ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು ಪ ಅವನ ಬದಿಯಲಿ ಗರುಡ ಮಣಿಯಿರೆ| ಹಾವಿನ ಗರಳವ ಏರುವದೇ| ಅಮೃತ ಕಲಶ ಮನೆಯೊಳಿರೆ| ಸಾವಿನ ಭಯದಿಂಬಳಲುವರೇ ರಂಗಯ್ಯಾ 1 ಹನುಮನ ಪರಿಚಾರಕರಿಗೆ ಬೆಂಬತ್ತಿ ಬಿನಗು ಭೊತಂಗಳು ತಟ್ಟುವವೇ ಅನಳನ ಹೊರಿಯಲಿ ಕುಳಿತಿರೆ ಹಿಮದಿಂದ ತನುಗುಗ್ಗರಿಸಿ ಬಿದ್ದು ಎರಗುವ ದೇನಯ್ಯಾ 2 ದುರಿತ ಬಂದು| ಕುಂದ ನಿನಗಲ್ಲವೇ ಎನ್ನವ ಗುಣಗಳ ನೋಡದೆ ರಕ್ಷಿಸು ಸನ್ನುತ ಮಹಿಪತಿ ನಂದನ ಜೀವನ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು