ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ತಿರುವಂಗೂರು ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ ಪ ಪರಾಕು ವಾರಿಸುವ ಪಾಠಕರ ಮೇಳದಿಂ ರಾಮನೂ ಅ.ಪ ಮುತ್ತು ನವರತ್ನ ಕೆತ್ತಿಸಿ ಬಿಗಿದಚಲ್ಲಣದ ಇತ್ತರದ ಸಮಕಟ್ಟಿನಾ ಝಲ್ಲಿಯಾ ಸುತ್ತ ಮುಖದಲಿ ಮಿನುಗುವರಳೆಲೆಯ ಢಾಳದಿಂ ದೊತ್ತಿಸಿದ ಕಡಿವಾಣದಾ ಮುಖಾರಂಬದಾ ಕತ್ತಿ ಸಿಂಗಾಡಿ ಕೆಡೆಯ ಬತ್ತಳಿಕೆ ಬಿಗಿ ದೊತ್ತಿ ಕುಣಿಕುಣಿದು ಬರುವಾ ತೇಜಿಯಾ ಅರ್ತಿಯಿಂ ರಾಮರಾವುತನೇರಿ ದೈತ್ಯವಿಪಿನಕ್ಕೆ ಪೊರಮಟ್ಟೈದಿದಾ ರಾಮನೂ 1 ಸುರರು ಫೌಜಾಗಿ ತೋರಲು ಸೋಮಸೂರಿಯರು ವರಛತ್ರವನುವಾಗಿ ಪಿಡಿದು ನಿಲಲೂ ಸರಸಿಜೋದ್ಭವನು ಸಾರಥಿಯಾಗಿ ನಡೆಸುತಿರೆ ವರರಥವ ಸಿಂಗರಸಿ ಹರಿ ಸ್ಮರಿಸಿ ತನ್ನಾ ವರವಾಹನವನೇರಿ ಚರಿಸುತುತ್ಸಾಹದಿಂ ತ್ವರದಿಂದ ನಡೆಯುತಿರಲೂ ಖರದೂಷಣ ತ್ರಿಶಿರ ಮಾರೀಚ ಮೃಗಕುಲವ ತರಿದು ಬೇಟೆಯನಾಡಿದಾ ರಾಮನೂ 2 ದಶಶಿರ ಕುಂಭಕರ್ಣ ಮೊದಲಾಗಿದ್ದ ಖ ಳರ ಖಂಡಿಸಿ ಕದನದಲ್ಲಿ ಗೆಲಿದೂ ಮರೆಹೊಕ್ಕ ವೀರವೈಷ್ಣವ ವಿಭೀಷಣನೆಂಬ ಶರಣನನು ಪರಿಪಾಲಿಸಿ ಜಗದೊಳೂ ಪರಿವುತಿಹ ಕಾವೇರಿ ಉತ್ತರದ ಭಾಗದಲಿ ಮೆರೆವ ತಿರುವಂಗೂರಿನಲೀ ಸುಖದಲೀ ಸ್ಮರರೂಪ ವೈಕುಂಠರಾಮ ಬೇಟೆಯನಾಡಿ ಪರಮ ಹರುಷದಿ ಬಂದು ನಿಂದ ಸಂಭ್ರಮದಿ 3
--------------
ಬೇಲೂರು ವೈಕುಂಠದಾಸರು
ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ 1 ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ 2 ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ 3
--------------
ಶ್ರೀಶಪ್ರಾಣೇಶವಿಠಲರು
ಯೇನು ನೆಲೆ ಯೆನುತಿಹೆ ಮನುಜಾ ನಿ ಧಾನಿಸು ಗತಿಯಚ್ಯುತನಲ್ಲದುಂಟೇ ಪ ಹುಲ್ಲುಹನಿಯು ಗಾಳಿಗಿಟ್ಟ ಸೊಡರು ನೀರ ಗುಳ್ಳೆಗಳದು ತಾ ಸ್ಥಿರವೆನಿಪಾ ಜಳ್ಳು ಜವ್ವನವ ನಿಶ್ಚಯವೆಂದು ಕಾಲನ ಭಲ್ಲೆಯಕೆದೆಯನೊಡ್ಡುವೆಯಾತಕೆ ನೀ 1 ಮಿಂಚಿನ ಬಲೆಯ ರಕ್ಷೆಯ ಮನ ಸುದತಿಯಾ ಚಂಚಲತೆಯ ಜೀವರ ಗೆಲಿದೂ ಪ್ರ ಪಂಚಿನ ಸಿರಿಯ ನಿಶ್ಚಯವೆಂದು ಬಗೆದು ನೀ ಮುಂಚುವೆಯೇಕೆ ನರಕಪತಿ ಕರೆಗೇ 2 ಸುರಚಾಪವೋಲೀ ದೇಹದ ಸಂ ಗರದಿ ಸೋಲುವ ಶರೀರವ ನಂಬೀ ನರಕಕೂಪಕ್ಕಿಳಿಯದೇ ವೇಲಾಪುರ ದರಸ ವೈಕುಂಠ [ಕೇಶವ] ಶರಣೆನ್ನೇ 3
--------------
ಬೇಲೂರು ವೈಕುಂಠದಾಸರು