ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷ ಪರ್ಯಂಕ ಶಯನ ವಿಷಯದಭಿ ಲಾಷೆ ಪರಿಹರಿಸಿ ಕಾಯೋ ಪ ರೆನದೆ ಮನೆಮನೆ ತಿರುಗಿದೆ ಅನಿಮಿಷೋತ್ತಂಸ ನಿನ್ನ ಪಾದವೊಂ ದಿನ ಭಜಿಸಿದವನಲ್ಲವೋ 1 ಹರಿ ಗುರುಗಳನು ನಿಂದಿಪ ನೀಚರನು ಸರಿಸಿ ಅವರನು ಸ್ತುತಿಸಿದೆ ಪೊರೆಯಲೋಸುಗ ಉದರವ - ಜನರಿಂದ ಹರಿದಾಸನೆನಿಸಿಕೊಂಡೆ 2 ಭಗವಂತ ನಿನ್ನ ಗುಣವ ವರ್ಣಿಸದೆ ಭಗವತಿಯರವಯವಗಳಾ ಸೊಗಸಿನಿಂದಲಿ ವರ್ಣಿಸಿ ಎನ್ನ ನಾ ಲಗೆ ಎರಡು ಮಾಡಿಕೊಂಡೆ 3 ಸರ್ವಪ್ರಕಾರದಲ್ಲಿ ಹಗಲಿರುಳು ದುರ್ವಿಷಯಕೊಳಗಾದೆನೋ ಶರ್ವಾದಿ ವಂದ್ಯ ಚರಣಾ ನೀನೊಲಿ ದುರ್ವಿಯೊಳು ಸಲಹ ಬೇಕು 4 ಉಪರಾಗ ಪರ್ವಗಳಲಿ ಸ್ನಾನ ಜಪ ತಪ ಅನುಷ್ಠಾನ ಜರಿದು ನೃಪರ ಮಂದಿರವ ಕಾಯ್ದು ಧನವ ತಂ ದುಪ ಜೀವಿಸಿದೆನೊ ಜೀಯಾ 5 ವೇದ ಶಾಸ್ತ್ರಾರ್ಥಗಳನು ತಿಳಿದು ಸ ನ್ಮೋದ ಬಡದಲೆ ಕುಶಾಸ್ತ್ರ ಓದಿ ಪಂಡಿತನೆನಿಸಿದೆ ಕೀರ್ತಿ ಸಂ ಪಾದಿಸಿದೆ ವ್ಯರ್ಥ ಬಾಳಿದೇ 6 ವೈರಾಗ್ಯ ಪುಟ್ಟಲಿಲ್ಲ ಘೋರ ಸಂ ಸಾರದೊಳು ಮಗ್ನನಾದೆ ಸೂರಿಗಳ ಮಧ್ಯದಲ್ಲಿ ಬುಧನಂತೆ ತೋರುವೆನು ನೋಳ್ಪ ಜನಕೆ 7 ನಾ ಮಾಡ್ದ ಪಾಪರಾಶಿ ಎಣಿಸಲ್ಕೆ ತಾಮರಸಭವಗಸದಳ ಸ್ವಾಮಿ ಎನಗೇನು ಗತಿಯೋ ಭಾರವಾದೆ ಈ ಮಹಿಗೆ ಪ್ರತಿದಿನದಲೀ 8 ಭೂತ ಸಂಬಂಧದಿಂದ ಬಹುವಿಧದ ಪಾತಕವೆ ಸಮನಿಸಿದವೋ ದಾತೃನೀ ಕಡೆ ಗೈದಿಸೋ ಭವದಿ ಜಗ ನ್ನಾಥ ವಿಠ್ಠಲ ಕೃಪಾಳೋ 9
--------------
ಜಗನ್ನಾಥದಾಸರು
ನಿನಗೆ ತಿಳಿದಂತೆ ಮಾಡುವದಯ್ಯ ಬೇಡೆನಲು |ಯನಗೆ ಸ್ವಾತಂತ್ರ್ಯವುಂಟೇ ||ಮನಸಿಜಪಿತ ನಿನ್ನ ಮೀರಿ, ಸಿರಿ, ವಿಧಿ,ಶರ್ವ|ತೃಣ ಮುರಿಯೆ ಶಕ್ತರಲ್ಲಾ ಹರಿಯೇ ಪಅಪಮಾನ ಮಾಡಿಸೊ ಕೋಪವನೆ ಹೆಚ್ಚಿಸೊಕೃಪಣತನದಲ್ಲಿರಿಸೊ |ಅಪಹಾಸಗೈದಿಸೋ ಡಾಂಭಿಕದವನೆನಿಸೋಉಪವಾಸದಲ್ಲೇ ಇರಿಸೊ |ಕೃಪೆಯುಳ್ಳ ನರನೆನಿಸೋ ಮಾನವೆಗ್ಗಳ ಕೊಡಿಸೊಚಪಲ ಬುದ್ಧಿಯನೆ ಕಲಿಸೊ |ಅಪರಾಧವನೆ ಹೊರಿಸೊ ಬಲು ಭಯವ ತೋರಿಸೋತ್ರಿಪುರಾಂತಕರ್ಚಿತ ಪದ ಹರಿಯೇ 1ಬೈಸು ಬೈದಾಡಿಸೊ ಬಾಂಧವರನಗಲಿಸೊಹೇಸಿಕೆಯು ಲಜ್ಜೆ ತೋರಿಸೊ |ಗ್ರಾಸವನೇ ಉಣಿಸೋ ನರರಾಲಯವ ಕಾಯಿಸೋಕ್ಲೇಶನಿತ್ಯದಲಿ ಬಡಿಸೊ |ಆಶೆಯನು ಜರಿಸು ಕೈಕಾಲುಗಳ ಕುಂಠಿಸೊದೋಷಕ್ಕೆ ಮನವಂಜಿಸೋ |ವಾಸುದೇವನೆ ನಿನ್ನ ವ್ರತವ ಮಾಡಿಸುವಂದುದೇಶ ಬಹುಕಡೆಗೆ ತಿರುಗಿಸೊ ಹರಿಯೇ2ಕವನಗಳ ಪೇಳಿಸೊಕರ್ಮಬಾಹಿರನೆನಿಸೊಭುವನದೊಳು ಭಂಡನೆನಿಸೊ |ಕವಿಸು ಅಜ್ಞಾನವನು ಸನ್ಮತಿಯ ಪ್ರೇರಿಸೊಕಿವಿ ಮಾತ್ರ ದೃಢದಲಿರಿಸೋ |ಜವನ ಸದನದ ಪೊಗಿಸೋ ಬಂಧಾನದೊಳಗಿರಿಸೊತವ ದಾಸರೊಳು ಕೂಡಿಸೊ |ದಿವಿಜರೊಲ್ಲಭ ನ್ಯಾಯವನ್ಯಾಯವನೆಮಾಡುಭವಪಂಕದೊಳು ಮುಳುಗಿಸೋ ಹರಿಯೇ 3ಹೆತ್ತವರ ಸೇವೆ ಮಾಡಿಸೊ ನೀಚರ ಬಳಿಯತೊತ್ತು ಕೆಲಸವ ಮಾಡಿಸೋ |ಚಿತ್ತ ಚಂಚಲಗೊಳಿಸೊ ವೈರಾಗ್ಯ ಪುಟ್ಟಿಸೊಉತ್ತಮರ ನೆರೆಯಲಿರಿಸೊ |ಮುತ್ತಿನಾಭರಣಿಡಿಸೊ ತಿರುಕೆಯನೆ ಬೇಡಿಸೊವಿತ್ತಸಂಗ್ರಹ ಮಾಡಿಸೊ |ಮುತ್ತೆಗೊಲಿದಿಹನೆ ವಿಷ ಕುಡಿಸೊ ಅಮೃತವುಣಿಸೊಮತ್ತೊಬ್ಬರಾರು ಗತಿಯೋ ಹರಿಯೇ 4ಸಾಲಗೊಯ್ಯನಮಾಡುಕಂಡ ಕುಲದಲಿ ತಿನಿಸುಕೀಳು ಮನುಜರ ಪೊಂದಿಸೋ |ನಾಲಿಗೆಗೆಡಕನೆನಿಸೊ ಸತ್ಯ ವಚನಿಯು ಎನಿಸೊಸ್ಥೂಲ ಪುಣ್ಯವ ಮಾಡಿಸೋ |ಕೇಳಿಸೋ ಸಚ್ಛಾಸ್ತ್ರ, ನೀತಿಯರಿಯನು ಎನಿಸೋಆಲಯದಿ ಸುಖದಲಿರಿಸೋ |ಮೂಲೋಶ ಪತಿಯೆಹರಿಕುದುರೆಯೇರಿಸೊ ಮತ್ತೆಕಾಲು ನಡಿಗೆಯಲೆ ನಡೆಸೊ ಹರಿಯೇ 5ಅರಸು ಪದವಿಯ ಕೊಡಿಸೊಕಾಷ್ಠಭಾರವ ಹೊರಿಸೊಪರದೂಷಣೆಯ ಮಾಡಿಸೊ |ಮರ್ಯಾದೆಗಳು ತಿಳಿಸು ಅತಿಮೂಢನೆಂದೆನಿಸೊನಿರುತ ರೋಗದಲಿ ಇರಿಸೋ |ಕರೆಕರೆಯ ಹಿಂಗಿಸೊ ದಿವ್ಯ ವಸನವನುಡಿಸೊಸುರಗಂಗಿ ತಡಿಯೊಳಿರಿಸೊ |ಪರಮಾತ್ಮನೆ ವಂಧ್ಯನೆನಿಸೊ ಸುತರನ್ನೆ ಕೂಡೊಮರಿಸೋ ದುರ್ವಿಷಯಗಳನೂ ಹರಿಯೆ6ಮಾಕಾಂತ ಪ್ರಾಣೇಶ ವಿಠಲ ನೀನಿತ್ತುದಕೆಶೋಕಿಸಲು ಸಲ್ಲದಯ್ಯ |ಆ ಕುಂಭೀಪಾಕ ಮೊದಲಾದ ನರಕದೊಳೆನ್ನಹಾಕಿದರೂ ಒಳಿತೆ ಜೀಯಾ |ಈ ಕಲಿಯುಗದಿಪಂಚಭೇದತಿಳಿಯದ ದೈತ್ಯರಾಕುಲದೊಳಿರಿಸಬೇಡ |ಶ್ರೀ ಕಾಳೀಕಾಂತನರ್ಚನೆ ಸರ್ವ ಕಾಲದಲಿಬೇಕುಬಿನ್ನಪಲಾಲಿಸೋ ಹರಿಯೇ 7
--------------
ಪ್ರಾಣೇಶದಾಸರು