ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನುಮಪಾವನ ಹರಿನಾಮ ಭಜನೆ ಜನುಮ ಪಾವನ ಪರಲೋಕಸಾಧನ ಪ ದಿನದಿನದಿ ಘನವಾಗಿ ಕನಸುಮಸಿನೊಳು ಬಿಡದೆ ವನಜನಾಭನ ನೆನೆದರಿಲ್ಲ ಜನನ ಮರಣ 1 ಲೊಂದುಭವದ ಬಂಧನಗಳ್ ಸಂಧಿಸವೆಂದಿಗು 2 ಕಾಮಜನಕ ಸ್ವಾಮಿ ಶ್ರೀರಾಮಮಂತ್ರ ಗೂಢದಿಟ್ಟು ನೇಮದಿಂದ ಪೊಗಳುತಿರೆ ಆ ಮಹಮೋಕ್ಷ ಸಿದ್ಧಿ3
--------------
ರಾಮದಾಸರು
ನೋಡಿರೋ ನೋಡಿರೋ ನಾಡಿನೊಳಗೆ ಮಹ ಗೂಢದಿ ಹೊಳೆಯುವ ಶ್ರೀಗಳ ಚರಣಪ ಪಾಡಿ ಬೇಡಿ ಹುಡುಕಾಡಿ ಪಡೆಯಿರೋ ವರ ಗಾಢ ಜ್ಞಾನದಿಗೂಡಿದ ಯತಿಗಳ ಅ.ಪ ಮಾಧವತೀರ್ಥರ ಮತದೊಳುದಿಸಿ ಬಾಧಕರೂಪಿನ ಭವಭಯಛೇದಿಸಿ ವೇದಸುಸ್ವಾದವ ಬೋಧಿಸಿ ನಿಜದ ಬೋಧ ಶ್ರೀಗುರುಗಳ 1 ಭಕ್ತರ ಕೂಡಿಸಿ ಮತ್ತು ಮಮತೆಯನೆ ನಿತ್ಯ ಸತ್ಯವ ಸಾಧಿಸಿ ಚಿತ್ತನಿಲಿಸಿ ಪುರುಷೋತ್ತಮನೊಳು ಬಿಡ ದತ್ಯಾನಂದಿಪ ಮುಕ್ತಿಗೆ ಮೂಲರ 2 ಆಶಾಪಾಶ ಮಾಯಮೋಸವ ಗೆಲಿದು ನಾಶ ಪ್ರಪಂಚದ ವಾಸನೆ ಅಳಿದು ಶ್ರೀಶ ಶ್ರೀರಾಮನ ಲೀಲದಿ ಬಿಡದನು ಮೇಷದಾಡುವ ಮಹ ಪಾವನಶೀಲರ 3
--------------
ರಾಮದಾಸರು
ಪರಿಪರಿ ಕೊಂಡಾಡೋ ಹರಿಯನ್ನು ಮರೆದು ನೀ ಕೆಡಬೇಡೋ ಮನವೆ ಪ ಮರವೆ ಮಾಯ ನೀಗಿ ಧರೆಭೋಗ ಮೆಚ್ಚದೆ ನಿರುತ ಭಜಿಪರ ಬಿಟ್ಟು ಅರಲವಗಲ ಹರಿ ಅ.ಪ ಕರುಣಸಾಗರನು ನರಹರಿ ಚರಣದಾಸರನ್ನು ತನ್ನಯ ಹರಣಸಮಾನ ಮಾಡಿ ಕರುಣದಿಂದವರ ಇರವ ಪೂರೈಸುತ ಪೊರೆವ ಪ್ರೇಮದಿಂದ 1 ಚಿಂತೆ ಭ್ರಾಂತಿಗಳನು ಬಿಡಿಸಿ ಸಂತಸ ಕರುಣಿಸಿ ಅವರ ಅಂತರಂಗದಿರ್ದು ಅಂತರ ತಿಳಿಯಿತು ಚಿಂತಿಸಿದ್ದನ್ನಿತ್ತು ಸಂತಸದಿಂ ಕಾಯ್ವ 2 ಸಾರಿಸಾರಿಗೆ ತನ್ನ ಚರಣಸೇರಿ ಭಜಿಪರನ್ನು ಬಿಡದೆ ಆರಭಾರ ಪೊತ್ತು ಸೇರಿ ಅವರ ಬಳಿಯ ಪಾರಸಂಭ್ರಮದಿಂ ಧೀರ ನಲೀತಿಹ್ಯ 3 ಅಮಲರೂಪ ತನ್ನ ನಿರುತ ವಿಮಲಚರಣವನ್ನು ನಂಬಿದ ಸುಮನಸರಹೃದಯಕಮಲದಿ ವಾಸಿಸಿ ನಿಮಿಷಬಿಟ್ಟಗಲದೆ ಕ್ರಮದಿ ಪಾಲಿಸುವ4 ಗೂಢದಿಂದ ಸ್ಮರಿಪ ಭಕುತರ ಗಾಢಮಹಿಮೆ ಕೃಪಾದೃಷ್ಟಿಯಿಂ ಬೇಡಿದ ವರಗಳ ಕಾಡದೆ ನೀಡುತ ರೂಢಿಯೋಳ್ ಬಿಡದೆ ಕಾಪಾಡುವ ಶ್ರೀರಾಮ 5
--------------
ರಾಮದಾಸರು
