ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನು ನಿನ್ನ ಅಂಬುಜನಯನ ಬೆಂಬಿಡದೆ ಕಾಯೆನ್ನ ಶಂಬರಾರಿಪಿತನೆ ಪ ಇಂದು ನೀ ಗೆಲಿಸಯ್ಯ ಮಂದರಧರಗೋವಿಂದ ಎರಗುವೆ ಪದಕೆ 1 ಜಡಜಾಕ್ಷ ನಿಮ್ಮಡಿಗೆ ದೃಢದಿಂದ ಬೇಡುವೆನು ತಡೆಯೆನ್ನನು ಕಡೆಹಾಯ್ಸು ದುರಿತದಿಂ 2 ಜಗದೊಳಗೆ ಎನ್ನನು ನಗೆಗೇಡು ಮಾಡದೆ ಮಗನನ್ನ ಸಲಹಯ್ಯ ಖಗಗಮನ ಶ್ರೀರಾಮ 3
--------------
ರಾಮದಾಸರು
ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ಪ ವೇದ ವಾದಗಳಲ್ಲಿ | ಕಾಡುವ ಜನರಲ್ಲಿಓದುವ ವಿದ್ಯೆಗಳಲ್ಲಿ | ವಾದವ ಗೆಲಿಸಯ್ಯ 1 ಆರು ವೈರಿಗಳಲ್ಲಿ | ಅಷ್ಟ ಗಜಂಗಳಲ್ಲಿಮೂರು ಏಳರಲ್ಲಿ | ಮುಂದೆ ನೀ ಗೆಲಿಸಯ್ಯ2 ಪರಮ ಭಕ್ತಿಯೊಳ್ನಿನ್ನ | ಚರಣಕೆರಗುವೆ ಮುನ್ನಸಿರಿಯ ಪಾಲಿಪ ಚೆನ್ನ | ವರದ ಕೇಶವ ರನ್ನ3
--------------
ಕನಕದಾಸ
ಮಣಿಗಣ ಭೂಷಣ ಅಣಿಗಾಣೆನಿಮಗಿನ್ನು ಗಣರಾಯ ಗಣರಾಯ ಪ. ರುದ್ರ ಕುಮಾರನೆ ಸಿದ್ಧಿ ನಿನಾಯಕ ವಿದ್ಯವಪಾಲಿಸೊಬುದ್ಧಿದಾತನೆ ಅ.ಪ. ಆನೆಯ ಮುಖದವನ ಧೇನಿಸಿನಮಿಸುವೆ ಗಣರಾಯ1 ಶ್ರೀನಿವಾಸನ ಪ್ರಿಯ ನೀನಮ್ಮಗೆಲಿಸೆಂದು ಗಣರಾಯ2 ಹಸ್ತಿಯ ಮುಖದವಗೆ ಹಸ್ತವ ಮುಗಿದೆವಸ್ವಸ್ಥ ಮನಸು ಕೊಡು ವಿಸ್ತರ ಉದರನೆ ಗಣರಾಯ3 ಗಂಧ ಅಕ್ಷತೆ ಪುಷ್ಪ ತಂದೆ ದುರ್ವಾಂಕುರ ಚಂದದ ವಸ್ತ್ರಗಳ ಒಂದೊಂದು ಕೈಕೊಳ್ಳೊ ಗಣರಾಯ 4 ರನ್ನ ಮಾಣಿಕ ಬಿಗಿದ ಚಿನ್ನದಾಭರಣವ ನಿನ್ನ ಪೂಜೆಗೆ ತಂದೆ ಚೆನ್ನಾಗಿ ಕೈಕೊಳ್ಳೊ ಗಣರಾಯ 5 ಚಕ್ಕಲಿ ತರುಗುಮಿಕ್ಕಾಗಿ ಲಡ್ಡುಗೆ ಚಿಕ್ಕಗಣಪ ಉಂಡು ಚಕ್ಕನೆ ವರಕೊಡು ಗಣರಾಯ 6 ಚಲ್ವ ರಾಮೇಶನನೆಲೆಕಂಡ ಪುರುಷನೆಇಲಿವಾಹನ ನಮ್ಮ ಸಲುಭದಿ ಗೆಲಿಸಯ್ಯ7
--------------
ಗಲಗಲಿಅವ್ವನವರು