ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಸಮಯ ಜಗದೀಶ ಯಾಕೆ ಸಾವಕಾಶ ಮದಮುಖರ ಮುರಿದೊತ್ತು ಮಾಕಮಲಜೇಶ ಪ. ಕ್ಷೀರಾಬ್ಧಿ ಸುಧೆ ಸುರರ ಸೇರಿತೆಂದಸುರೇಶ ರಾರುಭಟಿಗೊಳೆ ಶಂಬರಾರಿ ಕೆಂಗೆಡಲು ಕಾರುಣ್ಯವಾರ್ಧಿ ಖಗವೇರಿ ಬಂದ ಭಯಕರ ದೋರಿದವನೆಂದರಿದು ಚೀರುವೆನು ನಿನ್ನಿದಿರು 1 ಎಷ್ಟೋ ಪರಿಯಿಂದ ಪರಮೇಷ್ಠಿವಂದ್ಯನೆ ಕೃಪಾ- ದೃಷ್ಟಿಯೆನ್ನಲಿ ನೀನಿಟ್ಟು ಸಲಹುವುದು ಅಷ್ಟಮದಮೋಹದಿಂದೆಷ್ಟಾದರೂ ಬೇಸರದೆ ನಿಷ್ಠೂರ ನುಡಿವ ಮತಿಭ್ರಷ್ಟರ ಮನದಪ್ಪದಕೆ2 ನಿನ್ನ ದಾಸರ ನಿಂದೆ ನೀ ಸಹಿಸದವನೆಂದು ಮುನ್ನ ಮುನಿಗಳು ಪೇಳ್ದ ಮುಖ್ಯ ತತ್ವವನು ಪನ್ನಗಾಚಲನಾಥ ಪಾಲಿಸುವುದುಚಿತ ಸುರ ಮಾನ್ಯ ಮಾನವಕಾವರನ್ಯರನು ನಾ ಕಾಣೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಪ ಅಷ್ಟಮದ ಮತ್ಸರಗಳೆಂತೆಂಬ ಟಗರುಗಳುದೃಷ್ಟಿ ಜೀವಾತ್ಮನೆಂತೆಂಬ ಆಡುಸೃಷ್ಟಿ ಸಿದ್ಧ ಪ್ರಸಿದ್ಧವೆಂತೆಂಬ ಹೋತಗಳುಕಟ್ಟಿ ಕೋಲಿನಲಿ ಇರಿಯುತಿಹ ನಮ್ಮಜ್ಜ 1 ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳುಕಾದಿದ್ದು ನಮ್ಮಜ್ಜನ ಹಿಂಡೊಳಗೆಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆಡಲುಆದರಿಸಿ ಅಂಬಲಿಯನೆರೆವ ನಮ್ಮಜ್ಜ 2 ಅರಿವೆಂಬ ಮರಿಗಳು ಹಿಂಡಿನೊಳಗಡೆ ಬರಲುಮರೆವೆಂಬ ವ್ಯಾಘ್ರ ಕಿರುಬ ತೋಳಗಳು ಹೊಕ್ಕುತರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ 3 ಹುಟ್ಟುದಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ 4 ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತಕಲಿಯುಗಂಗಳನೆಲ್ಲ ಪೊರೆವಾತನೀತಜಲಜಾಕ್ಷ ಕಾಗಿನೆಲೆಯಾದಿಕೇಶವನ ಮನವೊಲಿಸಿ ಭಜಿಸದ ಮನುಜ ಹುಚ್ಚು ಕುರುಬ 5
--------------
ಕನಕದಾಸ
