ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನವರದ ವಿಠಲ | ಇವನ ನೀಸಲಹೋ ಪ ಭವದೊಳಗೆ ಸಂತಪ್ತ | ತವಪಾದ ಶರಣನ ಅ.ಪ. ರಾಶಿಪುಣ್ಯವು ಫಲಿಸೆ | ದಾಸದೀಕ್ಷೆಗೆ ಒಲಿದುಆಶಿಸಲು ತೈಜಸನು | ಭಾಸುರಾಂಕಿತಕೇಸೂಸಿ ತನ್ನನುಗ್ರಹದ | ಭಾಷೆ ಅಸ್ತ್ವೆಂದೆನುತಲೇಸಾಗಿ ಪೇಳಲುಪ | ದೇಶಿಸಿಹೆ ಹರಿಯೇ 1 ಕರ್ಮ | ಸಂಚಿತಾದಿಗಳು 2 ತತ್ವರೊಲಿಮೆಯ ಕೊಡಿಸು | ತತ್ವಾರ್ಥಸ್ಪುರಿಸಿವಗೆಮೃತ್ಯುವೆನೆ ಗೆಲುವಂಥ | ಪಥವನ್ನೆ ತೋರಿಕರ್ತತಾನಲ್ಲೆಂಬ | ಉತ್ಕøಷ್ಟ ಮತಿಯಿತ್ತುಎತ್ತು ಭವದಿಂ ಹರಿಯೇ | ಉತ್ತಮೋತ್ತಮನೆ 3 ಸರ್ವತ್ರ ಸರ್ವದಾ | ಶರ್ವನೊಡೆಯನೆದೇವಸರ್ವಮಂಗಳ ನಿನ್ನ | ನಾಮಸುಧೆಯನ್ನುದರ್ವಿಜೀವಿಗೆ ಉಣಿಸಿ | ಭವಕಡಲ ಪ್ಲವನೆನಿಸೊಸರ್ವಾಂತರಾತ್ಮಕನೆ | ಉದ್ದರಿಸೊ ಇವನಾ 4 ಜೀವ ಅಸ್ವಾತಂತ್ರ | ದೇವ ನಿಜಸ್ವಾತಂತ್ರಜೀವ ಜಡರುಗಳೆಲ್ಲ | ದೇವರಾಧಿನಾಈ ವಿಧದ ಸುಜ್ಞಾನ | ಆವಾಗಲೂ ಕೊಟ್ಟುದೇವಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ- ರಾದಿಯ ತಿಳಿಯಲು ಕೇಳಿ ಬಲ್ಲವರು ಪ ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ ಮೂಲ ಮಂತ್ರಂಗಳ ಜಪಿಸುವ ಬೂದಿ ಮೂಲಾಧಾರವ ತೋರುವ ಬೂದಿ ಕಾಲ ಕರ್ಮಂಗಳ ಕಡಿವಂಥ ಬೂದಿ 1 ಏಳು ಸುತ್ತಿನ ಒಳಗೆ ಇರುವಂಥ ಬೂದಿ ಏಳು ವೈರಗಳನ್ನು ಕಳೆವಂಥ ಬೂದಿ ಏಳು ಅಗಳ ದಾಟಿ ಹಾರುವ ಬೂದಿ ಬ- ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ 2 ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ ಕುಂಭಕದೊಳಗದ ಇರಿಸುವ ಬೂದಿ ಸಂಭ್ರಮದಿ ಅರಸನ ಗೆಲುವಂಥ ಬೂದಿ ಅಂಬರಕಾಗಿಯೆ ಲಂಬಿಪ ಬೂದಿ 3 ಪಂಚಾಗ್ನಿಯಿಂದಲೆ ಬೆಂದಿಹ ಬೂದಿ ಪಂಚತತ್ವಂಗಳನು ಗೆಲುವಂಥ ಬೂದಿ ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ ವಂಚಿಸಿಕೊಳ್ಳದೆ ಧರಿಸುವ ಬೂದಿ 4 ಆರು ವೈರಿಗಳನ್ನು ತೂರುವ ಬೂದಿ ಆರು ಭಾವಗಳನ್ನು ಬೇರಿಟ್ಟ ಬೂದಿ ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ ಆರಿಗೂ ತೋರದೆ ಹಾರುವ ಬೂದಿ 5 ಅಷ್ಟಮದಂಗಳ ಕಟ್ಟುವ ಬೂದಿ ದುಷ್ಟಾತ್ಮರನ್ನು ಅಟ್ಟುವ ಬೂದಿ ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ 6 ಸಕಲ ಋಷಿಗಳೆಲ್ಲ ಧರಿಸುವ ಬೂದಿ ತ್ರಿಕರ್ಣ ಶುದ್ಧದಿ ತುಂಬಿದ ಬೂದಿ ಮಕರಕುಂಡಲಧರ ಮರುಳಹ ಬೂದಿ ಸಖನಹ ವರಾಹತಿಮ್ಮಪ್ಪ ಬೂದಿ 7
