ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯವೆಂದು ಶರಣೆನ್ನಿ ಹನುಮಯ್ಯಗ | ಜಯ ಭೀಮಶೇನಾನಂದ ತೀರ್ಥರೇಯಗ ಪ ಆದಿಲಿ ಅಂಜನಿ ಉದರದಲಿ ಬಂದಾ | ಸಾದರ ರಘುಪತಿ ಸೇವೆಯಲಿ ನಿಂದಾ | ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ | ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ 1 ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ ಅರಸ ಯುಧೀಷ್ಠಿರನಾ ವಾಸಿಯ ತಂದಾ2 ಮೂರನೇ ರೂಪದಿ ಮಧ್ಯಗೇಹದಿ ಬಂದಾ ನೆರೆ ಬಾದರಾಯಣನಾಜ್ಞೆಲಿ ನಿಂದಾ ವರವರದ್ಹೇಳಿದ ತತ್ಪಾರ್ಥ ಛಂದಾ ಗುರುವರ ಮಹಿಪತಿ ನಂದನ ಮನಕಾನಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿತ್ಯ ಶುಭಮಂಗಳಂ ಪ ಚಾರು ಮರಕಟರೂಪ ತಾಳಿದಾ ಮೂರ್ತಿಗೆ ಚೋರ ದಶಕಂಠನನು ದಣಿಸಿದವಗೆ ನೀರಜಾಮುಖಿಗೆ ಮುದ್ರೆಯಿತ್ತ ಕಪಿವರಗೆ ಶ್ರೀರಾಮ ಧ್ಯಾನದೊಳು ತತ್ಪರಾದವಗೆ 1 ನೀಚ ಠಕ್ಕನ ಹಿಡಿಂಬಕನೊರಸಿದಾ ಬಲಗೆ ಕೀಚಕರ ಕಿರ್ಮೀರ ಬಕಕಾಲಗೆ ನಾಚಿ ನೀರೊಳು ಪೊಕ್ಕು ಕುರುಪತೀಯಂತಕಗೆ ಆ ಚಕ್ರ ಸೇವೆಯಲಿ ನಿರತನಾದವಗೆ 2 ಜಗವನುದ್ಧರಿಪ ಬುದ್ಧಿಯ ತಾಳ್ದಯತಿವರಗೆ ಮಗುವಾಗಿ ಮಧ್ಯಗೇಹದಿ ಜಾತಗೆ ನಿಗಮ ಗೋಚರ ಶ್ರೀ ನರಸಿಂಹವಿಠಲನ ಭಕುತಿಯನು ಬೇಡಿ ಅಜಪದ ಪಿಡಿದ ಹರಿಗೇ 3
--------------
ನರಸಿಂಹವಿಠಲರು
ನಿನ್ನ ದಾಸರ ದಾಸ ನಾನಯ್ಯ-ಹರಿ- ಯನ್ನನುಪೇಕ್ಷಿಪರೇನಯ್ಯ ಪ ಕಾಮಕ್ರೋಧಗಳಿನ್ನೂ ಬಿಡಲಿಲ್ಲ-ನಿನ್ನ- ಪ್ರೇಮವೆನ್ನೊಳುಕಾಲಿಡಲಿಲ್ಲ ತಾಮಸಬೀಜವ ಸುಡಲಿಲ್ಲ1 ಆಚಾರದಲಿ ಕಾಲಗತಿಯಿಲ್ಲ-ಬಲು-ನೀಚರ ಸಂಗಕೆ ಮಿತಿಯಿಲ್ಲ ಪ್ರಾಚೀನ ಕರ್ಮಕ್ಕೆ ಚ್ಯುತಿಯಿಲ್ಲ-ಇದ- ಗೋಚರಪಡಿಸುವ ಮತಿಯಿಲ್ಲ 2 ದೇಹದಿ ಬಲವಿಲ್ಲವಾದರೂ-ವ್ಯಾ- ಮೋಹವು ಬಿಡದಲ್ಪವಾದರೂ ಗೇಹದಿ ಸುಖವಿಲ್ಲದಿದ್ದರು-ಈ ಸೋಹಮೆಂಬುದಕಿಲ್ಲ ಬೆಸರು 3 ದಾಸರ ಸಂಗದೊಳಾಡಿಸು-ಹರಿ-ವಾಸರವ್ರತದೊಳು ಕೂಡಿಸು ವಾಸುದೇವನೆ ನಿನ್ನ ಪಾಡಿಸು-ಸಿರಿವಾಸನಾಮದ ಸವಿ ಯಾಡಿಸು4 ಶರಣವತ್ಸಲನಹುದಾದರೆ-ಘನ-ಕರುಣಾರಸನಿನಗುಳ್ಳರೆ ವಿಠಲ ನೀನೆ ನಮ್ಮದೊರೆ 5
--------------
ಸರಗೂರು ವೆಂಕಟವರದಾರ್ಯರು