ಪೇಳಿದರೆ ತಿಳಿಯುವುದೆ ಮಾಯಮೋಹಿಗಳಿಗೆ ನೀಲಶ್ಯಾಮನ ದಿವ್ಯಗೂಢದಿಹಮಹಿಮೆ ಪ ಬಂಜೆಗ್ಹೊಳೆವುದೆ ಪ್ರಸೂತಿವೇದನೆ ಸುದ್ದಿ ಸಂಜೀವನ ಮಹಿಮೆ ತಿಪ್ಪೆ ತೃಣಕೆ ತಿಳಿಯುವುದೆ ಅಂಜುಬುರುಕಗ್ವೀರತ್ವ ಸಾರಸವಿದೋರುವುದೆ ವಂಜಗೊಳುಪಾಗುವುದೆ ಹರಿಭಕ್ತಿಸಾರ 1 ನಾಗನ್ಹೆಡೆಯೆತ್ತಾಡಲಮೇಧ್ಯಜಂತರಿಯುವುದೆ ಕೋಗಿಲೆಯು ಕೂಗಲು ಕಾಗೆ ತಿಳಿಯುವುದೆ ಗೂಗೆಗ್ಹೇಳಲು ಅರುಣಪ್ರಭೆ ನೋಡಬಲ್ಲುದೆ ಭಾಗವತರ ನಡೆ ಭವರೋಗಿಗ್ಹೊಳಪಹ್ಯದೆ 2 ರಾಜ್ಯದಾಡಳಿತವನು ಚಾಂಡಾಳ ತಿಳಿಯುವನೆ ತೇಜಿಯ ಮಹಯೋಗ ಪಾಜಿಗ್ಹುಟ್ವುದೆ ಭೋಜನದ ಸವಿಸಾರ ರೋಗಿಗ್ಹೇಳಲು ಫಲವೆ ರಾಜಿಪ ಪರಲೋಕ ಕುಜನರರಿಯುವರೆ 3 ಹೀನನಿಗತಿ ತಿಳಿಯುವುದೆ ಜ್ಞಾನಬೋಧಾಮೃತ ಶ್ವಾನನಿಗೆ ಸೇರುವುದೆ ರಾಗ ಸುಖಸ್ವಾದ ಕೋಣಗ್ಹೊಳೆವುದೆ ವೇಣು ಮೃದಂಗ ಸುಖವಾದ್ಯ ಧ್ಯಾನಮಹಿಮೆಯ ಫಲವು ಭವಿಗೆ ತಿಳಿಬಲ್ಲುದೆ 4 ನೇಮದೊರುಷವು ಸುರಿಯೆ ಕಲ್ಲು ನೀರು ಕುಡಿಯುವುದೆ ಕಾಮಿಗಳಗನುಭವದ ಹಾದಿ ತಿಳಿ ಬಲ್ಲುದೆ ಪಾಮರಧಮರಿಗಿಲ್ಲ ದೀನಜನನಾಥ ಶ್ರೀ ರಾಮನಡಿ ನಿಜಭಕ್ತಿ ಸಾಧ್ಯವಾಗುವುದೆ 5
--------------
ರಾಮದಾಸರು
ಯತಿಗಳು (ಶ್ರೀ ಬ್ರಹ್ಮಣ್ಯತೀರ್ಥರು) ಕೈಪಿಡಿದು ಪಾಲಿಸೈ ಬ್ರಹ್ಮಣ್ಯಗುರುವೇ ಪ ಅಯ್ಯನೀನೆಂದು ನಿನ್ನಡಿಗೆ ವಂದಿಸುವೇ ಅ.ಪ ಮೂಢವiತಿಗಳು ಬಂದು ಬೇಡಿ ಕೊಳ್ಳಲು ಕರುಣ ನೀಡಿ ನಿನ್ನವರನ್ನು ಕಾಯ್ದರೀತಿ ಗಾಢದಿಂದಲಿ ಬಂದು ಮೂಢನಾದೆನ್ನನು ಗೂಢದಿಂದಲಿ ಕಾಯೊ ಗುಣನಿಧಿಯೆ ಗುರುವೇ . . 1 ಪುರುಷೋತ್ತಮಾರ್ಯರ ವರಪುತ್ರನೆಂದೆನಿಸಿ ಹರುಷದಿಂದಲಿ ಬಂದ ಭಕ್ತಜನರ ಮೊರೆಯಲಾಲಿಸಿ ಸ್ವಾಮಿ ಸ್ಮರಣೆಯ ಕೊಟ್ಟೆನ್ನ ಹರುಷಪಡಿಸುವ ಗುರುವು ನೀನೆಂದು ನಾ ಬಂದೆ 2 ವರಕಣ್ವನದಿ ಕೂಲದಲಿ ಕಲ್ಮಷ ತೊಳೆದು ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ ಸರ್ವಜನರನು ಕಾವೆ ಸರ್ವಕಾಲದಲಿ 3 ಸರ್ವಗುಣ ಪೂರ್ಣ ಬ್ರಹ್ಮಣ್ಯಪುರ ವಾಸ ನರಹರಿಯ ಪಾದವನು ಸ್ಮರಿಸಿನಿತ್ಯ ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ 4 ಮಣಿದು ಬೇಡುವೆ ನಿನ್ನ ಚರಣದಾಶ್ರಯವಿತ್ತು ಅಣುಗನೆಂದೆನಿಸೆನ್ನ ಸಲಹಬೇಕೊ ಗುಣನಿಧಿ ಶ್ರೀ ಪ್ರಾಣನಾಥ ವಿಠ್ಠಲನ ಘನ ಚರಣ ಸ್ಮರಣೆಯ ನೀಯೊ ಗುರುವೆ 5
--------------
ಬಾಗೇಪಲ್ಲಿ ಶೇಷದಾಸರು