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ಮಹಿಮೆಯನಾರು ಬಲ್ಲರುನಹಿಪ್ರತಿಯೆಂದು ನಿನ್ನ ಪಾಡುವರಲ್ಲದೆ ರಂಗ ನಿನ್ನ ಪ. ವಾಮನನಾಗಿ ಬಂದು ಬಲೀಂದ್ರನಿಗೆ ಸಂದಸೀಮೆಯನೆಲ್ಲವ ಸಲೆವಿಟ್ಟ ತ್ರಿವಿಕ್ರಮ ನಿನ್ನಸಾಮಥ್ರ್ಯವ ಶ್ರುತಿಗಳು ಪೇಳೆ ಉಗುರ್ಗೊನೆಆ ಮಹಾ ಬೊಮ್ಮಾಂಡವ ಸೀಳೆ ದೇವೇಂದ್ರನುಸಾಮ್ರಾಜ್ಯದಿ ಸುಖದಿಂ ಬಾಳೆ ಕೃಷ್ಣ ನಿನ್ನ1 ಇಂದ್ರ ಕೋಪಿಸಿ ಮಳೆಗರೆಯಲು ನಿನ್ನತಂದೆ ತಾಯಿ ಬಂಧು ಬಳಗಂಗಳೆಲ್ಲ ಕಂಗೆಡಲುಅಂದು ಬಲುಗಿರಿಯನೆತ್ತಿ ಗೋ ಗೋಪಾಲರವೃಂದದ ಭಯವ ನುಗ್ಗೊತ್ತಿ ಪಾಲಿಸಿದೆಚೆಂದದಿ ನಿನ್ನಯ ಸಂಪತ್ತಿ ಕೃಷ್ಣ ನಿನ್ನ2 ಇಂದು ಮಧ್ವಮುನೀಂದ್ರಗೊಲಿದು ಕಡುಕೃಪೆಯಿಂದತÀಂದೆ ಹಯವದನ ಮುಕುಂದ ಉಡುಪಿನೊಳಗೆನಿಂದು ಸದಾ ಪೂಜಿಸಿಕೊಂಡೆ ನಿನ್ನ ಮುಂದೆನಂದಾದೀಪಗಳನು ಕಂಡೆ ಭಕ್ಷ್ಯಭೋಜ್ಯಕಂದಮೂಲ ಫಲಂಗಳುಂಡೆ ಕೃಷ್ಣ ನಿನ್ನ 3
--------------
ವಾದಿರಾಜ
ಸಿರಿ ಹರಿಯೇ | ಎನ್ನ ದೊರೆಯೇ ಪ ಎದುರಾಳಿ ಜನ ಬಂದು | ಹದನ ಗೆಡಲು ಮನಬದಿಗ ನಾಗಿಹ ನಿನ್ನ | ಹುದುಗಿಸುತಿಹರಯ್ಯ ಅ.ಪ. ಎನ್ನ ಕಂಗಳು ನಿನ್ನಯ | ರೂಪಂಗಳಚೆನ್ನಾಗಿ ನೋಡದೆಲೆ | ವಿಷಯಾನ್ಯವ |ನನ್ನೆಯಿಂದಲಿ ನೋಡಿ | ಧನ್ಯರಾದೆವು ಎಂದುಮನ್ನಿಸುತಿಹವಯ್ಯ | ಘನ್ನ ಗೋಪಾಲನೆ1 ಕರ್ಣಗಳ್ಹದನ ಕೇಳೋ | ಶ್ರೀಹರಿ ನಿನ್ನಗುಣಗಳ ಕೇಳದಲೇ | ಯುವತೀಯರ ||ತನುಗಳೊರ್ಣನೆ ಕೇಳಿ | ಕ್ಷಣ ಕ್ಷಣಕಾನಂದಸೊನೆಯಿಂದ ತೊಯ್ದಂತೆ | ಎಣಿಸುತಿಹವು ಅಯ್ಯ 2 ಪ್ರಾಣ ಛಾದಿಯ ಪೇಳ್ವೆನೊ | ನೀ ಮುಡಿಧೂವಾಘ್ರಾಣಿಸದೆಲೆ ಕನ್ಯೇರು | ಮುಡಿದಿಹ ಪುಷ್ಪ |ಘ್ರಾಣಿಸುತ್ತಲಿ ಬಹು | ಆನಂದ ಪಡುತಲಿನಾನಾ ಜನ್ಮದಿ ದುಷ್ಟ | ಯೋನಿಗೆ ತರುವೋದು 3 ವದನದ ಪರಿಯ ಕೇಳೊ | ನಿನ್ನಯ ಗುಣಮುದದಲಿ ವರ್ಣಿಸದೆ | ಧನಿಕರ ಸ್ತುತೀ ||ವದಗಿ ಪೇಳುತ ಮುಂದೆ | ಉದರ ಕೋಸುಕವಾಗಿವಿಧಿಯ ಮಾರುತ ದುಷ್ಟ | ಸಾಧನವಾಯ್ತಯ್ಯ 4 ಸ್ಪರಿಶೇಂದ್ರಿಯರ ಸಾಧನ | ಕೇಳೆಲೊ ಹರಿಹರಿಭಕ್ತರಾಲಿಂಗನ | ಮಾಡದಲಿದ್ದುಪರಸ್ತ್ರೀಯ ಸ್ಪರಿಶಕ್ಕೆ | ಹರಿಯುವಂತಿಹುದನ್ನಪರಿಹಾರ ಗೈ ಗುರು | ಗೋವಿಂದ ವಿಠಲಯ್ಯ 5
--------------
ಗುರುಗೋವಿಂದವಿಠಲರು