ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ಧ್ರುವ ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ ನೀಡಿದಾಭಯದೂಟ ಗೂಢಗುರುತವಾಯಿತು ನೀಟ 1 ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು 2 ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿರೋ ನೋಡಿರೋ ಸ್ವಾಮಿ ಶ್ರೀಪಾದ ಗೂಢಗುರುತವಾಗ್ಯದ ನಿಜಬೋಧ ಧ್ರುವ ಕಣ್ಣಿನೊಳಗದ ಕಾಣುಗುಡುತಿದೆ ಕಣ್ಣೆ ಕಣ್ಣೆಗೆ ಕಾಣಿಸುತಿದೆ 1 ಝಗಝಗಿಸುತಿದೆ ಥಳಥಳಿಸುತಿದೆ ಬಗೆ ಬಗೆ ಭಾಸುತ ಹೊಳೆಯುತಲಿದೆ 2 ಕೇಳಬರುತದೆ ಹೇಳಗುಡುತದೆ ತಾಳ ಮೃದಂಗವು ಭೋರಿಡುತದೆ 3 ಏನೆಂದ್ಹೇಳಲಿ ಸ್ವಾನಂದ ಲೀಲೆ ಸ್ವಾನುಭವದಸುಖ ಆಲಿಸಿ ಕೇಳಿ 4 ಮಾಯಾಕಾರಗಿದು ಕೈಯಲಿಗೂಡದು ಮಹಿಪತಿ ಸ್ವಾಮಿದಯಕೆ ಒದಗುವದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಡಿಕೋತೆ ಕೇಳಿ ನೋಡಿ ನಿಜಬಾಳಿ ಗೂಢಗುರುತವ ಮನಗಂಡು ನೆಲೆಗೊಳ್ಳಿ 1 ಒಂದಕೊಂದು ಮಾಡಿ ಒಂದು ಪಥಗೂಡಿ ಹಿಂದ ಮುಂದೆ ನೋಡುವ ಸಂದೇಹವೀಡಾಡಿ 2 ಅರ್ತುಕೊಳ್ಳಿ ಖೂನ ತ್ವರಿತ ಗುರುಜ್ಞಾನ ಕರ್ತು ಮಹಿಪತಿಸ್ವಾಮಿದೋರುವ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು