ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾಗುವುದು ತಾನಾಗಿದೆ ಜಗ ನೀನ್ಯಾಕದರೋಳ್ಪಾಲಿಡುವ್ಯೋ ಪ ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ ಜಾಣನಾಗಿ ಭವಗೆಲಿಯೆಲವೋ ಅ.ಪ ಸತತದಿ ಸತಿಸುತರ್ಹಿತಕಾಗಿ ಬಲು ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ 1 ಹಲವುವಿಧದಿ ನಾನೆ ದುಡಿದು ಧಾನ್ಯಧನ ಗಳಿಸಿದೆನೆಂದು ಬಲು ಭ್ರಮಿಸುವೆಯೋ ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ 2 ಎಷ್ಟುದಿನಿರ್ದರು ಬಿಟ್ಟು ಹೋಗುವುದನು ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ 3
--------------
ರಾಮದಾಸರು
ಗಿರಿವರ ತನಯೆ ಮುರರಿಪು ಸಿರಿಯೆ ಪ ಶರಣು ಬಂದವರನ್ನು ಮರೆವುದು ಥರವೆ ಅ.ಪ. ತುಟಿಯಲಿ ಸೌಭಾಗ್ಯ ಹಣದಿ ಗೆಲಿಯೆ ಸದಾಪಠಿಸಿ ಭುಂಜಿಸಿದೆಯೇ 1 ಯಕ್ಷ ಪೋಗಲು ಅವಸಾಕ್ಷಿ ಬರಲು ಸಹಈಕ್ಷಿಸಿ ಹರಿಯ ಸ್ತುತಿಸಿ ಶಿಕ್ಷೆ ನೀಡಿದೆಯೇ 2 ಆ ಸುಮುಖಗೆ ಹರ ಭೂಷಿತ ಶ್ರುತಿ ಸ್ಮøತಿರಾಶಿ ಗ್ರಂಥವ ಪೇಳಿ ನೀ ಸುಖಿಸಿದೆಯೇ ಇಂದಿರೇಶನಸೊಸೆಯೇ 3
--------------
ಇಂದಿರೇಶರು
ಮಂಗಳಂ ಶ್ರೀರಾಮಚಂದ್ರಗೆ ಜಯ ಮಂಗಳಂ ಸೀತಾಸಮೇತನಿಗೆ ಪ. ಮಚ್ಛಾವತಾರಗೆ ವೇದವ ತಂದಗೆ ಕೂರ್ಮರೂಪದಿ ಜಲದೊಳು ಪೊಕ್ಕವಗೆ ಹಿರಣ್ಯಾಕ್ಷಸುರನ ಗೆಲಿಯೆ ಬಂದು ಮೆಚ್ಚೆ ವರಹರೂಪ ತೋರಿದಗೆ 1 ಛತ್ರಿಯ ಪಿಡಿದು ಭರತ ನಿಂದಿರಲಾಗ ಶತ್ರುಘ್ನ ಚಾಮರವನು ಬೀಸಲು ಮತ್ತೆ ಲಕ್ಷ್ಮಣ ಮಡುದೆಲೆ ಕೊಡುತಿರಲಾಗಿ ವಿಸ್ತಾರ ವೈಭೋಗ ರಘುರಾಮಗೆ 2 ತಮ್ಮ ಲಕ್ಷ್ಮಣ ಸಹ ಒಲ್ಮೆಯಿಂದಲಿ ಬಂದ ನಮ್ಮ ಶ್ರೀರಘುರಾಮಚಂದ್ರನಿಗೆ ಸನ್ಮಾನದಲಿ ರಾಮ ಸಾಗರಶಯನಾಗೆ ಚೆನ್ನ ಚುಂಚನಕಟ್ಟೆಸ್ಥಿರವಾಸಿಗೆ 3 ಎಡದ ಕರದಿ ಬಿಲ್ಲು ಬಲದ ಕರದಿ ಬಾಣ ಕರದ ಕಮಲದೊಳಗಿಪ್ಪವನಿಗೆ ಸಿರಿ ಸೀತೆಯ ಧರಿಸಿದ ಚದುರ ಶ್ರೀ ಕಲ್ಯಾಣ ಚಂದ್ರನಿಗೆ 4 ಹರುಷದಿ ದೇವತೆಗಳಿಗೊರವಿತ್ತಗೆ ದುರುಳ ರಕ್ಕಸರ ಸಂಹರಿಸಿದಗೆ ಪರಮ ಭಕ್ತನಿಗೆ ಸ್ಥಿರರಾಜ್ಯವನೆ ಕೊಟ್ಟ ಹಯವದನಮೂರ್ತಿ ಎಂದೆನಿಸಿದಗೆ 5
--------------
ವಾದಿರಾಜ
ಮನವೆ ಎಲೆ ಮನವೆ ನೀನು ಯೋಚಿಸಿ ಕೆಡುವುದು ಅನುಚಿತವಲ್ಲೆ ಪ ನೀ ಮನನಮಾಡಿದ ಸಂಸಾರಿರದು ಕಾನನದ ಬೆಳದಿಂಗಳು ಇದು ಪರಿ ತಿಳಿದು ಹೀನಯೋಚನೆ ಬಿಟ್ಟು ಧ್ಯಾನಕವಚ ತೊಟ್ಟು ಜ್ಞಾನವೆಂಬಾಯುಧಪಾಣಿಯಾಗೆಲೊ ಬೇಗ 1 ಈ ದೇಹವೆಂಬುವ ಕಾಂತಾರ್ಹೊಕ್ಕು ಉಪಾ ಯುದ್ಹುಲಿಗಳ ತರಿದ್ಹಾಕು ಮಹಮಾಯ ಕೋಣಗಳೆಂಟು ನೂಕು ದಾಯಾದ್ಯೈವರ ಕೊಂದು ಜೀವಘಾತಕರಾದ ಮೂವರಂ ಭಂಜಿಸಿ ದ್ವಯಮಾರ್ಗ ಗೆಲಿಯೆಲೊ 2 ಕಂಟಕ ಬದಿಗಿಟ್ಟು ಬಹ ಆರೊಂದು ನದಿಗಳ ದಾಂಟು ಭೋರ್ಗರೆವ ಸರ್ಪನ ಹೆಡೆ ಮೆಟ್ಟು ಮಾರಾರಿ ವಿನಮಿತ ಧೀರ ಶ್ರೀರಾಮಪಾದ ವಾರಿಜಕ್ಕೆರಗಿ ಗಂಭೀರ ಸುಖದಿ ಮೆರಿ 3
--------------
ರಾಮದಾಸರು