ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆ ಬಂದಿದೆ ಇದಿಗೊ ಮದ್ದಾನೆ ಪ ಜ್ಞಾನಿಗಳೊಳಾಡುವ ಮದ್ದಾನೆ ಅ ದೇವಕಿಯೊಳು ಪುಟ್ಟಿದಾನೆ - ವಸುದೇವನ ಪೆಸರೊಳೈತಂದ ಮದ್ದಾನೆಶ್ರೀ ವಾಸುದೇವನೆಂಬಾನೆ - ಗೋಪಿದೇವಿಯ ಗೃಹದೊಳಾಡುವ ಪುಟ್ಟಾನೆ 1 ನೀಲವರ್ಣದ ನಿಜದಾನೆ - ಸ್ವರ್ಣಮಾಲೆಗಳಿಟ್ಟು ಮೆರೆವ ಚಲುವಾನೆಶ್ರೀಲೋಲನೆನಿಪ ಪಟ್ಟದಾನೆ - ದುಷ್ಟಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ 2 ಬಾಲೇಂದು ಮುಖದ ಮರಿಯಾನೆ - ಕದ್ದುಪಾಲನ್ನು ಕುಡಿದ ಮರಿಯಾನೆಕೈಲಿ ಗಿರಿಯನೆತ್ತಿದಾನೆಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ 3 ಧೇನುಕಾಸುರನ ಕೊಂದಾನೆತನಗೆ ಜೋಡಿಲ್ಲದಿಹ ನಿಜದಾನೆಮಾನವರಿಗೆಲ್ಲ ಸಿಲ್ಕದಾನೆಶೌನಕಾದಿಗಳೊಂದಿಗಿಪ್ಪಾನೆ 4 ಮಲ್ಲರೊಡನೆ ಗೆಲಿದಾನೆ - ಕಡುಖುಲ್ಲ ಕಂಸನ ಕೆಡಹಿದಾನೆ - ವಿದ್ಯೆ ಸಾಂದೀಪರಲಿ ಕಲಿತ ಮರಿಯಾನೆಸಲೆ ಭಕ್ತರ ಕಾವ ಪುಟ್ಟಾನೆ 5 ತರಳೆ ರುಕ್ಮಿಣಿಯ ತಂದಾನೆ - ಬಹುಕರುಣದಿಂ ಪಾಂಡವರ ಪೊರೆದಾನೆವರ ವೇಲಾಪುರದೊಳಿಪ್ಪಾನೆಸಿರಿಯಾದಿಕೇಶವನೆಂಬ ಮದ್ದಾನೆ 6
--------------
ಕನಕದಾಸ
ಆವ ಬಲವಿದ್ದರೇನು - ವಾಸುದೇವನಾ ಬಲವು ನಿಜವಾಗಿ ಇರದನಕ ಪ ನೊಸಲಗಣ್ಣನ ಬಲ ನಾಲ್ಕು ತೆರದ ಬಲತ್ರಿಶುಲ ಡಮರು ಅಗ್ನಿ ಫಣಿಯ ಬಲವುಪಶುಪತಿಯ ರೂಪಿನ ಬಲದ ಶಿಶುಪಾಲನಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ 1 ಹರನ ಕರುಣದ ಬಲವು ಸುರರ ಗೆಲಿದಾ ಬಲವುಪರಮ ಶಕ್ತಿಯು ತನ್ನ ಭುಜದ ಬಲವುಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನಶಿರವ ಹರಿ ವರಾಹನಾಗಿ ತರಿವಾಗ2 ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲಘನ್ನ ಲಂಕಿಣಿಯ ಕಾವಲಿನ ಬಲವುತನ್ನ ವಂಶದ ಬಲವುಳ್ಳ ರಾವಣನ ಶಿರವಸನ್ನುತ ರಾಘವ ಪಟ್ಟನೆ ಪಾರಿಸುವಾಗ 3 ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲಹಿಂಗದೆ ಹರನು ಬಾಗಿಲ ಕಾಯ್ದ ಬಲವುಮುಂಗೈಯ ಶಕ್ತಿ ಸಾವಿರ ತೋಳ ಬಾಣನತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ 4 ಈಸು ದೇವರ ಬಲಗಳಿದ್ದರೆ ಫಲವೇನುವಾಸುದೇವನ ಬಲವಿಲ್ಲದವಗೆದೇಶಕಧಿಕ ಕಾಗಿನೆಲೆಯಾದಿಕೇಶವನಲೇಸಾದ ಚರಣ ಕಮಲದ ಬಲವಿರದನಕ 5
