ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದರೆ ನೋಡು ಮಾತಾಡು ತಾಯಿಗಳೆಂದು ನೋಡಿ ಭ್ರಮಿಸಲು ಬೇಡ ಪರಸತಿಯರ ಪ. ದಾರಿಯೊಳು ಭಯವೆಂದು ಚೋರರೊಳು ಪೋಗುವರೆ ಗೇರುಬೀಜದ ತೈಲ ಲೇಪಿಸುವರೆ ಅರಣ್ಯ ಮಧ್ಯದಲಿ ಮೃಗವಿರಲು ತುರಗವೆಂ ದೇರುವರೆ ಪರಸತಿಯ ಪಾಪಿ ಮನವೆ 1 ಹಸಿಯ ಯಕ್ಕೆಯಕಾಯಿ ನಸುಗುನ್ನಿ ತುರುಚೆಯನು ತೃಷೆಗೆ ಮೆಲುವರೆ ವ್ಯಸನ ದೋರಿತೆಂದು ವಿಷವ ಸೇವಿಸಿದಂತೆ ನೋಡಿ ನೀ ಪರಸತಿಯ ವಿಷಯಕೆಳಸುವುದೇಕೆ ಪಾಪಿ ಮನವೆ 2 ಪ್ರೀತಿಯಿಂದಲಿ ಸತಿಯ ಮನೆಗಾಗಿ ಯಿಂದ್ರನತಿ ಕಾತುರದಿ ಪೋಗಿ ಮೈತೂತಾದನು ಸೀತೆಗೋಸುಗವಾಗಿ ರಾವಣನು ತಾ ಕೆಟ್ಟ ಸೋತು ದ್ರೌಪದಿಗೆ ಕೀಚಕ ಕೆಟ್ಟನು 3 ********************4 ಕೆಟ್ಟವರದೃಷ್ಟವಿನ್ನೆಷ್ಟು ಹೇಳಿದರೇನು ಬಿಟ್ಟು ಬಿಡುವರೆ ತಮ್ಮ ಕೆಟ್ಟ ಗುಣವ ಕಟ್ಟಿನೊಳಗಿಟ್ಟು ಉತ್ಕøಷ್ಟ ಜನಗಳ ಸಂಗ ಕೊಟ್ಟು ಸಲಹಯ್ಯ ಅಚಲಾನಂದವಿಠಲ 5 * ನುಡಿ 4 ಸಿಕ್ಕಿಲ್ಲ
--------------
ಅಚಲಾನಂದದಾಸ
ಯಾಕೆ ಮರುಳಾದೆ ಹೀಂಗೆ ಎಲೆ ಮನವೆ ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ. ಧನದಾಸೆಯನು ಮರಿ ಮನುಮಥನ ಬಾಣಕಳುಕದಿರು ತೊಳಲದಿರು ನೆಲದಾಸೆಗೆ ನೀನದರ ಅನುವರಿತು ಹರಿಯ ಸ್ಮರಿಸು ಮನವೆ 1 ಅನ್ಯರಾಗುಣ ದೋಷಯಣಿಸದಲೆ ನಿನ್ನಿರವ ನೋಡು ಕಂಡ್ಯಾ ಮನವೆ ಬಂಣಗಾರಿಕೆಯು ಬರಿದೆ ಔದಂಬ್ರ- ಹಣ್ಣಿನಂತೀ ಕಾಯವು ಮನವೆ 2 ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ ಭ್ರಮೆಗೊಂಡು ಬಳಲಾದಿರೋ ಕಮಲಪತ್ರಕ್ಕೆ ಒಳಗಿನ ಜಲದಂತೆ ನೆಲಕೆ ನಿರ್ಲೇಪನಾಗೋ ಮನವೆ 3 ಈ ದೇಹ ಸ್ಥಿರವಲ್ಲವೊ ಕಾಲನಾ ಬಾಧೆಗೋಳಗಾಗದಿರೋ ಮನವೆ ಭೇದ ದುರ್ಗುಣವ ತ್ಯಜಿಸು ನೀ ಗೇರುಬೀಜದಂದದಿ ತಿಳಿಯೊ ಮನವೆ 4 ಮಾಡು ಹರಿಸೇವೆಯನ್ನು ಮನದಣಿಯೆ ಬೇಡು ಹರಿಭಕ್ತಿಯನ್ನು ಕೂಡು ಹೆಳವನಕಟ್ಟೆಯ ವೆಂಕಟನ ಬೇಡಿ ಮುಕ್ತಿಯನು ಪಡೆಯೊ ಮನವೆ 5
--------------
ಹೆಳವನಕಟ್ಟೆ ಗಿರಿಯಮ್ಮ