ಒಟ್ಟು 6 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಸಂಗಡ ಬಾಹೊರೆಲೆ ಮನುಜ ನಿನಗೆ ಹಾರೈಸಿ ಬಳಲುವೆ ಬರಿದೆ ಭವದೊಳಗೆ ಪ ಗುರುಹಿರಿಯರಗ್ನಿಯ ಪರಿಮುಖದಿ ನಿನ್ನಯ ಕರಪಿಡಿದು ಮಾಂಗಲ್ಯ ಧರಿಸಿಕೊಂಡರ್ಧ ಶರೀರವೆನಿಸುವ ಸತಿಯು ಮರಣ ಕಾಲದಿ ನಯನ ತಿರುಗುವುದ ಕಂಡಂಜಿ ತಿರಿಗಿನಿಂತಳುತಿಹ್ಯಳು 1 ತನುಜಮನುಜರಿವರೆಲ್ಲ ನಿನಗತಿಹಿತ ಬಂಧು ಮಣಿದು ಸೇವಿಪರು ನಿನ್ನನುದಿನವು ಬಿಡದೆ ತನುಬಿಟ್ಟ ಕ್ಷಣದಿ ನನನಿನಗೆನುತ ಮನೆಕೀಲಿ ಘನ ಜಗಳ ಕಾಣು ಬಿದ್ದ್ಹೆಣದ ಪರಿವಿಲ್ಲದೆ 2 ಕುಲವಿದ್ಯವ್ಯವಹಾರ ಕಳವುಕೊಲೆ ನೃಪಸೇವೆ ತಲೆ ಬಾಗಿ ಜನರಲ್ಲಿ ಬಲುದೈನ್ಯ ಬಟ್ಟು ಗಳಿಸಿ ಹೂಳಿದ ದ್ರವ್ಯ ಎಳೆದೊಯ್ಯಲ್ಯಮ ನಿನ್ನ ತಲೆಯೆತ್ತಿ ನೋಡದಲೆ ನೆಲದಿ ನಿಲ್ಲುವುದು 3 ಭೂಮಿ ನಿನ್ನದು ಎಂದು ನೇಮವನು ಬರಕೊಂಡು ಕೋಮಲ ಮನೆಕಟ್ಟಿ ತಾಮಸದಿ ನಲಿವಿ ಭೂಮಿಯ ರಿಣತೀರಿ ನೀ ಮಡಿದಾಕ್ಷಣ ಬಹಿ ರ್ಭೂಮಿಯೋಳ್ಹುತಿವರೆಲೆ ಪಾಮರ ಮನುಜ 4 ಬಂಧುಬಾಂಧವರೆಲ್ಲ ಹಿಂದೆ ಉಳಿಯುವರು ಮಂದನಾಗದೆ ತಂದೆ ಶ್ರೀರಾಮ ಪಾದಾರವಿಂದಮಂ ನಂಬಿ ಭವಬಂಧವನು ಗೆಲಿಯೊ 5
--------------
ರಾಮದಾಸರು
ಆಸೆನೀಗೋ ಹೇಸಿಮನವೆ ಕೇಶವನಂಘ್ರಿ ದಾಸನಾಗೊ ಪ ಸಕಲಭೋಗಭಾಗ್ಯ ಬರುವ ಅಖಿಲ ಸುಖದು:ಖಂಗಳೆಲ್ಲ ಭಕುತಿದಾರ್ಯಗರ್ಪಿಸಿ ಹರಿ ಭಕುತಿಯಿಂದಪಮೃತ್ಯು ಗೆಲಿಯೊ 1 ವಂದನೆ ಸ್ತುತಿ ಮಾನ ಮನ್ನಣೆ ಬಂದು ಕುಂದು ನಿಂದೆಯೆಲ್ಲ ಮಂದರಾದ್ರಿಯ ನಿಲಯಗೆಂದಾ ನಂದದಿಂ ಭವಬಂಧ ಗೆಲಿಯೊ 2 ಪೊಡವಿಸುಖಕೆ ಮೋಹಿಸದೆ ನೀ ಕೆಡುವಕಾಯಮೋಹ ತೊಡೆದು ಒಡೆಯ ಶ್ರೀರಾಮನಂಘ್ರಿ ಕಮಲ ಧೃಢದಿ ಭಜಿಸಿ ಮುಕ್ತಿ ಪಿಡಿಯೊ 3
--------------
ರಾಮದಾಸರು
ಕ್ಷಣತೋರಿ ಇಲ್ಲದಂತಾಗುವ ವಿಷಮ ಮಹ ಕನಸಿನ ಮೋಹದಿಂ ಕೆಡಬೇಡ ಮನುಜ ಪ ಹಲವು ಜನಮದಿ ಬಿದ್ದು ತಿಳಿಯದೆ ಇಹ್ಯಪರಕೆ ತೊಳಲುತ ಬಳಲುತ ತಿರುತಿರುಗಿ ಗಳಿಸಿದ ನರಜನುಮ ವಿವರಿಸಿ ನೋಡದೆ ಕಳಕೊಂಡು ಬಳಿಕಿನ್ನು ಸುಲಭವಲ್ಲೆಲೆ ಖೋಡಿ 1 ನೀರಮೇಲಣ ಗುರುಳೆಯಂತೆ ಕಾಂಬುವ ಈ ನರಕ ಮೂತ್ರದ ತನುಭಾಂಡವಿದು ಅರಿಯದೆ ಮೋಹಿಸಿ ಪರಿಪರಿ ಕುಣಿಕುಣಿದು ಪರಮ ರೌರವ ನರಕಕ್ಹೋಗ ಬೇಡೆಲೆ ಖೋಡಿ 2 ಜವನÀದೂತರು ಬಂದು ಕವಿದುಕೊಳ್ಳಲು ಆಗ ಕಾಯುವರಾರಿಲ್ಲ ಕೈಪಿಡಿದು ದಿವನಿಶೆಯೆನ್ನದೆ ಭವಹರ ಶ್ರೀರಾಮ ದೇವನ ನೆರೆನಂಬಿ ಭವಮಾಲೆ ಗೆಲಿಯೊ 3
--------------
ರಾಮದಾಸರು
ಮೂಕನಾಗೋ ಮನವೆ ನಿನಗೆ ಯಾಕೀ ಲೋಕ ಗೊಡವೆ ಪ ಮೂಕನಾಗಿ ಬಹುಜೋಕೆಯಿಂದ ನಡಿ ಏಕಾಂತ ಗುಟ್ಟೀ ಲೋಕರಿಗರುಹುದೆ ಅ.ಪ ಹೇಳಿದರೇನಾದೋ ನೀ ಬಲು ಕೇಳಿದರೇನಾದೊ ಹೇಳಿಕೆ ಕೇಳಿಕೆ ಗಾಳಿಯ ಮೊಟ್ಟ್ಯೆಂದು ನೀಲಶಾಮನ ಮನದಾಲಯದೊಳಗಿಟ್ಟು 1 ಅವನಿ ಗೊಡವೆ ಯಾಕೋ ಹರಿಯೆಂದು ಭವಭಯವನು ಕಳಕೋ ದಿವನಿಶಿ ನಿಜದನುಭವದೊಳಗಾಡುತ ಭವಗೆಲುವಿನ ಸುದ್ದಿ ಭವಿಗಳಿಗುಸುರದೆ 2 ಪಾದ ಪಿಡಿಯೋ ಮುಂದಿನ್ನು ಹುಟ್ಟು ಸಾವು ಗೆಲಿಯೊ ದುಷ್ಟಮತಿಗಳ ಗೋಷ್ಠಿಗೆ ಹೋಗದೆ ಬಿಟ್ಟಗಲದೆ ನಿಜಪಿಡಿದು ನೀತಿ 3 ಮತ್ರ್ಯಜನರ ಇದಿರು ನೀ ಬಲು ಗುಪ್ತದಿಂದಿರು ಚದುರ ಸತ್ಯತಿಳಿದು ಹರಿ ಸರ್ವೋತ್ತಮನಂಘ್ರಿ ಚಿತ್ತದಿ ನಿಲ್ಲಿಸಿ ಅತ್ಯಾನಂದಗೂಡಿ 4 ನಂಬಿಗಿಲ್ಲದಲ್ಲಿ ಸುಬೋಧ ಡಂಬವೆನಿಪುದಲ್ಲಿ ಜಂಬವಡಿಯದೆ ಕುಂಭಿನಿಯೊಳು ನೀ ನಂಬಿ ಶ್ರೀರಾಮನ ಗುಂಭದಿಂ ಭಜಿಸುತ 5
--------------
ರಾಮದಾಸರು
ಸಿದ್ದಮಾಡಿಕೊ ಹರಿನಾಮ ಬದ್ಧನಾಗದಲೆ ಶುದ್ಧಬುದ್ಧಿಯು ನಿನ್ನೊಳಿದ್ದ ಸಮಯದಲ್ಲೇ ಪ ಕಿತ್ತಿ ಅರ್ಭಟಿಸುತ ಸುತ್ತಿದ ಮಹ ಧನುರ್ವಾಯ ಪಿತ್ತ ಕಫ ಮೇಲಕ್ಕೆ ಒತ್ತಿಕೊಂಡೊಯ್ದು ಕುತ್ತಿಗೆ ಅಡರಿಕೊಂಡೆತ್ತೆತ್ತ ಬೊಗಳಿಸುವ ಹೊತ್ತಿಗ್ಗೆ ಹರಿನಾಮ ಮತ್ತಾಗಿ ಬರದು 1 ನಾಲಗೆ ಸೆಳೆಯುವುದು ಆಲಿಗಳು ತಿರುಗುವುವು ಮೇಲಕ್ಕ್ಹರಿವುವು ನಯನ ನೀಲಗೊಂಬೆಗಳು ಕಾಲಚಕ್ರನಿಗಂಜಿ ಮಲ ಒಸರುತಿರುವಾಗ ನೀಲಶ್ಯಾಮನ ನಾಮ ನಾಲಗ್ಗೆ ಬರದು 2 ಎಂಟೆರಡು ವಾಯುಗಳ ಕಂಠನಾಳಕೆ ಸೇರಿ ಸುಂಟರಗಾಳ್ಯಂತೆ ಅಂಟಿ ಸುಳಿಸುತ್ತೆ ಮೀಂಟಿ ಕರ್ಣದಿ ಒದರಿ ಹೊಂಟೋಗ್ವ ಸಮಯ ದ್ವೈ ಕುಂಠ ನಾಮವು ತಂಟೆಗೆ ಬರದು 3 ಅಡವು ಬಂದು ಅವಯವ ಕೂಡಿಕೊಳ್ಳಲು ಸೊನ್ನೆ ಕಾಯ ನಾಡಿಗಳು ಕುಂದಿ ನೋಡಿ ಸತಿಸುತರಂ ಮಾತಾಡೇನೆಂದೆನಲಾಗ ರೂಢಿಗೀಶನ ಧ್ಯಾನ ಕೂಡಿ ಬರದಯ್ಯ 4 ಮೂಳನಾಗಿ ಸಮಯ ಹಾಳುಮಾಡಿಕೊಳ್ಳದೆ ಕಾಲನಾಳಿನ ಮಹ ಧಾಳಿಯನು ಗೆಲಿಯೊ ಕಾಲಿಮರ್ದನ ಜಗತ್ಪಾಲ ಶ್ರೀರಾಮನಡಿ ಕಾಲತ್ರದಲಿ ದೃಢದಿ ಮೇಲಾಗಿ ಭಜಿಸಿ 5
--------------
ರಾಮದಾಸರು