--------------
ಕನಕದಾಸ
ಗಿರಿಜೇಶಾ ಕರುಣಾ ಸಮುದ್ರ ಪರಿಪಾಲಿಸೆನ್ನನು ಓ ರುದ್ರ ಪ ಪುರಹರ ಉರುಗಭೂಷಾ ಶರಣತೋಷಾಭವ ಭೂತೇಶಾ ಅ.ಪ ಬಳಲುವೆನುಬೇಡಿಕೊಂಬೆನು ಪಾಲಿಸೊ ನೀನು 1 ಅನುದಿನದಿ ಶ್ರವಣ ಮನನವ ಮಾಡಿಸಿ ಘನಪಾಪವ ಖಂಡ್ರಿಸುದೇವ ಮೃತ್ಯುಂಜಯ ಶಿವ 2 ಕಾಮನಗೆಲಿದಾ ಮಹಾಮಹಿಮನೆ ಗುರು- ರಾಮವಿಠಲನ ಸಖನೆ ನಿನ್ನ ಪ್ರಾರ್ಥಿಸುವೆನಾ 3
--------------
ಗುರುರಾಮವಿಠಲ
ದೇವ ದೇವತೆಗಳ ಸ್ತುತಿ ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮತಾಯಿ ತಂದೆಯು ಕಲಿಸಿದ ಪೂಜೆ ಪ ಜಾತಕರ್ಮಕೆ ನಾಮಕರಣಕೆ ಚೌಲಕೆಸಾತಿಶಯಾಕ್ಷರ ಪ್ರಾರಂಭಕೆನೂತನ ವಿದ್ಯಾರಂಭಕೆ ಮುಂಜಿಗೆಯಾತಕೂ ಶ್ರೀ ಗಣಪತಿ ಜಯ ಜಯವೆಂದೂ 1 ಮದುವೆಗೆ ಋತುಶಾಂತಿಗೆ ಸೀಮಂತಕೆಮುದದಿಂದ ಜನನವ ಬರೆವುದಕೆಸದಮಲ ಯಜ್ಞಾರಂಭಕೆ ಸಮರಕೆಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ2 ಪರ ಉಪಕಾರಕೆಜ್ಞಾನಮಾರ್ಗಕೆ ಗಾನಕೆ ಗೀತೆಗೆನಾನಾವಿಧ ಸುವ್ರತ ತೀರ್ಥಯಾತ್ರೆಗೆನೀನೆ ಗತಿ ಗಣಪತಿ ಜಯ ಜಯವೆಂದೂ 3 ಕೆರೆ ಕಾಲುವೆ ಕೂಪಗಳ ವಿಸ್ತಾರಕೆಸುರಗೃಹ ರಥ ಉತ್ಸವ ಪೂಜೆಗೆಸರಸ ಸರೋವರಗಳ ನಿರ್ಮಾಣಕೆಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ 4 ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದಗರುಡಗೆ ಅಮೃತವು ಸಿದ್ಧಿಸಿತುವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶಶಿರನ ಗೆಲಿದನೆನೆ ಗಣಪತಿ ಜಯವೆಂದೂ 5 ದ್ವಾಪರಯುಗದಲಿ ಧರ್ಮರಾಯನು ನಿಮ್ಮನೇ ಪೂಜಿಸಿ ಕೌರವರ ಗೆಲಿದಾಭೂಪರ ಜೈಸಿ ತುರಗವ ತಂದ ಸಾಂಬನುಶ್ರೀಪತಿನುತ ಗಣಪತಿ ಜಯ ಜಯವೆಂದೂ6 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮಮೋಹದ ಪುತ್ರ ಪಾವನತರಗಾತ್ರವರದ ಶ್ರೀ ಗಣಪತಿ ಜಯ ಜಯ ಜಯವೆಂದೂ 7
--------------
ಕೆಳದಿ ವೆಂಕಣ್ಣ ಕವಿ
ಬಂಟ ಬುದ್ಧಿವುಳ್ಳ ಹನುಮಂತಹದ್ದಾಗಿ ಹಾರಿದÀನೆ ಆಕಾಶಕೆನಿದ್ರೆಗೈವ ಸಮಯದಲಿ ಎದ್ದು ಬಾರೆಂದರೆ ಅಲಿದ್ದÀ ರಕ್ಕಸರನೆಲ್ಲ ಗೆಲಿದಾತನೆ 1 ಬಂಟ ಹನುಮಂತನ ನೋಡಿ-ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿಮರನೇರಿಕೊಂಡಾತನೆ2 ಬಂಟ ಹನುಮಂತನೆಸೀತಾದೇವಮ್ಮನಿಗೆ ಪ್ರೀತಿಯ ಬಂಟನಾದಮುಖ್ಯ ಪ್ರಾಣ ಹಯವದನನ ದೂತನೆ 3
--------------
ವಾದಿರಾಜ
ಈತನೀಗ ಶ್ರೀನಿವಾಸನೂ ಶ್ರೀರಂಗನೂಈತನೀಗ ಶ್ರೀನಿವಾಸನೂ ಪಈತನೀಗ ಶ್ರೀನಿವಾಸ ಈತ ಸಕಲಾ ಲೋಕಕೀಶಈತ ಭೂತಪತಿಯ ಪ್ರೀತ ಈತ ಲಕ್ಷ್ಮೀಕಾಂತ ಖ್ಯಾತ ಅ.ಪಕೌಸಲ್ಯಾತ್ಮಜಾತನೆನಿಸಿದ ಶ್ರೀ ರಾಮಚಂದ್ರಕೌಶಿಕನೊಳ್ ವಿದ್ಯ ಪಠಿಸಿದಾ ವೈಶ್ವಾನರನಸಾಕ್ಷಿಯಿಂದ ವಸುಧೆಸುತೆಯ ಒಲಿಸಿ ತಂದಕೀಶಬಲನ ಕೂಡಿ ಬಂದು ಆ ದಶಾಸ್ಯನನ್ನೆ ಗೆಲಿದಾ 1ದೇವಕೀಯ ತನಯನೆನಿಸುತಾ ಶ್ರೀಕೃಷ್ಣವನದಿಗೋವುಗಳನು ಮೇಸಿ ಚಲಿಸುತಾಹಾವಿನ್ಹೆಡೆಯ ತುಳಿದು ನಲಿದುಗೋವರ್ಧನವ ಸೆಳೆದು ಬಡಿದು ಮಾವಕಂಸನ್ನ ಗೆಲಿದು ದೇವಿ ರುಕ್ಮಿಣಿಯನು ತಂದ 2ಬಕುಳದೇವಿದತ್ತಪುತ್ರನೂ ಶ್ರೀ ವೆಂಕಟೇಶಸುಖದಿ ತಿರುಪತಿಯೊಳು ನಿಂತನೂಯುಕುತಿಯಿಂದ ಪದ್ಮಾವತಿಯ ಸಕಲವೈಭವದಲಿ ವರಿಸಿ ಭಕುತರನ್ನ ಪೊರೆವ ಗೋವಿಂದದಾಸನೊಡೆಯನಿವನೂ 3
--------------
ಗೋವಿಂದದಾಸ
ಕೋಲುಹಾಡುಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದಕೋಲು ಆನಂದಮುನಿ ಪಿಡಿದಿಹ ಕೋಲೆ ಪ.ತಮನೆಂಬುವನ ಕೊಂದು ಕಮಲಜನಿಗೆ ವೇದಕ್ರಮದಿಂದ ಕೊಟ್ಟು ಜಗವನು ಕೋಲೆಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದವಿಮಲ ಶ್ರೀಮತ್ಸ್ಯಮನೆದೈವ ಕೋಲೆ1ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆಗಿರಿಗಹಿ ಸುತ್ತಿ ಕಡೆಯಲು ಕೋಲೆಗಿರಿಗಹಿ ಸುತ್ತಿ ಕಡೆಯಲುನಗಜಾರೆಧರಿಸಿದ ಶ್ರೀಕೂರ್ಮಮನೆದೈವ ಕೋಲೆ2ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆಮಂಗಳಮಹಿಮ ದಯದಿಂದ ಕೋಲೆಮಂಗಳ ಮಹಿಮ ದಯದಿಂದ ನೆಗಹಿದ್ಯಜ್ಞಾಂಗ ಶ್ರೀವರಾಹ ಮನೆದೈವ ಕೋಲೆ 3ಒಂದೆ ಮನದೊಳಂದು ಕಂದ ನೆನೆಯಲಾಗಬಂದವನಯ್ಯನ್ನೊದೆದನು ಕೋಲೆಬಂದವನಯ್ಯನ್ನೊದೆದನು ಅನಿಮಿತ್ತಬಂಧು ನರಹರಿಯು ಮನೆದೈವ ಕೋಲೆ 4ಎದುರಿಲ್ಲವೆನಗೆಂದು ಮದವೇರಿದವನ ತ್ರಿಪದ ಭೂಮಿ ಬೇಡಿ ಗೆಲಿದನು ಕೋಲೆಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮಮುದದ ವಾಮನ ಮನೆದೈವ ಕೋಲೆ 5ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತನಿಜ ತಾತನಾಜÕ ಸಲಹಿದ ಕೋಲೆನಿಜ ತಾತನಾಜÕ ಸಲಹಿದ ಶುಭಗುಣದ್ವಿಜರಾಮ ನಮ್ಮ ಮನೆದೈವ ಕೋಲೆ 6ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿಕೌಶಿಕಕ್ರತುವ ಕಾಯ್ದನು ಕೋಲೆಕೌಶಿಕಕ್ರತುವ ಕಾಯ್ದ ರಾವಣಾಂತಕಶ್ರೀ ಸೀತಾರಾಮ ಮನೆದೈವ ಕೋಲೆ 7ಗೋಕುಲದಲಿ ಬೆಳೆದುಪೋಕದನುಜರ ಅನೇಕ ಪರಿಯಲಿ ಸದೆದನು ಕೋಲೆ ಅನೇಕ ಪರಿಯಲಿ ಸದೆದ ಪಾಂಡವಪಾಲಶ್ರೀಕೃಷ್ಣ ನಮ್ಮ ಮನೆದೈವ ಕೋಲೆ 8ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿಸತ್ಯವಾದಿಗಳ ಪೊರೆದನು ಕೋಲೆಸತ್ಯವಾದಿಗಳ ಪೊರೆದನು ಅಜವಂದ್ಯಕರ್ತಬೌದ್ಧನು ಮನೆದೈವ ಕೋಲೆ9ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆಸುಹಯವೇರಿ ಕಲಿಯನು ಕೋಲೆಸುಹಯವೇರಿ ಕಲಿಯನೆಳೆದು ಕೊಂದಮಹಾಕಲ್ಕಿ ನಮ್ಮ ಮನೆದೈವ ಕೋಲೆ 10ಹತ್ತವತಾರದಿ ಭಕ್ತಜನರ ಹೊರೆದಮತ್ತಾವಕಾಲದಿ ರಕ್ಷಿಪ ಕೋಲೆಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟಕರ್ತನ ನಂಬಿ ಸುಖಿಯಾದೆ ಕೋಲೆ 11
--------------
ಪ್ರಸನ್ನವೆಂಕಟದಾಸರು
ಹುಚ್ಚು ಹತ್ತಿತು ಹುಚ್ಚು ಹುಚ್ಚು ಜ್ಞಾನದ ಹುಚ್ಚುಹುಚ್ಚು ತಿಳಿವುದಲ್ಲ ಹುಚ್ಚನ ಗುರುವೇ ಬಲ್ಲಪನಿರ್ಮಳಾಂಗದ ಹುಚ್ಚುನಿಗಮಶಿರದ ಹುಚ್ಚುಕರ್ಮರಹಿತನ ಹುಚ್ಚುಕಮನೀಯಹುಚ್ಚು1ಸಜ್ಜನ ಸಂಗದ ಹುಚ್ಚು ಸಂತೋಷಪೂರಿತ ಹುಚ್ಚುವೆಚ್ಚವಿಲ್ಲದ ಹುಚ್ಚು ಎಣಿಸಬಾರದು ಹುಚ್ಚು2ಬ್ರಹ್ಮಾನಂದದ ಹುಚ್ಚು ಭೇದರಹಿತದ ಹುಚ್ಚುಹಮ್ಮನಳಿದ ಹುಚ್ಚು ಪರಿಪೂರ್ಣ ಹುಚ್ಚು3ಮತವ ಕಡಿದಾ ಹುಚ್ಚು ಮಹತ್ತೆನಿಪಾ ಹುಚ್ಚುಸತತ ಶಾಂತಹ ಹುಚ್ಚು ಸಹಜಾನಂದದ ಹುಚ್ಚು4ಲೋಕ ಸಾಕ್ಷಿಕ ಹುಚ್ಚು ಲೋಕವುತಾನಾದ ಹುಚ್ಚುಏಕವೆಂಬ ಹುಚ್ಚು ಯಮನ ಗೆಲಿದಾ ಹುಚ್ಚು5ಆರರ ಮೇಲಣ ಹುಚ್ಚು ಅನ್ಯಮನಸ್ಕದ ಹುಚ್ಚುಚಾರುತಾಮಸಹುಚ್ಚು ಚಲನೆಯಿಲ್ಲದ ಹುಚ್ಚು6ಗುರುಭಕ್ತಿಯ ಹುಚ್ಚು ಗುರೂಪದೇಶದ ಹುಚ್ಚುಸ್ಮರಣೆ ಬಲಿದ ಹುಚ್ಚು ಸಮನಿಸಿದ ಹುಚ್ಚು7ಜ್ಯೋತಿರ್ಮಯದ ಹುಚ್ಚು ಜಾತಿ ನಿರ್ಮೂಲದ ಹುಚ್ಚುಖ್ಯಾತಿಯಾಗಿಹ ಹುಚ್ಚು ಭೇದರಹಿತದ ಹುಚ್ಚು8ಚಿನ್ಮಯ ಚಿದ್ರೂಪದ ಹುಚ್ಚು ಚಿದಾನಂದನ ಹುಚ್ಚುತನ್ಮಯವಾಗಿದೆ ಹುಚ್ಚು ತಿಳಿಯಲರಿಯುವುದು ಹುಚ್ಚು9
--------------
ಚಿದಾನಂದ ಅವಧೂತರು