ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿ ಶರಣರಸುರತರು ಶ್ರೀಕರ ಹರಿ ನಿಮ್ಮ ಪಾದಸ್ಮರಣೆ ಮರೆಯಲಾರೆನೆಂದೆಂದು ಪ ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ ಅರಲವ ಬಿಡದವರ ಸ್ಮರಣೆಯೋಳ್ನೆಲೆಗೊಂಡು ತೆರೆದು ಕರುಣಚಕ್ಷು ಪೊರೆವೆ ಎವೆಯಿಕ್ಕದೆ 1 ವೇದವೇದಾದಿ ನಮಿತ ಸಾಧುಸಜ್ಜನ ವಿನುತ ಪಾದದಾಸರ ಭವಬಾಧೆಗೆಲಿಸಿ ಸು ಹಾದಿ ತೋರಿಸಿ ಬಹು ಮೋದದಿಂ ಸಲಹುವಿ 2 ನೀ ಮಾಡಿದುಪಕಾರ ನಾ ಮರೆಯಲಾರೆ ದೇವ ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ 3
--------------
ರಾಮದಾಸರು
ಲಕ್ಷ್ಮೀರಮಣ ಮರೆಯ ಹೊಕ್ಕೆ ರಕ್ಷಿಸೈ ಪಾಂಡುಪಕ್ಷನೆ ಪ ಪಕ್ಷಿವಾಹನ ದುಷ್ಟಶಿಕ್ಷ ಮೋಕ್ಷದಾಯಕ ಶಿಷ್ಟರಕ್ಷ ಅ.ಪ ತರಳ ಧ್ರುವನ ಪೊರೆದೆಯೆಲೊ ಕರಿಮೊರೆಯ ಕಾಯ್ದಯ್ಯ ಕರುಣದಿ ಕುರುಪ ಸಭೆಯಲಿ ದ್ರೌಪದಿ ಮೊರೆಯನಿಡಲಾಕೆಮಾನವ ಕಾಯ್ದಿ 1 ನರಗೆ ಸಹಯನಾಗಿ ಸಾರ ಧರೆಯ ಗೆಲಿಸಿದಿ ನಿರುತದಿ ಕರವ ಪಿಡಿದಿ ಪರಮ ಪ್ರೇಮದಿ ಒರೆದೆಲೊ 2 ಇಂದು ಎನಗೆ ಸಂಧಿಸಿದ ಮಹ ಬಂಧನವ ನಿವಾರಿಸೈ ಪಾದ ನಂಬಿದೆ ಕಂದನನು ಪೊರೆ ಶ್ರೀರಾಮ3
--------------
ರಾಮದಾಸರು