ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಸೊಬಗಿದೇನೊ ಶ್ರೀಹರಿ ವಿಭವ ಚನ್ನಕೇಶವಾ ಪ ಸತಿ ಸಿರಿದೇವಿಯು ಅತಿ ಚಂಚಲೆಯು ಸುತಮದನ ತಾನನಂಗನೂ ಸುತೆ ಬಾಗೀರಥಿ ವಕ್ರಮಾರ್ಗಳೋ ಅತಿಶಯ ಮೈದುನ ಕ್ಷಯರೋಗಿ 1 ಇರುವ ಮಂದಿರವು ಸಾಗರ ಮಧ್ಯವು ಉರಗನ ಮೇಲೆ ಪವಡಿಸಿಹೆ ಗರುಡನೇರಿ ಗಗನದಿ ತಿರುಗಾಡುವೆ ನೆರೆ ತುಲಸಿಯ ಮಾಲೆಯ ಹಾಕಿರುವೆ 2 ದಾನಕೊಟ್ಟವನ ಭೂಮಿಗೆ ತುಳಿದೆ ಧ್ಯಾನ ಗೈದವನ ಶಿರವರಿದೆ ಮಾನಿನಿ ಕೊಟ್ಟ ಸವಿಫಲಭಂಜಿಸಿ ಕೂರ್ಮ ವರಹನು ನೀನಾದೆ 3 ಹೀಗಿದ್ದರೂ ಸತ್ಸತಿಸುತ ಬಾಂಧವ ಭೋಗ ಭವನ ಭಾಗ್ಯಗಳಿತ್ತು ರಾಗದಿ ರಕ್ಷಿಪೆ ಶರಣರ ನಿರುತವು ಭಾಗವತಪ್ರಿಯ ಜಾಜಿಕೇಶವಾ 4
--------------
ಶಾಮಶರ್ಮರು
ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ನೀನಿರುವುದನು ಕಾಣದವನು ಪ ಮಾನವ ನಾನು ಧ್ಯಾನವರಿಯದ ನರನು ನಾನಾಪರಾಧಗಳ ಮಾಡಿದವನು ಅ.ಪ ಬೆಣ್ಣೆ ಹಾಲಿನೊಳುಂಟು ಎಣ್ಣೆ ಎಳ್ಳಿನೊಳುಂಟು ಕಣ್ಣರಿಯದಗ್ನಿಯು ಶಮಿಯೊಳುಂಟು ಮಣ್ಣಿನಲಿ ಜಲವುಂಟು ಜಲದಿ ಲವಣಗಳುಂಟು ನೀನೆಲ್ಲರೊಳಗುಂಟು ಎಂದೆಂಬುದರಿಯದ 1 ವೇದಶಾಸ್ತ್ರಪುರಾಣ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಮಾಡಿದವನಲ್ಲ ಆದಿ ಕೇಶವಪಾದ ಪೂಜೆಗೈದವನಲ್ಲ ಆದರಿಸಿ ಕಾಯಯ್ಯ ನೀ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನಸಿನ ಮಲಿನವ ಮನಸೀಜನೈಯನೆ ಹನನ ವೈದಿಸದಿರೆ ಬದುಕುವ ದೆಂತೊ ಪ ವನಜ ಸಂಭವ ಜನಕ ತನುಮನ ಪ್ರೇರಕ ಮಾನವ ನಾನು ಶರಣುಹೊಕ್ಕೆನೈಯ ಅ.ಪ ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ ದೀನಜನಮಂದಾರ ಕರುಣೋದಾರ ಮಹಿಮನೆ ಮಾನಮತ್ತವಮಾನ ನಿನ್ನಾಧೀನ ವಲ್ಲವೆ ತನುಮನೇಂದ್ರಿಯ ನಾಥ ನಾಯಕ ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1 ನೋಡಬಾರದ ನೋಟ ನೋಡಿ ಆಯಿತು ಜೀಯ ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2 ಮುಂದು ಮಾಡುತ ಹಿಂದೆ ಇಂದು ಕಂದನಲ್ಲವೆ ನಾನು ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ ಎಂದಿಗಾದರು ಸಾಧ್ಯವಾಹುದೆ ನನಗೆ ತಂದೆ ಜಯಮುನಿವಾಯು ಹೃದಯಗ ನಂದಮಯ ಶ್ರೀ ಕೃಷ್ಣವಿಠಲ ನಿಖಿಳ ವಿಶ್ವಕೆ ಕುಂದುಮಯ ಅಭಿಮಾನ ಮನಸಿಗೆ ತಂದಿಡದೆಯೆಂದೆಂದು ಸಲಹುತ ಕುಂದು ಗೈದವನೆಂದು ನುಡಿಯದೆ ಪಥ 3
--------------
ಕೃಷ್ಣವಿಠಲದಾಸರು
ಹನುಮ ವರದ ವಿಠಲ | ಪೊರೆಯ ಬೇಕಿವಳಾ ಪ ಗುಣಪೂರ್ಣ ಶ್ರೀ ಹರಿಯ | ದಾಸ್ಯಕಾಂಕ್ಷಿಪಳಾ ಅ.ಪ. ವಿನಯ ಸದ್ಗುಣ ಭರಿತೆ | ಸುಜನಾಳಿಸೇವೇಷ್ಟೆಅನಿಲಮತ ಸದ್ಭೋದೆ | ಗಾನಂದ ಜಾತೇಅನಲಾಕ್ಷಾ ಸಖ ಹರಿಯ | ಗಾನಕಲೆ ಚತುರೆ ಎಂದೆನಿಸಿರುವ ಈ ಕನ್ಯೆ | ಮಣಿಯ ನೀ ಪೊರೆಯೋ 1 ಪಾದ | ವೈಕುಂಠ ರಮಣ 2 ಸಲ್ಲಲಿತ ಸನ್ಮಾರ್ಗ | ದಲ್ಲಿ ವಿಹರಿಸುವಂಥವಲ್ಲಭನ ದೊರಕಿಸುತ | ನಲ್ಮೆಯಿಂದಿವಳಾಸಲ್ಲಿಸೊ ಮನದಾಶೆ | ಮಲ್ಲಮರ್ಧನ ಕೃಷ್ಣಾಚೆಲ್ವ ಹಯಮುಖಹರಿಯೆ | ಪ್ರಾರ್ಥಿಸುವೆ ದೇವಾ 3 ಪತಿ ಗೊಡೆಯಾಶೌದ್ದೋದನೀಯ ಮತ | ಪ್ರಧ್ವಂಸಗೈದವನೆಬುದ್ದಾವತಾರಿ ಹರಿ | ಉದ್ದರಿಸೊ ಇವಳಾ 4 ಜೀವ ಅಸ್ವಾತಂತ್ರ್ಯ | ಭಾವದಲಿ ನಿಲ್ಪಪರಿದೇವ ನೀ ಗೈಯುತ್ತ | ಭಾವುಕಳ ಪೊರೆಯೊ
--------------
ಗುರುಗೋವಿಂದವಿಠಲರು