ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ಪ ತುಂಬಿ ಭಾನು ಪ್ರಭೆ ಚಂದಮಾಮಅ ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ 1 ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ 2 ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ 3 ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ 4 ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ 5 ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ 6 ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮಸುಲಭ ಪದವಿದು ನಳಿನಜಾಂಡದೊಳು ಚಂದಮಾಮ 7 ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ 8 ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ 9
--------------
ಕನಕದಾಸ
ಮಗುವು ಕಾಣಿರಯ್ಯ | ಮಾಯದ | ಮಗುವು ಕಾಣಿರಯ್ಯ ಪ ಸುಗುಣ ವಾದಿರಾಜರೆ ಮೂಜಗವನು ತನ್ನುದರದೊಳಿಟ್ಟಅ ಮಾಯಾ ಪೂತನಿಯ ಕೊಂದು ಕಾಯವ ಕೆಡಹಿ ಶಕಟನ್ನಸಾಯಬಡಿದು ಧೇನುಕನ ವೃಷಭಾಸುರನನೋಯ ನೋಡದ್ಯಮಳಾರ್ಜುನಂಗೆ ಸಾಯುಜ್ಯವನೆ ಇತ್ತು ತನ್ನತಾಯಿಗೆ ತಾ ಮಣ್ಣ ಮೆದ್ದು ಬಾಯ ಬಿಟ್ಟು ತೋರಿಸಿದ1 ಏಕವರ್ಣವಾಗಿಯೆ ಸಕಲಲೋಕವು ಆಕಾರವಳಿಯೆಏಕಮೇವಾದ್ವಿತೀಯನೆಂಬಾಗಮಕೆ ಸರಿಯಾಗಿಶ್ರೀಕರಾಂಬುಜದಿಂ ಪಾದಾಂಗುಲಿಯಂ ಪಿಡಿದು ಬಾಯೊಳಿಟ್ಟುಶ್ರೀಕಾಂತ ವಟಪತ್ರದ ಮೇಲೊರಗಿ ಬ್ರಹ್ಮನ ಪಡೆದ2 ಕಡಹದ ಮರನೇರಿ ಸಂಗಡಿಗರೊಡನೆ ಕಾಳಿಂದಿಯಮಡುವ ಧುಮುಕಿ ಧುಮುಕಿ ಕಲಕಿ ಆ ಕಾಳಿಂಗನಪೆಡೆಯ ತುಳಿದು ಜಡಿಯಲವನ ಮಡದಿಯರು ಬೇಡಿಕೊಳ್ಳೆಕಡಲಿಗಟ್ಟಿ ಬಂದು ತಾಯ ತೊಡೆಯ ಮೇಲೆ ಮಲಗಿದಂಥ 3 ಕಲ್ಲಿಗಟ್ಟಿ ಗೂಡೆಯಲಿ ಗೋಲಿಯ ಚೀಲವನಿಕ್ಕಿಹಿಲ್ಲಿ ಕಟ್ಟೋಗರ ಕಡಕಲಕ್ಕಳೆಯಾ ತುದಿಯಲಿನಿಲ್ಲಿಸಿ ಪೆಗಲೊಳು ಕೊಂಬು ಕೋಲನೆ ಪಿಡಿದುಗೊಲ್ಲರೊಡಗೂಡಿ ನಮ್ಮೆಲ್ಲರ ಗೋವುಗಳ ಕಾಯ್ದ 4 ಪತಿ ವೈಕುಂಠ ಕೇಶವನುಯತಿಯೆ ನೀ ನೋಡಯ್ಯ ಶರಣಾಗತನ ತೊಡೆಯಿಂ ಮಾಯವಾದ 5
--------------
ಕನಕದಾಸ