ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ಶ್ರೀ ವೆಂಕಟಾಚಲ ನಿವಾಸ ನಿನ್ನ ಸೇವಾನುಸೇವಕರ ದಾಸಾ ಎನಿಸಿ ಜೀವಿಸುವ ನರಗೆ ಆಯಾಸಾ ಯಾಕೆ ಶ್ರೀವರನೆ ಕೊಡು ಎಮಗೆ ಲೇಸಾ 1 ಕಂಸಾರಿ ಪ್ರಭು ನಿನ್ನ ದಿವ್ಯ ನಾಮ ಒದಗಲು ಜಿಹ್ವೆಗೆನ್ನಾ ದೋಷ ಸೀಮೆಗಾಣದಿದ್ದರೆನ್ನ ಸ್ವಾಮಿ ನೀ ಮರೆಯಲಾಗದು ಸುಪ್ರಸನ್ನ 2 ನೀಚ ಯೋನಿಗಳಲ್ಲಿ ಬಂದೆ ಇನ್ನು ನಾಚಿಕಿಲ್ಲವೊ ಎನಗೆ ತಂದೆ ನೀನೆ ಮೋಚಕನು ಬಿನ್ನಪ ವಿದೆಂದೆ ಸವ್ಯ ಸಾಚಿಸಖ ಕೈಪಿಡಿಯೋ ತಂದೆ 3 ನಾನೊಬ್ಬನೇ ನಿನಗೆ ಭಾರವಾದೆ ನೇನೊ ಸಂತತ ನಿರ್ವಿಕಾರ ಎನ್ನ ಹೀನತ್ವ ನೋಡಲ್ಕಪಾರ ಚಕ್ರ ಪಾಣಿ ಮಾಡಿದಿರೆನ್ನ ದೂರ 4 ಕಂಡ ಕಂಡವರಿಗಾಲ್ಪರಿದು ಬೇಡಿ ಬೆಂಡಾದೆ ನಿನ್ನಂಘ್ರಿ ಮರೆದು ದಿಟ ತೊಂಡವತ್ಸಲನೆಂಬ ಬಿರುದು ಕಾಯೊ ಪುಂಡರೀಕಾಕ್ಷ ನೀನರಿದು 5 ಈ ಸಮಯದೊಳೆನ್ನ ತಪ್ಪ ನೋಡಿ ನೀ ಸಡಿಲ ಬೇಡುವರೇನಪ್ಪ ನಿನ್ನ ದಾಸರ್ಪೆಸರ್‍ಗೊಳಲು ಬಪ್ಪಾ ದೋಷ ನಾಶವಾಗೋದು ತಿಮ್ಮಪ್ಪ 6 ಕಾಮಾದಿಗಳ ಕಾಟದಿಂದ ನಿನ್ನ ನಾ ಮರೆದೆ ಸಚ್ಚಿದಾನಂದ ಎನ್ನ ಈ ಮಹಾ ದೋಷಗಳ ವೃಂದ ನೋಡದೆ ನೀ ಮನ್ನಿಸೆನ್ನ ಮುಕುಂದ 7 ನೀ ಪಿಡಿದವÀರ ಸಹಸ್ರಾರ ಸುಜನ ಪಾಪಾಟವಿಗೆ ಸುಕುಠಾರಾ ಜಗ ದ್ವ್ಯಾಪಕನೆ ಎನ್ನ ಸಂಸಾರ ಘೋರ ಕೊಪದಿಂದೆತ್ತಯ್ಯ ಧೀರ 8 ಸಿಂಧೂರ ರಾಜ ಪರಿಪಾಲ ಕೋಟಿ ಕಂದರ್ಪ ಲಾವಣ್ಯ ಶೀಲ ಧರ್ಮ ಮಂದಾರ ಭೂಜಾಲಪಾಲ ಯೋಗಿ ಸಂದೋಹ ಹೃತ್ಕುಮುದ ಶೀಲಾ 9 ಶಿವನ ವೈರಿಯ ಕೊಂದ ಶಕ್ತ ಪುಣ್ಯ ಶ್ರವಣ ಕೀರ್ತನ ನಿನ್ನ ಭಕ್ತಾ ಜನರ ಭವದೊಳಗೆ ದಣಿಸುವುದು ಯುಕ್ತವೇನೊ ಭುವನ ಪಾವನ ನಿತ್ಯಮುಕ್ತ 10 ಶ್ರೀಕರ ಶ್ರೀಮದಾನಂತ ನಿಖಿಳ ಲೋಕೈಕನಾಥ ನಿನ್ನಂಥ ಸಖರ ನಾ ಕಾಣೆನೆಲ್ಲಿಯೂ ಮಹಂತಾ ಎನ್ನ ನೀ ಕಾಯೋ ಕಂಡ್ಯ ಭೂಕಾಂತಾ 11 ಕರ್ಮ ಚಿತ್ರತ್ವಗ್ರಸನ ಕಾಯ ಕರಣ ಮನಹಂಕಾರ ಘ್ರಾಣಾ ಬುದ್ದಿ ಚರಣ ಪಾಯೂಪಸ್ಥ ನಯನಜಾತ ಉರುಪಾಪ ಕ್ಷಮಿಸು ಶ್ರೀ ರಮಣಾ 12 ಅನಿಮಿತ್ತ ಬಂಧು ನೀಯೆನ್ನ ಬಿಡುವು ದನುಚಿತವೋ ಲೋಕಪಾವನ್ನ ಚರಿತ ಮನ ವಚನ ಕಾಯದಲಿ ನಿನ್ನ ಪಾದ ವನಜ ನಂಬಿದೆ ಸುಪ್ರಸನ್ನಾ 13 ನೀನಲ್ಲದೆನಗೆ ಗತಿಯಿಲ್ಲ ಪವ ಮಾನವಂದಿತ ಕೇಳೋ ಸೊಲ್ಲ ಎನ್ನ ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ ಧೀನವಲ್ಲವೆ ಲಕ್ಷ್ಮೀನಲ್ಲಾ 14 ಪ್ರಾಚೀನ ಕರ್ಮಾಂಧ ಕೂಪದೊಳಗೆ ಯೋಚಿಸುವ ನರರ ಸಂತಾಪ ನಿನಗೆ ಗೋಚರಿಸದೇನೋ ಬಹುರೂಪ ವೆಂಕ ಟಾಚಲನಿಲಯ ಪಾಹಿ ಶ್ರೀಪಾ 15 ಯಾಕೆ ದಯ ಬಾರದೆನ್ನಲ್ಲಿ ನರಕ ನಾಕ ನರಕ ಭೂ ಲೋಕಂಗಳಲ್ಲಿ ಚರಿಸಿ ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ ಶೋಕ ಕೊಡು ಭಕುತಿ ನಿನ್ನಲ್ಲಿ 16 ಬನ್ನ ಬಡಿಸುವರೇನೋ ಬಿಡದೆ ನಾನು ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ ಪನ್ನ ವತ್ಸಲನೆಂದು ನುಡಿದೆ 17 ತಾಪತ್ರಯಗಳಿಂದ ನೊಂದೆ ಮಹಾ ಪಾಪಿಷ್ಠರಲ್ಲನ್ನ ತಿಂದೆ ಇನ್ನು ಆಪರೇತೇಶ್ವರನ ಮುಂದೆ ಪೋಗಿ ನಾ ಪೇಕೊಳಲೇನು ತಂದೆ 18 ದೇಹ ಸಂಬಂಧಿಗಳ ಸಹಿತವಾಗಿ ನಾ ಹೊಂದಿದೆನು ಲೋಕಮೋಹಿತ ಎನ್ನ ಮೋಹಿಪ್ರದು ನಿನ್ನಗೇನು ವಿಹಿತ ಹೃದಯ ಬಾಹಿರಂತರದಿ ಸನ್ನಿಹಿತ 19 ಪೋಗುತಿದೆ ದಿವಸ ಕಮಲಾಕ್ಷ ಪರಮ ಅಪರೋಕ್ಷ ಎನಗೆ ಹೇಗಾಗುವುದೊ ಸುರಾಧ್ಯಕ್ಷ ದುರಿತ ನೀನು ಕಾಮಿತ ಕಲ್ಪವೃಕ್ಷ 20 ಗತಿಯಾರು ನಿನ್ನುಳಿದು ದೇವ ರಮಾ ಸಂಜೀವ ಎನ್ನ ಸತಿಸುತರ ಅನುದಿನದಿ ಕಾವ ಭಾರ ಸತತ ನಿನ್ನದು ಮಹಾನುಭಾವ 21 ದೊಡ್ಡವರ ಕಾಯ್ವುದೇನರಿದು ಪರಮ ದಡ್ಡರನು ಕಾಯ್ವದೇ ಬಿರುದು ಎನ್ನ ಗುಡ್ಡದಂತಹ ಪಾಪ ತರಿದು ಕಾಯೋ ವಡ್ಡಿ ನಾಯಕ ಸಾರೆಗರದೊ 22 ಜ್ಞಾನಿಗಳು ನೀಚರಲಿ ಕರುಣಾ ಮಾಡ ರೇನೋ ಬಿಡುವರೇ ರಥಚರಣ ಪಾಣಿ ಭಾನು ಚಂಡರವಿಕಿರಣ ಬಿಡದೆ ತಾನಿಪ್ಪನೆ ರಮಾರಮಣ23 ಆಡಲ್ಯಾತಕೆ ಬಹಳ ಮಾತಾ ಪರರ ಬೇಡಲಾರೆನೋ ಜಗತ್ರಾತಾ ಹೀಗೆ ಮಾಡುವರೇ ಕೆಳೆನ್ನ ಮಾತ ನೀನೆ ನೀಡೆನಗೆ ಪುರುಷಾರ್ಥ ದಾತಾ 24 ಬೇಡಲೇತಕೆ ಬಹಳ ಮಾತಾ ಎನ್ನ ಕೇಡು ನಿನ್ನದಲ್ಲೇ ಬಲಿದೌತ ಪಾದ ಬೇಡಿಕೊಂಬುವೆ ನಾನನಾಥ ದೂರ ನೋಡಲಾಗದು ಪಾರ್ಥಸೂತ 25 ನಿತ್ಯ ಬಿಡದೆ ಶಾರದೇಶನ ನುತಿಪ ಭಕ್ತ ಜನರ ಪಾರ ಸಂತೈಸುವುದು ಮಿಥ್ಯವಲ್ಲ ಶ್ರೀರಮಣ ಸಾಕ್ಷಿದಕೆ ಸತ್ಯಾ 26 ಪರಿಯಂತ ಶಯನ ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ ಮಣಿದ ನಿನ್ನಂಘ್ರಿಗೆ ಶಶಾಂಕಾ ಭಾಸ ದಣಿಸಲಾಗದು ನಿಷ್ಕಳಂಕಾ27 ಕಾರ್ತವೀರ್ಯಾಜುನನ ಕೊಂದ ಭವ್ಯ ಕೀರ್ತಿ ನಿನ್ನಾನಂದ ವೃಂದ ಸತತ ಕೀರ್ತಿಸುವ ನರರ ಬಹುಕುಂದ ನೋಡ ದಾರ್ತನ್ನ ಪೊರೆಯೊ ಗೋವಿಂದ 28 ದಯದಿಂದ ನೋಡೆನ್ನ ಹರಿಯೆ ಜಗ ನ್ಮಯನೆ ಜ್ಞಾನಾನಂದ ವೃಂದ ಸಿರಿಯೆ ಮನಾ ಭಯದೂರರಿನ್ನೊಬ್ಬರರಿಯೇ 29 ನರಸಿಂಹ ನಿನ್ನುಳಿದು ಜಗವ ಕಾಯ್ವ ಪರಮೋಷ್ಠಿ ರಾಯನು ನಗುವ ನಿತ್ಯ ನಿರಯಾಂಧ ರೂಪದೊಳು ಹುಗಿವಾ 30 ದಾಸ ದಾಸರ ದಾಸನೆಂದು ಬಿಡದೆ ನೀ ಸಲಹೋ ಎನ್ನನೆಂದೆಂದೊ ನಿನ್ನ ನಾ ಸೇವಿಸುವೆ ಕೃಪಾಸಿಂಧು ಎಮ್ಮನು ದಾಸಿಸದÀನಿಮಿತ್ತ ಬಂಧೂ 31 ಎಂದೆಂದು ನೀ ಬಡವನಲ್ಲ ನಿನ್ನ ಮಂದಿರದೊಳಗೆ ಬಲ್ಯಲ್ಲಾ ಚಿದಾ ನಂದ ನೀ ಭಕ್ತ ವತ್ಸಲ್ಲಾ 32 ಕಾಮಿತಪ್ರದನೆಂಬ ಬಿರಿದು ಕೇಳಿ ನಾ ಮುದದಿ ಬಂದೆನೋ ಅರಿದು ಎನ್ನ ತಾಮಸ ಮತಿಗಳೆಲ್ಲ ತರಿದು ಮಮ ಸ್ವಾಮಿ ನೋಡೆನ್ನ ಕಣ್ದೆರದು33 ಹಿತವರೊಳು ನಿನಗಧಿಕರಾದ ತ್ರಿದಶ ತತಿಗಳೊಳು ಕಾಣೆನೋ ಪ್ರಮೋದ ನೀನೆ ಗತಿಯೆಂದು ನಂಬಿದೆ ವಿವಾದವ್ಯಾಕೊ ಪತಿತಪಾವನ ತೀರ್ಥಪಾದ 34 ಮಡದಿ ಮಕ್ಕಳು ತಂದೆ ತಾಯಿ ಎನ್ನ ಒಡಹುಟ್ಟಿದವರ ನೀ ಕಾಯಿ ಲೋಕ ದೊಡೆಯ ನೀನಲ್ಲದಿನ್ನಾರೈ ಎನ್ನ ನುಡಿ ಲಾಲಿಸೋ ಶೇಷಶಾಯಿ 35 ಅನುಬಂಧ ಜನರಿಂದ ಬಪ್ಪ ಕ್ಲೇಶ ವನುಭವಿಸಲಾರೆ ಎನ್ನಪ್ಪ ಉದಾ ಸೀನ ಮಾಡಿ ದಯಮಾಡದಿಪ್ಪರೇನೋ ಘನ ಮಹಿಮ ಫಣಿರಾಜತಲ್ಪ 36 ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ ಮೊದಲಾದವರು ನಿನ್ನ ಚಲ್ವನಖದ ವಿಧಿಸಲಾಪೆನೆ ನಿನ್ನ ಸಲ್ವಾ 37 ಧನ ಧಾನ್ಯ ಪಶು ಪತ್ನಿ ಗೇಹ ಜನನೀ ಜಾಮಾತ ಸಖ ನೇಹ ಅನುಜ ತನುಜಾಪ್ತವರ್ಗದಿಂದಾಹ ಸೌಖ್ಯ ನಿನಗರ್ಪಿಸಿದೆ ಎನ್ನ ದೇಹಾ 38 ನೀನಿತ್ತ ಸಂಸಾರದೊಳಗೆ ಸಿಲುಕಿ ನಾನೊಂದೆ ಕರೆ ನಿನ್ನ ಬಳಿಗೆ ಚರಣ ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ ಕಾಣದಿರಲಾರೆನರ ಘಳಿಗೆ 39 ಸಲುಗೆ ಬಿನ್ನಪವ ನೀ ಕೇಳೋ ಎನ್ನ ಬಲು ದುರುಳತನವ ನೀ ತಾಳೋ ನೀನೆ ನೆಲೆಯಲ್ಲದೆನಗಾರು ಪೇಳೋ ಎನ್ನ ಕುಲದೈವ ಬಹುಕಾಲ ಬಾಳೋ40 ಸಾಂದೀಪ ನಂದನನ ತಂದ ನಂದ ಭವ ವೃಂದ ಕಳೆದು ಎಂದೆಂದು ಕುಂದದಾನಂದವೀಯೋ ಇಂದಿರಾರಮಣ ಗೋವಿಂದ41 ತೈಜಸ ಪ್ರಾಜ್ಞ ತುರಿಯಾ ಎನ್ನ ದುಸ್ವಭಾವವ ನೋಡಿ ಪೊರೆಯದಿಹರೆ ನಿಸ್ಪøಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ ಅಸ್ವತಂತ್ರನ ಕಾಯೋ ಪಿರಿಯಾ42 ಇಹಪರದಿ ಸೌಖ್ಯ ಪ್ರದಾತ ನೀನೆ ಅಹುದೋ ಲೋಕೈಕ ವಿಖ್ಯಾತ ಮಹಾ ಮಹಿಮ ಗುಣಕರ್ಮ ಸಂಜಾತ ದೋಷ ದಹಿಸು ಸಂಸಾರಾಬ್ದಿ ಪೋತಾ 43 ಲೋಕಬಾಂಧವನೆಂಬ ಖ್ಯಾತಿಯನ್ನು ನಾ ಕೇಳಿದೆನು ಖಳಾರಾತಿ ಮನೋ ಶೋಕ ಮೋಹಾಜ್ಞಾನ ಭೀತಿ ಬಿಡಿಸು ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ44 ಒಂದು ಗೇಣೊಡಲನ್ನಕಾಗಿ ಅಲ್ಪ ಮಂದಭಾಗ್ಯರ ಮನೆಗೆ ಪೋಗಿ ದೈನ್ಯ ದಿಂದ ಸತ್ಕರ್ಮಗಳ ನೀಗಿ ಕಂದಿ ಕುಂದಿದೆನೋ ಸಲಹೋ ಲೇಸಾಗಿ45 ಪಾತಕರೊಳಗಧಿಕ ನಾನಯ್ಯ ಜಗ ತ್ಪಾತಕವ ಕಳೆವ ಮಹಾರಾಯ ನಿನ್ನ ದೂತನಲ್ಲವೆ ಜೀಯ ಜಗ ನ್ನಾಥ ವಿಠ್ಠಲ ಪಿಡಿಯೋ ಕೈಯಾ 46
--------------
ಜಗನ್ನಾಥದಾಸರು
ಏನು, ಬರೆದೆಯೊ ಬ್ರಹ್ಮ ಎಂತು ನಿರ್ದಯನು-ಅಭಿ |ಮಾನವನು ತೊರೆದು ಪರರನು ಪೀಡಿಸುವುದ ಪಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು |ಸೊಲ್ಲುಸೊಲ್ಲಿಗೆಅವರಕೊಂಡಾಡುತ ||ಇಲ್ಲ ಈ ವೇಳೆಯಲಿ ನಾಳೆ ಬಾ-ಎನಲಾಗಿ |ಅಲ್ಲವನೆ ತಿಂದ ಇಲಿಯಂತೆ ಬಳಲುವುದ 1ಗೇಣೊಡಲ ಹೊರೆವುದಕೆ ಹೋಗಿ ನರರೊಳು ಪಂಚ-|ಬಾಣ ಸಮರೂಪ ನೀನೆಂದು ಪೊಗಳೆ ||ಮಾಣು ಎನ್ನಾಣೆ ನೀ ನಾಳೆ ಬಾ ಎಂದೆನಲು |ಗಾಣತಿರುಗುವ ಎತ್ತಿನಂತೆ ಬಳಲುವುದ2ಹಿಂದೆ ಬರೆದಾ ಬರೆಹ ಏನಾದರಾಗಲಿ |ಮುಂದೆನ್ನ ವಂಶದಲಿ ಪುಟ್ಟುವರಿಗೆ ||ಸಂದೇಹಬೇಡ ಶ್ರೀಪುರಂದರವಿಠಲನೇ |ಕಂದರ್ಪನಯ್ಯ ಉಡುಪಿಯ ಕೃಷ್ಣರಾಯ 3
--------------
ಪುರಂದರದಾಸರು
ಮನವ ಶೋಧಿಸಬೇಕುನಿಚ್ಚ - ದಿನ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ದಿನದಿ ಮಾಡುವ ಪಾಪ ಪುಣ್ಯದ ವೆಚ್ಚ ಪಧರ್ಮ ಅಧರ್ಮ ವಿಂಗಡಿಸಿ - ದು - |ಷ್ಕರ್ಮಕೆ ಏರಿದ ಬೇರ ಕತ್ತರಿಸಿ ||ನಿರ್ಮಲಾಚಾರದಿ ಚರಿಸಿ -ಪರ - |ಬೊಮ್ಮಮೂರುತಿ ಪಾದಕಮಲವ ಭಜಿಸಿ1ತನುವ ದಂಡಿಸಿ ಒಮ್ಮೆ ಮಾಣೊ - ನಿನ್ನ - |ಮನವ ಶೋಧಿಸಿ ಪರಮಾತ್ಮನ ಕಾಣೊ ||ನೀನು ನಿನ್ನೊಳಗೆ ಜಾಣನೊ - ಮುಕುತಿ - |ಯೇನೂ ದೂರಿಲ್ಲವೊ ಒಂದೇ ಗೇಣೊ 2ಆತನ ಭಕ್ತರಿಗೆ ಕೇಡಿಲ್ಲ - ಅವ - |ಪಾತಕ - ಪತಿತಸಂಗವ ಮಾಡ ಸಲ್ಲ ||ನೀತಿವಂತರು ಕೇಳಿರೆಲ್ಲ - ನಮ -|ಗೀತನೆ ಗತಿಯೀವ ಪುರಂದರವಿಠಲ 3
--------------
ಪುರಂದರದಾಸರು