ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(3) ರಂಗನಬೆಟ್ಟ(ಸೋಲೂರು ಸಮೀಪ)ರಂಗನಾಥ ತಟ್ಟೇಕೆರೆಯಾ ರಂಗಾ ಜಯ ಮಂಗಳಾಂಗ ಪ ಪಾದ ಭಂಗ ಅ.ಪ ಲಕ್ಷ್ಮೀನಾಯಕ ಭಕ್ತವೃಂದ ರಕ್ಷಕ ಶಕ್ತ ರಕ್ಷಿಸು ಕಮಲಾಕ್ಷ ಕರುಣಾಕಟಾಕ್ಷ 1 ಪತಿತ ಪಾವನ ಪುಣ್ಯಧಾಮ ಮಹಿತಮಾನ್ಯ ಶ್ರುತಿನುತ ಗುಣಭೂಷಾ ಭವನಾಶಾ 2 ಗಾಂಗೇಯನುತನಾಮ ಹಿಂಗದೆನ್ನಲಿ ಪ್ರೇಮ ಸಾಂಗವೇದಸ್ತೋಮ ಸುತ್ರಾಮಾ 3 ಸುರಮುನಿವಂದ್ಯ ಭಾಗವತರ ವೃಂದ ಕರಿರಾಜ ಪರಿಪೋಷಾ ಹೆಜ್ಜಾಜೀಶ 4
--------------
ಶಾಮಶರ್ಮರು
ಬಂದಿದೆ ದೂರು ಬರಿದೆ ಪಾಂಡವರಿಗೆ ಪ ಕೊಂದವರಿವರು ಕೌರವರನೆಂಬಪಕೀರ್ತಿ ಅ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1 ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2 ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3 ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4 ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5 ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6 ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7
--------------
ಕನಕದಾಸ
ಬ್ರಹ್ಮ ತಾವೆಂದು ಭಾವಿಸಿರೋ ಭಾಗ್ಯರಿರಾಬ್ರಹ್ಮತಾವೆಂದು ಭಾವಿಸಿದವರುಂಟು ಪ ಕಪಿಲ ನಾರದನು ಗೌತಮನು ಕಣ್ವನುನಿಪುಣ ಕೌಶಿಕನು ನಿರ್ಮಲನು ಅಗಸ್ತ್ಯಾಉಪಮಾನ್ಯ ಶಿಖಿ ಪಂಚ ದೂರ್ವಾಸರಂತಿವರು ಬ್ರಹ್ಮ ತಾವೆಂದು ಭಾವಿಸುವರು 1 ವ್ಯಾಸ ಶ್ರೀವತ್ಸ ಶುಕನು ಶೌನಕನುವಾಶಿಷ್ಟ ಅತ್ರಿ ಗಾರ್ಗೇಯನು ಕಶ್ಯಪನುದಾಸ ಪ್ರಹ್ಲಾದ ಬಕದಾಲ್ಬ್ಯ ಜಮದಗ್ನಿಭಾಸುರರಿಂತಿವರು ಬ್ರಹ್ಮತಾವೆಂದು ಭಾವಿಸುವರು 2 ಸನಕ ಸನಂದನ ಸನತ್ಸುಜಾತನುಮುನಿಯು ತೃಣಬಿಂದು ಮಾರ್ಕಾಂಡೇಯ ರೋಮಶನುಘನ ವಾಮದೇವ ದತ್ತಾತ್ರೇಯ ವಡಬನುಚಿನುಮಯರಿವರು ಬ್ರಹ್ಮತಾನೆಂದು ಭಾವಿಪರು3 ನಿತ್ಯ ತಾವೆಂದು ಭಾವಿಸುವರು 4 ಭವ ಮೂಲ ಹರಿವುದುಬ್ರಹ್ಮ ಬೇರೆನಲು ಬಹುಜನ್ಮವೇ ಬಹುದುಬ್ರಹ್ಮತಾವೆಂದು ಭಾವಿಸಿ ನೀವು ನಿತ್ಯಬ್ರಹ್ಮ ಚಿದಾನಂದ ತಾವಾಗುವಿರಿ ಸತ್ಯ 5
--------------
ಚಿದಾನಂದ ಅವಧೂತರು
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