ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನವಾವುದು ಅಜ್ಞಾನವಾವುದು ಮಾನವಾವುದು ದುಮ್ಮಾನವಾವುದು ಪ ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲವೆ ಪರರ ಸತಿಯ ತೊರೆವುದೊಂದು ಮಾನವಲ್ಲವೆ ಪರರ ಸೇವೆಗಿರುವದವಮಾನವಲ್ಲವೆ 1 ಧನ್ಯರನ್ನು ಮನ್ನಿಸುವುದು ಜ್ಞಾನವಲ್ಲವೆ ಹೊನ್ನ ಹುದಿದು ಅನ್ನ ತೊರೆವುದಜ್ಞಾನವಲ್ಲವೆ ಅನ್ಯರೊಡವೆ ಕಳುವುದವಮಾನವಲ್ಲವೆ 2 ಹಸಿದವರನು ಕಂಡು ಯಿಕ್ಕಲು ಜ್ಞಾನವಲ್ಲವೆ ಹುಸಿಕನಾಗಿ ಅಸತ್ಯ ಮಾಳ್ಪುದು ಅಜ್ಞಾನವಲ್ಲವೆ ಹಸನವಾಗಿ ನಡೆವ ಕೃತ್ಯ ಮಾನವಲ್ಲವೆ ಎಸೆವ ಜೂಜು ತಪ್ಪಲವಮಾನವಲ್ಲವೆ 3 ಸ್ಥಿರವಿದಲ್ಲವೆಂಬ ಜೀವಿ ಜ್ಞಾನಿಯಲ್ಲವೆ ನರಕ ಭಯವ ಮರೆವ ಜಡನಜ್ಞಾನಿಯಲ್ಲವೆ ಹಿರಿಯರಿಂದ ಅನಿಸಿಕೊಂಬುದು ಮಾನವಲ್ಲವೆ ಬರಿಯ ಕ್ಷುದ್ರವೆಸಗಲವಮಾನವಲ್ಲವೆ 4 ಕ್ರೋಧವನ್ನು ತೊರೆದ ಮನುಜ ಜ್ಞಾನಿಯಲ್ಲವೆ ವೇದವನ್ನು ಜರೆದ ನರನಜ್ಞಾನಿಯಲ್ಲವೆ ಸೋದರರು ಕೂಡಿಯಿರಲು ಮಾನವಲ್ಲವೆ ಮಾದಿಗರ ಸಂಗವದವಮಾನವಲ್ಲವೆ 5 ಗುರು-ಹಿರಿಯರನುಸರಿಸೆ ಜ್ಞಾನವಲ್ಲವೆ ಸಿರಿಯ ವೇಶ್ಯಸ್ತ್ರೀಗೆ ಕೊಡಲಜ್ಞಾನವಲ್ಲವೆ ದೊರೆಯು ಕರೆದು ಉಚಿತವೀಯೆ ಮಾನವಲ್ಲವೆ ತಿರುಕರಂತೆ ತಿರಿವುದು ಅವಮಾನವಲ್ಲವೆ 6 ವರಾಹತಿಮ್ಮಪ್ಪ ಒಲಿದರದು ಜ್ಞಾನವಲ್ಲವೆ ಮರೆದು ಕ್ಲೇಶಕೆರಗುವುದಜ್ಞಾನವಲ್ಲವೆ ಕರೆದು ಪರರಿಗಿಕ್ಕುವುದು ಮಾನವಲ್ಲವೆ ಕರೆಕರೆಯ ಮಾತು ಅವಮಾನವಲ್ಲವೆ 7
--------------
ವರಹತಿಮ್ಮಪ್ಪ
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು