ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಡಗು ತೋರುತಲಿದಕೋ ಮಾಧವರಾಯ ಪ ಉಡುರಾಜ ಮೌಳಿ ವಿನುತನೆ ಎನಗೊಂದು ಅ ಕುಂಜವರದ ಧನಂಜಯ ದುರಿತ ಭಂಜಿಸಿ ಕರದಿ ಗುಲಗುಂಜಿಯ ಪಿಡಿದಿದ್ದು 1 ಮೋಕ್ಷ ಪದವಿಯ ಉಪೇಕ್ಷೆ ಮಾಡಿ ಬಂದು ಈ ಕ್ಷಿತಿಯೊಳಗೆ ಪಂಪಾಕ್ಷೇತ್ರದಿ ಇಪ್ಪ2 ಸಗುಣ ಸಾಕಾರನೆ ಜನ್ನಾಥ ವಿಠಲನೆ ಜಗತಿಯ ಬಗೆದಿಲ್ಲಿ ಮಿಗೆ ವಾಸವಾದದ್ದು 3
--------------
ಜಗನ್ನಾಥದಾಸರು
ಜೋ ಜೋ ಶ್ರೀ ಕೃಷ್ಣ ಪರಮಾನಂದಜೋ ಜೋ ಗೋಪಿಯ ಕಂದ ಮುಕುಂದ ಪ.ಪಾಲುಗಡಲೊಳು ಪವಡಿಸಿದವನೆ ಒಂದಾಲದೆಲೆಯ ಮೇಲೆ ಮಲಗಿದ ಶಿಶುವೇ ||ಶ್ರೀ ಲತಾಂಗಿಯರ ಚಿತ್ತವಲ್ಲಭನೇಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ 1ಹೊಳೆಯುವ ರನ್ನದ ತೊಟ್ಟಿಲ ಮೇಲೆಢಳಿ ಢಳಿಸುವ ಗುಲಗುಂಜಿಯ ಮಾಲೆ ||ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ 2ಆರ ಕಂದ ನೀನಾರ ನಿಧಾನಿಆರ ರತ್ನವೊ ನೀನಾರ ಮಾಣಿಕವೋ ||ಸೇರಿತು ಎನಗೊಂದು ಚಿಂತಾಮಣಿಯು - ಎಂದುಪೋರನಿನ್ನನು ಪಾಡಿ ತೂಗುವೆನಯ್ಯ - ಜೋ ಜೋ3ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆಮನೆಯ ಕೆಲಸವಾರು ಮಾಡುವರಯ್ಯ ||ಮನಸಿಗೆ ಸುಖನಿದ್ರೆ ತಂದುಕೊ ಬೇಗಫಣಿಶಯನನೆ ನಿನ್ನ ಪಾಡಿ ತೂಗುವೆನು - ಜೋ ಜೋ 4ಅಂಡಜವಾಹನ ಅನಂತ ಮಹಿಮಪುಂಡರೀಕಾಕ್ಷ -ಪರಮ ಪಾವನ ||ಹಿಂಡು ದೈವದಗಂಡ ಉದ್ಧಂಢ ದೇವನಪಾಂಡುರಂಗ ಶ್ರೀ ಪುರಂದರವಿಠಲ - ಜೋ ಜೋ 5
--------------
ಪುರಂದರದಾಸರು