ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಯರ್ಡನಾಡ ವಿಷ್ಣುಮೂರ್ತಿ) ಸಾರಥಿ ಪ. ಶಿಷ್ಟರಾಯಸದ ಸಜ್ಜನರ ಮೇಲ್ಕರುಣಾ ದೃಷ್ಟಿಯಿಂದಲಿ ಉಭಯಾರ್ಥದ ಪುರದಿ ಕಷ್ಟಪಾಶವ ಕಡಿದರಿಗಳ ಗೆಲಿಸುತ ಭೀಷ್ಟ ಕೊಡುವ ಸರ್ವೋತ್ಕøಷ್ಟ ಪರೇಶಾ 1 ಕ್ಷೋಣಿಸುತೆಯ ಚೂಡಾಮಣಿಯ ಬೇಗದಿ ತಂದ ಪ್ರಾಣನಾಥನು ಸುಪ್ರವೀಣನೆಂದದಿರು ಕಾಣಿಕೆ ಕಪ್ಪ ಪೂಜೆಗಳ ತನ್ಮತದಿಂದ ಮಾನಿಸಿಕೊಳುತಿಹ ಮನ್ಮಥ ಜನಕ 2 ನಿನ್ನ ಕಟಾಕ್ಷ ಸಂಪೂರ್ಣ ಪೊಂದಿಹರಾ ಹೆಂಣಾ ತಂದಿಹನಾ ಮೇಲಿರಿಸು ಪದ್ಮ ಕರಾ ಪನ್ನಗಚಲವಾಸ ಪವಮಾನವಂದಿತ ನಿನ್ನ ದಾಸರ ದಾಸ್ಯ ದಯಮಾಡು ಸುಪ್ರೀತ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಸರಸ್ವತೀ ಪ್ರಾರ್ಥನೆ) ಏನೇ ಸರಸ್ವತಿಯಮ್ಮಾ ಬಹು ಮಾನದಿ ಪಾಲಿಸು ನಮ್ಮಾ ಆ ನಳಿನಜ ಚತುರಾನನನೊಲಿಸಿದ ಶ್ರೀನಿವಾಸನ ಪರಮಾನುರಾಗದ ಸೊಸೆ ಪ. ಮೂಢತನವನೆಲ್ಲ ಕಳಿಯೆ ದಯ ಮಾಡಿ ನೀ ಮನಸಿಗೆ ಹೊಳಿಯೆ ಬಾಡದ ಪದ್ಮದ ಕಳೆಯೆ ಮನೋ ರೂಢ ಮಲವ ಬೇಗ ತೊಳಿಯೆ ಆಡುವ ಮಾತುಗಳೆಲ್ಲವು ಕೃಷ್ಣನ ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ 1 ರಾಜಿಕಲೌಕಿಕವಾದ ಬಹು ಸೋಜಿಗಕರಿಪೂರ್ಣಮೋದ ಈ ಜಗದೊಳು ಮುಖ್ಯವಾದ ಸುಗು- ಣೋಜೊಧಾರಣ ಕಲ್ಪಭೂಜ ಮಂದ ವೈರಿಗಳ ಸ- ಮಾಜವ ಗೆಲಿಸುತ ರಾಜಿಸು ಮನದಲಿ 2 ಕರಣಾಭಿಮಾನಿಗಳನ್ನು ಉಪ ಕರಣರ ಮಾಡುವದನ್ನು ಕರುಣೀ ನೀ ಬಲ್ಲಿನ್ನು ಮುನ್ನ ಮನ ವರತು ರಕ್ಷಿಸು ಬೇಗೆನ್ನನು ಸರಸಿಜಾಕ್ಷ ಶೇಷಗಿರಿ ವರಪದಕಂಜ ಸ್ಮರಣೆ ಮಾಡುವಂತೆ ಕರುಣಿಸೆನ್ನನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯದೇವ ಜಯದೇವ ಜಯದೀನದಯಾಳಾ ಜಯಜಯ ಶ್ರೀಗುರು ಮಹಿಪತಿ ಭವತಾರಕ ಲೀಲಾ ಪ ಮರವಿನ ಕತ್ತಲಿಯೊಳಗೆ ಮುಂದುಗಾಣದಲಿರಲಿ ಅರವಿನದೀಪವ ಹೆಚ್ಚಿ ದೋರುತಲೀ ಸ್ಥಿರವನು ಗೊಳ್ಳದ ಚಿತ್ತವ ಭಜನಿಗೆಲಿಸುತಲಿ ಹರಿಸಿದ ವಿದ್ಯದಗೃಂಥಿಯ ಸಂಶಯ ಬಿಡಿಸುತಲಿ 1 ಪರಿಪರಿಯಿಂದಲಿಗರದು ಬೋಧನಾಮೃತನುಡಿಯಾ ಅರಹಿಸಿಯೋಗದ ಮಾರ್ಗವ ಸಾಂಖ್ಯದನಿಲ್ಲ ಕಡಿಯಾ ಕರಣೀಂದ್ರಿಯಗಳ ವಡದಾಸ್ವಾನಂದದಯಡಿಯಾ ಕರುಣಿಸಿ ವಿಶ್ವಂಭರಿತದ ತೋರಿದೆ ಇತ್ಥಡಿಯಾ 2 ನಿನಗುತ್ತೀರ್ಣವಕಾಣದೇ ತನುವಾರತಿ ಮಾಡೀ ಮನವೇದೀಪವು ಸದ್ಭಾವನೆ ಆಜ್ಯನೀಡಿ ಅನುದಿನ ಬೆಳಗುವ ನಂದನುಮಹಿಮೆಯ ಕೊಂಡಾಡಿ ಚಿನುಮಯಸುಖದೊಳು ಬೆರೆದಾಹಂಭ್ರಮ ಈಡಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು