡೋ ದಾನವಾಂತಕನೆ ಅ.ಪ ಮಾಯಾಧಾರಿಯೇ ನಿನ್ನಂ ಬಲ್ಲೆನೇಳೆಲೋ ಜಾಣಾ ಪ್ರೀಯರಿಲ್ಲದೆ ನನ್ನ ಪ್ರಾಣಮಳಿವೋದು1 ಬರಿಯ ಮಾತಿನೊಳೆನ್ನಂ ಬೆರಗುಮಾಡಲಿ ಬೇಡಾ ಸುರತಕೇಳಿಗಾಗಿ ಬರಮಾಡಿದೆನು ನಿನ್ನ 2 ವಾಸವಾರ್ಚಿತ ಹರಿ ದಾಸಾ ತುಲಶೀರಾಮಾ ಆಶೆಯ ತೋರಿ ನೀ ಮೋಸಗೈದುದು3
--------------
ಚನ್ನಪಟ್ಟಣದ ಅಹೋಬಲದಾಸರು