ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲನುತ ಶ್ರೀಶೈಲಮಂದಿರ ಮಲ್ಲಿಕಾರ್ಜುನ ರಕ್ಷಿಸು ಪ ಏಳುಕೊಳ್ಳಗಳೇಳು ನೆಲೆಗಳ ಮೇಲೆ ತೋರ್ಪ ಲಿಂಗನೆ ಕಾಲಕಾಲದಿ ಬಾಲನೆಂದೆನ್ನ ಮಲ್ಲಿಕಾರ್ಜುನ ರಕ್ಷಿಸು 1 ಶೀಲ ಭಕುತರ ಪಾಲಿಸಲು ಪಾತಾಳಗಂಗೆಯ ನಿರ್ಮಿಸಿ ಪಾಲಿಸಿದಿ ಬುವಿ ಪಾಲಿಸಿ ವರ ಮಲ್ಲಿಕಾರ್ಜುನ ರಕ್ಷಿಸು 2 ಸಾರಸೌಖ್ಯ ನೀಡುದ್ಧಾರ ಮಾಡಿದ ಮಲ್ಲಿಕಾರ್ಜುನ ರಕ್ಷಿಸು 3 ಅಂಗಜಹರ ಗಂಗಾಧರ ಗುರುಲಿಂಗಜಂಗಮಾತ್ಮಕ ಭವ ಮಲ್ಲಿಕಾರ್ಜುನ ರಕ್ಷಿಸು 4 ಕಾಲಕಾಲ ಕಾಲಕೇಶ್ವರ ಶೂಲಪಾಣಿಯೆ ನಂಬಿದೆ ಕಾಲನ ಮಹದಾಳಿ ಗೆಲಿಸೆನ್ನ ಮಲ್ಲಿಕಾರ್ಜುನ ರಕ್ಷಿಸು 5 ಕಳೆದೆ ದಿನಗಳ ಇಳೆಯ ಸುಖಮೆಚ್ಚಿ ತಿಳಿಯದೆ ತವಮಹಿಮೆಯ ಒಲಿದು ಕ್ಷಮಿಸೆನ್ನ ಬಾಲನೆಂದೆತ್ತಿ ಮಲ್ಲಿಕಾರ್ಜುನ ರಕ್ಷಿಸು 6 ಅಷ್ಟವರ್ಣ ವಿಶಿಷ್ಟಭಕ್ತಿಯ ಕೊಟ್ಟು ಕುರಣಾದೃಷ್ಟಿಯಿಂ ಅನುದಿನ ಮಲ್ಲಿಕಾರ್ಜುನ ರಕ್ಷಿಸು 7 ದುಷ್ಟಭವಕಿನ್ನು ಹುಟ್ಟಿಬರುವಂಥ ಕೆಟ್ಟ ಬವಣೆಯ ತಪ್ಪಿಸು ಇಷ್ಟದಾಯಕ ಮುಟ್ಟಿಪೂಜಿಪೆ ಮಲ್ಲಿಕಾರ್ಜುನ ರಕ್ಷಿಸು 8 ಪರಕೆ ಪರತರ ಪರಮಪ್ರಕಾಶ ವರದ ಶ್ರೀರಾಮಮಿತ್ರನೆ ಮರೆಯ ಬಿದ್ದೆನು ಕರುಣಿಸಿ ಮುಕ್ತಿ ಮಲ್ಲಿಕಾರ್ಜುನ ರಕ್ಷಿಸು 9
--------------
ರಾಮದಾಸರು
ಭಕುತಾಭಿಮಾನಿ ಸಕಲದೇವರ ಧಣಿ ನಿಖಿಲವ್ಯಾಪಕ ವಿಮಲ ಮುಕುತಿದಾಯಕನೆ ನೀ ಪ ವೇದವೇದಕ್ಕೆ ಸಿಲ್ಕದಾದಿಮೂರುತಿ ನಿನ್ನ ಪಾದಧ್ಯಾನದ ಶಕ್ತಿ ಸಾಧನಕೊಡು ಹರಿಯೆ 1 ಕಮಲಪೀಠಾದಿಸುರರು ಭ್ರಮಿಸುವ ತವಪಾದ ಕಮಲಕೃಪೆಯಿತ್ತೆನಗೆ ವಿಮಲಪತಿಯೆ ನೀಡೊ 2 ಭವಮಾಲೆ ಗೆಲಿಸೆನ್ನ ದಯದಿಂದ ಸಲಹಯ್ಯ ಭವರೋಗವೈದ್ಯನೆ ದಯಾಕರ ಶ್ರೀರಾಮ 3
--------------
ರಾಮದಾಸರು
ವಾಣಿ ಪರಮಕಲ್ಯಾಣಿ ನಮೋ ನಮೋ ಅಜನರಾಣಿ ಪಂಕಜಪಾಣಿ ಪ. ಭಳಿರೆ ಭಳಿರೆ ಅಂಬೆ ಭಕ್ತಜನಸುಖದಂಬೆಸುಳಿದಾಡು ಶುಭನಿತಂಬೆ ಅಮ್ಮ ನಿಮ್ಮಹೊಳೆ ಹೊಳೆವ ಮುಖ ಮುಕುರ ಬಿಂಬೆಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಬೊಂಬೆ 1 ವಾಗ್ದೇವಿ 2 ಜಯಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆದಯಮಾಡು ಧವಳಗೀತೆ ಸತತ ಶ್ರೀಹಯವದನ ಪದಕೆ ಪ್ರೀತೆ ಇಳೆಯೊಳಗೆನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ 3
--------------
ವಾದಿರಾಜ
ಸರ್ವಾಂತರ್ಯಾಮಿ ಸರ್ವೇಶ ಬಾರೊ ಸರ್ವಸ್ವತಂತ್ರನೆ ಸರ್ವಭಯನಾಶ ಪ ಸರ್ವತಂತ್ರನೆ ಸರ್ವವೇದದಿ ಸರ್ವತತ್ತ್ವದಿ ಸರ್ವಸಾಕ್ಷಿ ನೀ ಸರ್ವವ್ಯಾಪಕ ಸರ್ವದೇವರ ಸಾರ್ವಭೌಮ ಅ.ಪ ಜಡಬೊಂಬೆ ನಾಟಕರಚಿಸಿ ಎಡಬಿಡದೆ ಕುಣಿಸ್ಯಾಡುವಿ ಕಡುಮೋಹಗೊಳಿಸಿ ಕಡುಗೌಪ್ಯದದರೊಳು ನೆಲೆಸಿ ನೀನೆ ಅಗಣಿತ ಕಲ್ಪನೆವೆರಸಿ ಜಡಕೆ ಜಡವಾದ ತೊಡರಿನಾಟದ ಕೆಡಕು ತಪ್ಪಿಸಿ ಪಿಡಿದು ಎನ್ನನು ಒಡೆಯ ನಿನ್ನಡಿ ಭಕ್ತರಾವಾಸ ದಿಡು ಎಂದೆರಗುವೆ ಪಾಲಿಸಭಯ 1 ನಾನಾವಿಧದ ಸೃಷ್ಟಿಗಳ ಸೃಜಿಸಿ ಪೋಣಿಸಿ ಮಾಡಿಟ್ಟ ಭವವೆಂಬ ಮಾಲೆ ಏಳು ಮೋಹವ ತುಂಬಿದೆಲ ಪುಸಿ ಕಾಣದಂತೊಗೆದಿ ಮಹಾಮಾಯದ ಜಾಲ ನಾನು ನೀನೆಂಬ ಜಾಣರೆಲ್ಲ ಬಿದ್ದು ಏನುಕಾಣದೆ ತ್ರಾಣಗೆಟ್ಟರು ಹೀನಮತಿ ನಾನೇನು ಬಲ್ಲೆನು ನೀನೆ ಸಲಹೆನ್ನ ದೀನರಕ್ಷಕ 2 ಪಾವನ ಪರಮಪ್ರಕಾಶ ದೇವ ಭಾವಜನಯ್ಯ ನಿಜಭಾವಿಗಳರಸ ಕೇವಲಸುಗುಣಾಂತರ್ವಾಸ ನಿನ್ನ ಸೇವಕನೆನಿಸೆನ್ನ ಕಾಯೊ ನುತಪೋಷ ಜೀವಜೀವರಜೀವ ಚೈತ್ಯನದೇವ ದೇವರ ದೇವ ನಂಬಿದೆ ಜಾವ ಜಾವಕೆ ಒದಗುತಿಹ್ಯ ಮಹ ನೋವು ಗೆಲಿಸೆನ್ನಯ್ಯ ಶ್ರೀರಾಮ 3
--------------
ರಾಮದಾಸರು