--------------
ವರಹತಿಮ್ಮಪ್ಪ
ಸಾಂಬ ಶಿವ ಶರಣರಿಗೊಂದು ಶರಣಾರ್ಥಿ ಪ ನರಲೋಕದೊಳಗೆ ಸಂಚಾರವ ಮಾಡುವ ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು ಅರಿತಂಥವನಿಗೊಂದು ಶರಣಾರ್ಥಿ ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ ಸರಿವಂಥವರಿಗೊಂದು ಶರಣಾರ್ಥಿ 1 ಧಾರಣಿಯೊಳು ಪೆಸರೊಡೆದು ರಂಜಿಸುವಂಥ ಕಾರುಣಿಕರಿಗೊಂದು ಶರಣಾರ್ಥಿ ದವರಿಗೊಂದು ಶರಣಾರ್ಥಿ ನಿತ್ಯ ಕರ್ಮವ ರಚಿಸುವ ಚಾರು ಶೀಲರಿಗೊಂದು ಶರಣಾರ್ಥಿ ಸ್ಸಾರ ಮಾಡಿದಗೊಂದು ಶರಣಾರ್ಥಿ 2 ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ ಪುರುಷರಿಗೊಂದು ಶರಣಾರ್ಥಿ ಹರಿಹರರೊಳಗೆ ಭೇದವ ಮಾಡಿ ನಡೆಯದ ದುರಿತ ದೂರರಿಗೊಂದು ಶರಣಾರ್ಥಿ 3 ಸತ್ತು ಹುಟ್ಟುವ ಭವಶರಧಿಯ ಗೆಲುವಂಥ ಉತ್ತಮರಿಗೊಂದು ಶರಣಾರ್ಥಿ ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ ತೀರ್ಥಗೊಂಬನಿಗೊಂದು ಶರಣಾರ್ಥಿ ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ ಭಕ್ತಿವಂತರಿಗೊಂದು ಶರಣಾರ್ಥಿ ತತ್ವ ವಿಚಾರ ವೇದಾಂತದ ಅರ್ಥವ ಯಾ ವತ್ತರಿದವಗೊಂದು ಶರಣಾರ್ಥಿ 4 ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ ನೀರೆರಸಿದವರಿಗೊಂದು ಶರಣಾರ್ಥಿ ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ ಹರಿ ಶರಣರಿಗೊಂದು ಶರಣಾರ್ಥಿ ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ ದೆರಗುವಗೊಂದು ಶರಣಾರ್ಥಿ ಮರುಸುತನ ಕೋಣೆ ವಾಸ ಲಕ್ಷ್ಮೀಶನ ಚರಣ ಪಂಕಜಕೊಂದು ಶರಣಾರ್ಥಿ 5
--------------
ಕವಿ ಪರಮದೇವದಾಸರು
ಎಷ್ಟು ಸುಕೃತದಿಂದ ಕಂಡಿಯೆಮನೋಭಿಷ್ಟಗಳನೆ ಪಡೆದುಕೊಂಡಿಯೆ ದೂತೆ ಪ.ಪಾದನೋಡಲು ಅತಿ ಪಾವನಹಾಂಗೆ ಮೋದಭರಿತಳು ನೀ ಆದೆನೆ ದೂತೆಸಾಧು ಜನರು ನಿನ್ನ ಸ್ವಾಧೀನನಮ್ಮಮಾಧವಅನುದಿನಅಧೀನ ದೂತೆ1ಕೆಂಚಿಹಸ್ತವ ನೀನು ಕಂಡಿಯೆ ಹ್ಯಾಂಗೆಸಂಚಿತಾಗಾಮಿ ಕಳಕೊಂಡೆಯೆದೂತೆ ಪಾಂಚಾಲಿದಯವ ಪಡಕೊಂಡಿಯೆನಿನ್ನ ವಾಂಚಿತಾರ್ಥವ ಕೈಕೊಂಡಿಯೆ ದೂತೆ 2ಮುಖವ ನೋಡಲು ನಿಜ ಮುಕ್ತಿಯ ಹಾಗೆಭಕ್ತಿ ಜ್ಞಾನವು ವಿರಕ್ತಿಯೆ ದೂತೆದಿವ್ಯ ಪ್ರಕೃತಿಯ ಗೆಲುವಂಥ ಶಕ್ತಿಯನಮ್ಮ ಲಕುಮಿ ರಾಮೇಶ ಒಲಿಯೆ ಮುಕ್ತಿಯೆ ದೂತೆ 3
--------------
ಗಲಗಲಿಅವ್ವನವರು