ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯ ಏಳಯ್ಯ ಬೆಳಗಾಯಿತೂ ಪ ಸುಳಿ | ನಾಭಿ ಸಂಭವ ಸುತನೆ ಅ.ಪ. ಸಾಮಜ ವರದ ಶ್ರೀರಾಮ ಬಂದಿಹನಯ್ಯ | ಭೂಮಿಜೆಯ ಪುಡುಕಲ್ಕೆ |ನೇಮದಿಂದಲಿ ನೀನು | ಶ್ಯಾಮಲಾಂಗನ ಕಂಡುಭೂಮ ಗುಣನಿಧಿ ಸು | ಪ್ರೇಮ ಪಡೆ ಹೊತ್ತಾಯಿತು 1 ತಾಲಸಪ್ತವ ಹಣಿಸು | ವಾಲಿ ಮಥನ ಗೈಸುನೀಲ ಜಾಂಬವ ಸುಷೇ | ಣಾದಿಗಳ ಕರೆ ಕಳಿಸು |ಶ್ರೀಲೋಲನಾಜ್ಞೆಯಲಿ | ಕಾಲಮೀರುವ ಮುನ್ನಲೋಲ ಲೋಚನೆ ವಾರ್ತೆ | ತಿಳುಹ ಬೇಕಯ್ಯಾ 2 ಬಿಂಕ ಮುರಿಯಲಿ ಬೇಕು |ಲಂಕಾಪುರದೊಳು ಮಾತೆ | ಗಂಕವೀಯಲಿ ಬೇಕುಅಂಕಕಾರನು ರಾಮ | ನಂಕೆ ಸಲಿಸಲಿ ಬೇಕು 3 ಶರಧಿ ಬಂಧಿಸಬೇಕು | ಧುರವ ಜೈಸಲು ಬೇಕುವರ ಭೂಮಿ ಜಾಕೃತಿಯ | ತ್ವರ ತರಲಿ ಬೇಕುವರ ವಿಭೀಷಣನಿಗೆ | ಅರಸುತನ ಕೊಡಬೇಕುಮರಳಿ ಅಯೋಧ್ಯಗೆ | ತೆರಳ ಬೇಕಯ್ಯಾ 4 ಉರ ರಕ್ತ ಕುಡಿಬೇಕುಧರಣಿ ಭಾರವ ನಿಳುಹಿ | ತರುಣಿ ಶಿಖೆ ಬಿಗಿಬೇಕು 5 ಅದ್ವೈತ ಗೆಲಬೇಕುಬುದ್ಧಿಪೂರ್ವಕವಾಗಿ | ಸಿದ್ದ ಮುನಿ ಜನರಿಂದಮುದ್ದುಕೃಷ್ಣನ ಪೂಜೆ | ವಿಧಿಸಲೀ ಬೇಕೂ 6 ಸಾರ ಗ್ರಂಥವ ರಚಿಸಿಮೂರ್ಮೂರು ಭಕುತಿಲಿ | ಹರಿಯ ಪೂಜಿಸಬೇಕು |ಮೂರ್ಲೋಕ ದೊರೆ ಗುರು | ಗೋವಿಂದ ವಿಠಲನಸಾರ್ವಕಧಿಪತಿಯೆಂದು | ಸಾರಲೀ ಬೇಕೂ 7
--------------
ಗುರುಗೋವಿಂದವಿಠಲರು
ಏಳಯ್ಯ ಬೆಳಗಾಯಿತು ಪ.ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರುತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯಸೆಳೆಮಂಚದಿಂದಲೇಳು ಅಪವೇದವನು ತರಲೇಳು ಮಂದರವ ಹೊರಲೇಳುಛೇದಿಸುತ ಅಸುರರನು ಭೂಮಿಯ ತರಲೇಳುಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದುಬಲಿಬಾಗಿಲೊಳಗೆ ||ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳುಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳುಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳುನಂದಗೋಪನ ಉದರದಿ 1ಪುರಮೂರ ಗೆಲಬೇಕು ಅರಿವೆಯನು ಕಳೆದೇಳುದುರುಳರನು ಕೊಲಬೇಕು ತುರಗವಾಹನನಾಗುಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||ಉರಿಗೈಯನಟ್ಟಿದರೆ ಹರನೋಡಿ ಬಂದಿಹನುಗಿರಿಜೆ ವರವನು ಬೇಡಬೇಕೆಂದು ನಿಂದಿಹಳುಸುರಪಾರಿಜಾತವನು ಕೊಂಡುಸುರರಾಜಬಂದಿರುವನೇಳಯ್ಯ ಹರಿಯೆ 2ಆಲದೆಲೆಯಿಂದೇಳು ಮಾಲಕುಮಿ ಬಂದಿಹಳುಹಾಲುಗಡಲಿಂದೇಳು ಶ್ರೀದೇವಿನಿಂದಿಹಳುಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳುಮತಿವಂತ ನೀನೇಳು ಜಾಂಬವತಿ ಬಂದಿಹಳುಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯಮಾಡಲು 3ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನುಗಂಭೀರ ಗಾಯನದ ನಾರದನು ನಿಂದಿಹನುರಂಭೆ ಮೇನಕೆ ಮೊದಲು ನರ್ತನಕೆಐದಿಹರು ಶಂಬರಾರಿಪಿತನೆ ಏಳು||ರಾಜಸೂಯವಕೊಳಲು ವಾಯುಸುತ ಬಂದಿಹನುತೇಜಿಯಾಟಕೆ ಅರ್ಜುನನು ಕರೆದು ಬಂದಿಹನುಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನುಪಿಡಿದುಕೊಂಡು 4ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದುಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿಸಾವಧಾನದಿ ಯಮುನೆ ತುಂಗಾ ಸರಸ್ವತೀಭೀಮರಥಿ ನೇತ್ರಾವತಿ ||ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊಶ್ರೀ ಪುರಂದರವಿಠಲನೆ 5
--------------
ಪುರಂದರದಾಸರು
ಮಾರುತನೆ ಏಳೆಂದು ಎಬ್ಬಿಸಿದಳಂಜನೆಯುಶ್ರೀ ರಾಮ ಸೇವೆಗೆ ತಡವಾಯಿತೇಳು ಪ.ಸೇತುಗಟ್ಟಲು ಬೇಕುಶರಧಿ ದಾಟಲು ಬೇಕುಮಾತೆಗೆ ಉಂಗುರವ ಕೊಡಲು ಬೇಕು ||ಪಾತಕಿ ರಾವಣನ ಶಿರವನ್ಹರಿಯಲು ಬೇಕುಸೀತೆಪತಿ ರಾಮರಿಗೆ ನಮಿಸಬೇಕು 1ಇಂತು ಕಳಿಯಲು ಬೇಕು ಅಙ್ಞÕತವಾಸವನುಪಂಥದಲಿ ಕೀಚಕರ ಒದೆಯಬೇಕು ||ತಂತ್ರದಲಿ ಗೆಲಬೇಕು ಶಕುನಿ ದುರ್ಯೋಧನರಕುಂತಿನಂದನನೆಂದು ಹೆಸರಾಗಬೇಕು 2ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕುತಿದ್ದಿ ಹಾಕಲು ಬೇಕು ಸಕಲಗ್ರಂಥಗಳ ||ಅದ್ವೈತವಾದಿಗಳ ಗೆದ್ದು ಕೆಡಹಲು ಬೇಕುಮುದ್ದು ಪುರಂದರವಿಠಲ ದಾಸನೆನಿಸಲು ಬೇಕು 3
--------------
ಪುರಂದರದಾಸರು