ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪಕಂಡೀರೆ ಪಾಂಡುರಂಗನನೂ ಕಳಕೊಂಡಿರೆಪಾಪ ಸರ್ವವನೂ ಅಂಡಜವಾಹನನಾಗಿಸಂಚರಿಸುವಪುಂಡರೀಕಾಕ್ಷಬ್ರಹ್ಮಾಂಡ ನಾಯಕನನ್ನೂ 1ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇಗರ್ಭದಿ ಜನಿಸಿ ಎಂಟನೆಮಾಸಶ್ರಾವಣಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿಸೃಷ್ಟಿಗಿಳಿದ ಶ್ರೀಕೃಷ್ಣನ 2ಮಧುರಾ ಪಟ್ಟಣದಿ ಮೈದೋರಿ ಬಹುವಿಧವಾಗಿ ಗೋಕುಲದೊಳಗಾದಧಿಘೃತಚೋರಕನೆಂದು ಯಶೋದೆಗೆಪದುಮಾಕ್ಷಿಯರು ಬಂದು ದೂರುವ ಕೃಷ್ಣನ 3ದನುಜೆ ಪೂತನೆಯಸುಗೊಂಡು ತನ್ನಜನನಿಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ 4ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿಗೋವ್ಗಳ ಮೇಸಿ ಪಾವಕನುಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ 5ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ 6ಶರದ ಸೇತುವಿಗೆ ಮೈಯ್ಯಾಂತ ಉಟ್ಟಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದುಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ 7ದುಷ್ಟ ನಿಗ್ರಹನೆಂಬ ಬಿರುದೂ ಭಕ್ತರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದುಬಿಟ್ಟರು ದ್ವಾರಕಾಪುರವ ರಾಮಕೃಷ್ಣರು 8ಹಡಗಿನ ಮೇಲೇರಿ ಬಂದೂ ನಮ್ಮಉಡುಪಿಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದವೊಡೆಯ ಗೊೀವಿಂದ ಗೋಪಾಲಕೃಷ್ಣನ 9
--------------
ಗೋವಿಂದದಾಸ
ಕರವಮುಗಿವೇ ಕಮಲನಯನಕರುಣದಿಂದಲಿ ಪಾಲಿಸೊಕರಿವರದ ಶ್ರೀ ಕಮಲನಾಭಕರೆದು ಎನ್ನನು ಮನ್ನಿಸೊ 1ಸ್ಮರಿಸಲರಿಯೇ ಸಿರಿಯ ರಮಣಪರಮಪಾವನ ಪಾದವಾಸ್ಮರನಜನಕಶರಧಿಶಯನಇರಿಸು ಎನ್ನೊಳು ಮೋಹವಾ 2ಬಂಧು ಬಳಗ ಭಾಗ್ಯ ಭೋಗ್ಯ-ದಿಂದ ಸುಖವ ಕಾಣೆನೇದಂದಶೋಕ ಶಮನನೇ ಗೊೀವಿಂದದಾಸನ ಪ್ರಾಣನೇ 3
--------------
ಗೋವಿಂದದಾಸ
ಗುಟ್ಟ ಪೇಳಿದಳೊಂದು ಗುಣು ಗುಣು ಗುಣು ಎಂದು |ಗಟ್ಟಿ ಪೇಳಿದರತ್ತೆ ಬೈಯ್ಯುವಳೆಂದು ಪಪಚ್ಚೆ ಮಂಚದಿ ಬಂದು ಮಲಗಿಕೊಳ್ಳೆಂದು |ನಟ್ಟಿರುಳಲಿ ಬಹೆ ಕೃಷ್ಣ ಕೇಳೆಂದು ಅ.ಪಹದಿನಾರು ಸಾವಿರ ಸುದತಿಯರನು ಸೇರಿ |ಮದನಕೇಳಿದೊಳೆನ್ನ ಮರೆತೆಯಶೌರಿ|ಮದುವೆಯಾದವನೂರೊಳಿಲ್ಲ ಬಿಕಾರಿ |ಮದನತಾಪದಿ ಬೆಂದು ಬಳಲಿ ಬಾಯಾರಿ 1ಗುರುಕುಚವನುನೋಡುಹರುಷ ಮಾತಾಡು |ಮರುಗ ಮಲ್ಲಿಗೆ ಜಾಜಿ ಸರವ ತಂದೀಡೊ |ಕರುಪುರ ವೀಳ್ಯವ ಸವಿದು ನೀನೋಡು|ಪರಿಪರಿಯಲಿ ನಿನ್ನ ಕೃಪೆಯನೀಡಾಡು 2ಚಂದ್ರಗಾವಿಯ ಸೀರೆ ನೆರಿ ಹಿಡಿದುಟ್ಟು |ಚಂದದಿ ಕುಪ್ಪಸ ತೊಟ್ಟು ಜಡೆಬಿಟ್ಟು |ಚಂದನಕುಂಕುಮ ಕಸ್ತೂರಿ ಬೊಟ್ಟು |ಮಂದರಧರ ಗೊೀವಿಂದಗೆ ಚುಂಬನ ಕೊಟ್ಟು 3
--------------
ಗೋವಿಂದದಾಸ
ಶ್ರೀಧರಾ ಸುಶೀಲ |ಸುಜನಪಾಲಪಾಹಿಮಾಂ | ನಮೋ ನಮಃ |ಶ್ರೀಧರಾ ಸುಶೀಲಸುಜನಪಾಲ ಪಾಹಿಮಾಂಪಮಾಧವಮಹಿಮ ಸಾಧು ಸಜ್ಜನ ಪ್ರೇಮ |ಮೋದವಿನೋದಾ ಸುಪಾದಕೆ ನಮೋ ನಮಃ1ನಾಶನಕರ್ತವಿನಾಶನ ಚರಿತ | ದಾಸವಿಶೇಷ |ಸರ್ವೇಶನೇ ನಮೋ ನಮಃ2xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಶಂಕರ ಸಖನೆ ಶ್ರೀ ವೆಂಕಟರಮಣ |ಶಂಖ ಚಕ್ರಾಂಕ ಸರ್ವಾಂಕಿತ ನಮೋ ನಮಃ3ಚಂದ್ರ ಸಮಾನ್ವಿತ ನಂದಗೋಪಿಯಸುತ |ನಂದ ಮುಕುಂದ ಗೊೀವಿಂದನೇ ನಮೋ ನಮಃ4
--------------
ಗೋವಿಂದದಾಸ