ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೂದಿ ಮುಚ್ಚಿದ ಕೆಂಡದಂತಿಪ್ಪರು ಪ ಈ ಧರೆಯ ಮೇಲೆ ಶ್ರೀ ಹರಿಭಕ್ತ ಜನರು ಅ.ಪ ಅಂಗ ನೋಡಲು ಅಷ್ಟಾವಕ್ರವಾಗಿಪ್ಪರು ಕಂಗಳಿಂದಲಿ ನೋಡೆ ಘೋರತರರು ಮಂಗಳಾಂಗನ ಅಂತರಂಗದಲಿ ಭಜಿಸುತ್ತ ಹಿಂಗದೆ ಸಂತಜನ ಸಂಗದೊಳಗಿಹರು 1 ನಾಡ ಜನರುಗಳಂತೆ ನಡೆಯರು ನುಡಿಯರು ಕೂಡರು ಕುಟಿಲಜನ ಸಂಘದಲ್ಲಿ ಒಡಲು ತುಂಬಿಸಿಕೊಳರು ರೂಢಿಯೊಳಗೆಂದೆಂದು ಗೂಢವಾಗಿಹರು2 ಡಂಭಕತನದಿಂದ ಗೊಂಬೆನೆರಹಿಕೊಂಡು ಡೊಂಬ ಕುಣಿದಂತೆ ಕುಣಿದಾಡರು ಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿ ಬಿಂಬ ಮೂರುತಿಯನ್ನು ಕೊಂಡಾಡುತಿಹರು 3 ಶತ್ರು ಮಿತ್ರರುಗಳ ಸಮನಾಗಿ ಎಣಿಸುವರು ಪುತ್ರ ಮಿತ್ರ ಭ್ರಾತೃಗಳ ನೆಚ್ಚರು ಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯ ಸ್ತೋತ್ರಗಳ ಮಾಡಿ ಸಾಧನೆ ಮಾಡಿಕೊಂಬುವರು 4 ಕಷ್ಟ ಸೌಖ್ಯಂಗಳನು ಕಲಿವರದಗರ್ಪಿಪರು ಇಟ್ಟುಕೊಟ್ಟಿದ್ದನ್ನ ಹರಿಕೊಟ್ಟನೆಂಬುವರು ಸಿರಿ ವಿಜಯವಿಠ್ಠಲನ ಪದಪದ್ಮಾ ಮುಟ್ಟಿ ಭಜಿಸಿ ಮುಕ್ತ ಸಾಮಾಜ್ರ್ಯ ಪಡೆಯುವರು5
--------------
ವಿಜಯದಾಸ
ಬೆಡಗು ಅಗಮ್ಯವಿದು ಶ್ರೀ ಗುರುವಿನ ಬೆಡಗು ಅಗಮ್ಯವಿದು ಧ್ರುವ ಶೂನ್ಯಾಕಾರದ ಬಾಲೆ ಗಗನವ ಹಡೆದಳು ಏನೆಂದ್ಹೇಳಲಿ ಸೋಜಿಗೆ ಘನಲೀಲೆಯು 1 ವ್ಯೋಮಸುಂದರಿ ಜನಿಸಿದಳು ಮಾರುತನ ಭೀಮ ಪರಾಕ್ರಮನ ನೇಮದಿಂದಲಿ 2 ನಿಜ ವಾಯುಕುಮಾರಿ ಜನಿಸಿದಳು ತಾನೊಂದು ತೇಜ:ಪುಂಜದ ರೂಪವ ಮೂಜಗದೊಳು 3 ಥಳಥಳಿಸುವ ತೇಜದ ಖನಿಯು ಹಡೆದಳು ಜಲಮಯದ ರೂಪವ ನಲಿದಾಡುವ 4 ನಿರಾಕಾರದ ಕೂಸು ಭೂಮಿ ಹಡೆದುದ ಕಂಡು ಬೆರಗಾದ ಮೂಢ ಮಹಿಪತಿಯ ಗುರುಜ್ಞಾನದ 5 ಬೆಡಗು ತೋರಿದ ಗುರು ಒಡಿಯ ಸರ್ವೋತ್ಮನು ಪೊಡವಿಯೊಳೊಂದು ಸೋಜಿಗ ಗೂಢವಾಗಿಹ 6 ಕೌತುಕವನು ಕಂಡು ಕೈ ಮುಗಿದು ಮಹಿಪತಿ ತ್ರಾಹಿ ತ್ರಾಹಿ ತ್ರಾಹಿಯೆಂದ ಮನದೊಳಿನ್ನು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೇಸುಲೇಸಾಯಿತು ಸದ್ಗುರು ಕೃಪೆ ಲೇಸುಲೇಸಾಯಿತು ಧ್ರುವ ಆದಿತತ್ವದ ಙÁ್ಞನ ಇದಿರಿಟ್ಟಿತು ಘನ ಲೇಸುಲೇಸಾಯಿತು ಭೇದಿಸಲು ಮನೆ ಅದೆ ಆಯಿತುನ್ಮನ 1 ಲೇಸುಲೇಸಾಯಿತು ಙÁ್ಞನಾಗಮ್ಯದ ಸ್ಥಾನ ಎನಗಿದೆ ನಿಜ ಧ್ಯಾನ 2 ಭಾವದ ಬಯಲಾಟ ಠಾವದೋರಿತು ನೀಟ ಲೇಸುಲೇಸಾಯಿತು ಸುವಿದ್ಯ ಗುರುನೋಟ ಸರಿಮಾಡಿತೀ ಮಾಟ 3 ನೀಡಿದಭಯ ಹಸ್ತ ಮಾಡಿತು ಮನಸ್ವಸ್ಥ ಗೂಢವಾಗಿಹ್ಯ ವಸ್ತಗೂಡಿತು ಸಾಭ್ಯಸ್ತ 4 ಇಹಪರಕ ಸ್ವಾದ ಮಹಾಗುರುಪ್ರಸಾದ ಸಾಹ್ಯಮಾಡುದೆ ಸದಾ ಮಹಿಪತಿ ಗುರುಬೋಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು