ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿ ನಿಮ್ಮೊಳು ನಿಜಾನಂದಬೋಧ ಕೂಡಿ ಕರುಣಾಸಿಂಧು ಶ್ರೀಗುರುಪಾದ ಧ್ರುವ ಇಡಾ ಪಿಂಗಳ ಮಧ್ಯ ನೋಡಿ ಈಗ ನಾಡಿ ಸುಷಮ್ಮವಿಡಿದು ಕೂಡಿ ಬ್ಯಾಗ ನೋಡಬಲ್ಲಿದೆ ಬ್ರಹ್ಮಾನಂದ ಭೋಗ ಗೂಢವಿದ್ಯವಿದು ತಾ ರಾಜಯೋಗ ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ ಬಡವರಿಗಳವಲ್ಲ ಗೂಢಿನ ಸೊಲ್ಲ 1 ಪಿಡಿದು ಮನಮಾಡಿ ದೃಢನಿಶ್ಚಯ ಬಿಡದೆ ಭೇದಿಸಿನೋಡಿ ಸುಜ್ಞಾನೋದಯ ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ ಪಡೆದುಕೊಳ್ಳಿರೊ ಗುರು ಕರುಣ ದಯ ಮನ ಉನ್ಮನ ಮಾಡಿ ಘನಸುಖದೊಳು ಕೂಡಿ ಅನುದಿನ ನಲಿದಾಡಿ 2 ಮೂರುಗುಣರಹಿತ ಮೂಲರೂಪ ತೋರುತಿಹ್ಯದು ನಿಜ ನಿರ್ವಿಕಲ್ಪ ತರಳ ಮಹಿಪತಿ ಪ್ರಾಣ ಪಾಲಿಪ ಹೊರೆದು ಸಲಹುವ ಗುರುಕಲದೀಪ ಭಾವಿಕರಿಗೆ ಜೀವ ಕಾವ ಕರುಣದೇವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ಹರಿ ಹರಿಯೆನ್ನಿ ಹರಿಯ ನೆನವಿಗೊಮ್ಮೆ ತನ್ನಿ ಧ್ರುವ ಹಿಡಿದು ನಿಜ ಒಂದು ¥ಥ ಪಡೆಯಬೇಕು ಸ್ವಹಿತ ನೋಡಿ ಗೂಢಿನೂಳು ಗುರುತ ಕೊಡುವ ನೋಡಿ ಗುರುನಾಥ ಒಡಯನಹುದಯ್ಯನೀತ ಪೊಡವಿಯೊಳು ಶ್ರೀನಾಥ ಮಾಡಿ ಭಕ್ತಿ ಏಕಚಿತ್ತ ಕೂಡಿ ಜ್ಞಾನಸನ್ಮತ 1 ಹಿಡಿದು ನೀವು ಗುರುಪಾದ ಮಾಡಬ್ಯಾಡಿ ಭೇದ ಕಡಿಯಬೇಕು ಕಾಮಕ್ರೋಧ ಕೂಡಿ ನಿಜಸುಭೋದ ಬೋಧ ಗೂಢಗುಪ್ತವಾಗಿಹ್ಯದ ಕೊಂಡಾಡುತಿಹ್ಯ ವೇದ ಬಿಡದೆ ಮಹಿಮೆ ನಿರ್ಗುಣದ 2 ನಾವು ನೀವುವೆಂಬ ನುಡಿ ಗೋವಿಸುವದೀಡ್ಯಾಡಿ ಹ್ಯಾವ ಹೆಮ್ಮೆಹಿಡಿಯಬ್ಯಾಡಿ ಭಾವ ಬಲಿದು ಪೂರ್ಣ ನೋಡಿ ಕಾವ ಕರುಣನ ಕೂಡಿ ಭವಬಂಧನ ನೀಗಿ ಬಿಡಿ ಪಾವನ್ನವಾದ ನೋಡಿ ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು