ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬತ್ತಿಗೆ ಹತ್ತದ ಜ್ಯೋತಿಯು ನಡು ನೆತ್ತಿಯೊಳಿಂ ಬಿಟ್ಟು ಜತನ ಮಾಡಣ್ಣಾ ಪ ತೈಲ್ಯವು ಸರಿಯಾಗದು ನೋಡು ಅಶುದ್ಧ ಮೈಲಿಗೆಯಿದ್ದರೆ ಕಳದೀತು ಕೈಲಾಸಪತಿಯ ಧ್ಯಾನವ ಮಾಡು ಬಟ್ಟ ಬೈಲಲ್ಲಿ ಬೆಳಗಾಗುತಿದೆ ಮುಂದೆ ನೋಡು 1 ಕತ್ತಲೆ ಬೆಳಕಲ್ಲಿ ಉಳಿಯದು ಮಾಯಾ ಮೃತ್ಯುಪಾಶಗಳಲ್ಲಿ ಸುಳಿಯದು ನಿತ್ಯ ನಿರ್ಮಲವೆಂಬ ಗೆಲವದು ಪರ ವಸ್ತುವಿನೊಳಗೆ ಕೂಡಿರುವುದು ಅಣ್ಣಾ 2 ನಿಂದಿಹ ನಿಜಕೆ ತಾ ನಿಲುವದು ಪರ ದ್ವಂದ್ವಾಕಾರಗಳೆಲ್ಲ ಗೆಲುವದು ಕುಂದು ದುಷ್ಕರ್ಮವ ಕೊಲುವದು ವಿಮಲಾ ನಂದನ ಚರಣಕೆ ಸಲುವದು ಅಣ್ಣಾ 3
--------------
ಭಟಕಳ ಅಪ್ಪಯ್ಯ
ಭೃಂಗ ಭಕ್ತ ಕಾಮಿತಾರ್ಥದ ಮಂಗಳಾಂಗ ತಾಮಸಬಲ ನಿಗ್ರಹಣ ಪತಂಗ ಭ ವಾಮಯಹರ ಭಾರತಿ ಮುಖ ಸಂಗ ಪ. ಮಾನ ಸೇವರಾತಿ ಭೂಪ ಭಾನುಸರಣ ಸುಪ್ರತಾಪ ದೈತ್ಯ ಕ್ಷೋಣಿ ಸಂದರ್ಶಿತ ಕೋಪ ಜಾನಕಿವರನ ನಿಜಾನುಗನೆನಿಪ ಮ- ಹಾನುಭಾವ ಪವಮಾನ ದಯಾಪರ 1 ಇಂದು ಕುಲದಿ ತಾ ಜನಿಸಿ ನಿಜ ಬಂಧುಗಳನು ಸತ್ಕರಿಸಿ ಇಂದಿರೆಯರಸನ ಒಲಿಸಿ ಜರಾ- ಸಂಧ ಮುಖರನು ಸಂಹರಿಸಿ ಒಂದೇ ಕ್ಷಣದಿ ಸೌಗಂಧಿಕ ಕುಸುಮವ ತಂದು ಮಡದಿಗಾನಂದ ತೋರಿದ 2 ಕಲಿಯುಗದೊಳು ತಾ ಬಂದು ಮಾಯಿ ಬಲಿ ಭುಜರನು ಗೆಲವಂದು ಜಲಜನಾಭವ ಕರೆತಂದು ರೌಪ್ಯ ನಿಲಯದಿ ಸ್ಥಾಪಿಸಿ ನಿಂದು ಚೆಲುವ ಶೇಷಗಿರಿ ಪತಿಗತಿಯೆಂದು ನೆಲೆಯ ತೋರಿದ ಪುರುಕರುಣಾಸಿಂಧು 3
--------------
ತುಪಾಕಿ ವೆಂಕಟರಮಣಾಚಾರ್ಯ