ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಕರುಣದಿಂದ ಪಾಲಿಸದಿದ್ದರೆ ಇನ್ನುನಾ ಕಾಣೆ ಮನ್ನಿಸುವರ ಪ. ಸಾಕಾರ ಮೂರುತಿ ಸರ್ವೋತ್ತಮನೆನೀ ಕಾಯೊ ಪರಾಕುಮಾಡದೆ ಎನ್ನನು ದೇವ ಅ.ಪ. ಗುರುಹಿರಿಯರನು ಕಂಡು ತರಳತನದಲಿ ನಾನುಚರಣಕೆರಗದೆ ತಿರುಗಿದೆವರ ಸಕಲ ಸಂಪದವ ಬೇಡಿ ಬಯಸುತ ನಿನ್ನಸ್ಮರಣೆಯನು ಮರೆತಿದ್ದೆನೊಸ್ಮರನ ಬಾಣಕೆ ಸಿಲುಕಿ ಪರಸತಿಗೆ ಮರುಳಾಗಿದುರ್ಗತಿಗೆ ನೆಲೆಯಾದೆನೊಸಿರಿಯರಸನೆ ನಿನ್ನ ಚರಣವನು ನಂಬಿದೆನೊಕರುಣದಿಂ ಕಡೆಹಾಯಿಸೊ 1 ಆರುಮಂದಿಗಳೆಂಬ ಕ್ರೂರವೈರಿಗಳಿಂದಗಾರಾದೆನವರ ದೆಸೆಗೆಮಾರಿಹಬ್ಬದÀ ಕುರಿಯು ತೋರಣವ ಮೆಲುವಂತೆತೋರುತಿದೆ ಎನ್ನ ಮತಿಗೆಘೋರ ಸಂಸಾರವೆಂಬೋ ವಾರಿಧಿಯ ದಾಟಿಸುವಚಾರುತರ ಬಿರುದು ನಿನಗೆಮಾರನಯ್ಯನೆ ನಿನ್ನ ಚರಣವನು ನಂಬಿದೆನುಪಾರಗಾಣಿಸೊ ಎನ್ನನು 2 ಹಲವು ಜನ್ಮಗಳಲ್ಲಿ ಬಲುನೊಂದು ಬಾಯಾರಿತೊಳತೊಳಲಿ ಬಳಲುತಿಹೆನುಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆಹಲವು ಮನೆ ತಿರುಗುತಿಹೆನೊಜಲದ ಮೇಲಿನ ಗುಳ್ಳೆಯಂತಿಪ್ಪ ಈ ದೇಹನೆಲೆಯೆಂದು ನೆಚ್ಚುತಿಹೆನೊಜಲಜನಾಭನೆ ನಿಮ್ಮ ಮಹಿಮೆಯನು ಪೊಗಳುವೆನುಚೆಲುವ ಶ್ರೀ ಹಯವದನ ರನ್ನ 3
--------------
ವಾದಿರಾಜ
ಮನುಜ ಶರೀರವಿದೇನು ಸುಖ - ಇದನೆನೆದರೆ ಘೋರವಿದೇನು ಸುಖ ? ಪ.ಜನನ - ಮರಣ ಮಲಕೂಪದಲ್ಲಿದ್ದುಅನುಭವಿಸುವುದು ಇದೇನು ಸುಖ ?ತನುವಿದ್ದಾಗಲೇ ಹೃದಯದ ಶೌಚದಸ್ತನಗಳನುಂಬುವುದೇನು ಸುಖ ? 1ದಿನವು ಹಸಿವುತೃಷೆಘನ ರೋಗಂಗಳಅನುಭವಿಸುವುದು ಇದೇನು ಸುಖನೆನೆಯಲುನಿತ್ಯ ನೀರ್ಗುಳ್ಳೆಯಂತಿಪ್ಪತನುಮಲಭಾಂಡವಿದೇನು ಸುಖ ? 2ಪರಿಪರಿ ವಿಧದಲಿ ಪಾಪವ ಗಳಿಸುತನರಕಕೆ ಬೀಳುವುದೇನು ಸುಖ ?ಪುರಂದರವಿಠಲನ ಮನದಿ ನೆನೆದು ಸದ್ಧರುಮದೊಳ್ ನಡೆದರೆ ಆಗ ಸುಖ 3
--------------
ಪುರಂದರದಾಸರು