ಸುಬ್ರಹ್ಮಣ್ಯ ಇನ್ನೂ ದಯೆದೋರೆಯ ಪ
ಕರ್ಮ ಬೆನ್ನ ಪಿಡಿಯುತೀಗ-ಲೆನ್ನ ಕಾಡುತಲಿದೆ ನಿನ್ನಾಶ್ರಯವ ಗೈದೆ ಅ
ಅನುದಿನ ಕೊರಗುವೆ ಅನಪತ್ಯಕೋಸುಗ ಕೊನೆಗಾಣಿಸೆಂದು ನಾ ಮಣಿಯುತ ಬೇಡುವೆ 1
ಬಲವೆಲ್ಲಿ ಕುಗ್ಗಿತು ಗೆಲವೆಲ್ಲಿ ನಿಂತಿತು ಛಲ ಬಿಟ್ಟು ಎನ್ನನೀ ಸಲಹೆಂದು ಬೇಡುವೆ 2
ಲೇಶವು ಸುಖವಿಲ್ಲ ಘಾಸಿಯಾದೆನು ಪಾವಂ-ಜೇಶನೆ ತವಪದ ದಾಸರ ಮೇಲೆ ನೀ | ಇನ್ನೂ 3