ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಖುಲ್ಲ ಮಾತುಗಳು ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ ಅರಸು ಸಣ್ಣವನೆಂದು ಸರಸವಾಡಲು ಸಲ್ಲ ಕರೆಸಿ ಕೇಳದ ಮಾತು ಆಡಸಲ್ಲ ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ 1 ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ ಹಗೆಯೊಡನೆ ಸ್ನೇಹವನು ಮಾಡಸಲ್ಲ ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ 2 ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ ದೃಢವಾದ ಮೂರ್ಖನೊಳು ಕದನ ಮಾತಿಲ್ಲ 3 ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ ಗುರುಹಿರಿಯರಾದವರ ಜರೆಯ ಸಲ್ಲ ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ ಪರಿ ಸಲ್ಲ 4 ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ ವರಾಹ ತಿಮ್ಮಪ್ಪನಿರಲು ಬಲ್ಲ ನರನು ಹರಿದೂಷಕರ ಸರಿಯೊಳಗೆ ನಿಲ್ಲ 5
--------------
ವರಹತಿಮ್ಮಪ್ಪ
ಯಾಕೆ ಮೈಮರೆದೆ ನೀನು ಪ. ಯಾಕೆ ಮೈಮರೆದೆ ಶ್ರೀ ಹಯವದನನ ಪಾದವನುಬೇಕೆಂದು ಬಿಡದೆ ಭಜಿಸೊ ನಿನ್ನಕಾಕು ವ್ಯಸನಗಳ ತ್ಯಜಿಸೊ ಈ ದೇಹತಾ ಕಂಡ ಕನಸೋ ಸ್ಥಿರವಲ್ಲ ಇನ್ನುನೀ ಕೇಳದಿರೆ ನಿನ್ನ ಮನಸೋ ಪ್ರಾಣಿ ಅ.ಪ. ಪರಹೆಣ್ಣುಗಳ ನೋಡಿ ಪಾತಕಿಗಳ ನೀಡಾಡಿಹರಿದೆದ್ದು ಕಡೆಗೆ ಕರೆವೆ ಎಲೆಮರುಳೆ ಹರುಷದಿಂದವಳ ನೆರೆವೆ ಅಕಟಕಟದುರುಳ ಜೀವನೆ ನಿನಗೆ ತರವೆ ಮತ್ತೊ-ಬ್ಬರಿಗೆ ಬರಿದೆ ನೀ ಹೇಳುವೆಲ್ಲೊ ಶಾಸ್ತ್ರಗಳನೊರದೊರದು ಕೇಳ್ವೆಯಲ್ಲೊ ನೀ ಹೋಗಿನರಕದೊಳು ಬೀಳ್ವೆಯಲ್ಲೊ ಪ್ರಾಣಿ 1 ಧನವ ಕೂಡಿಸಿಕೊಂಡು ದಾನ ಧರ್ಮವ ಮಾಡ-ದೆನಗಾರು ಸಾಟಿಯೆಂಬೆ ಇಷ್ಟಜನರ ಬಿಟ್ಟೊಬ್ಬನುಂಬೆ ಎಲೊ ಎಲೊಮುನಿದು ಸಕಲರ ಮುನಿಯಗೊಂಬೆ ಆಧನವು ಮನಶುದ್ಧವಾಗಿ ಇಹುದೆ ಅದು ಸಾವದಿನದೆ ಸಂಗಡ ಬಾಹುದೆ ಕುಬೇರನಬಿಟ್ಟು ಕಡೆಗೆ ಹೋಹುದೆ ಪ್ರಾಣಿ 2 ಅಳೆವ ಕೊಳಗದ ಮಾಟ ಆತ್ಮನಿನ್ನೋಡಾಟ ಸರ-ಕಳೆದ ಬಳಿಕ ನೋಡೊ ದೇಹ ತಾ-ನುಳಿಯದು ಹಮ್ಮು ಮಾಣೊ ಎಲೆ ಮರುಳೆಗಳಿಸಿರೋ ಧರ್ಮಗಳ ವ್ಯರ್ಥ ಕೆಡಬ್ಯಾಡೊ ದಿನಮಾನಗಳ ಕಳೆಯದಿರು ನಿತ್ಯವಲ್ಲ ಇದಕೆಉಳಿದರ್ಥ ಕೆಲಸಕಿಲ್ಲ ಹಿಂದೆಉಳಿದವರೊಬ್ಬರಿಲ್ಲ ಪ್ರಾಣಿ 3 ಕೊಲೆ ದೋಷವೆಂದರಿಯೆ ಕೊಸರು ಒಬ್ಬನ ಜರೆವೆಇಳೆಯೊಳದಾವನೀತ ನಿನಗೆ ನೀತಿಳಿದುಕೊ ನಿನ್ನಮಾತ ನೀಖಿಲಗೊಳಬೇಡ ಆಭಾಸ ಸೂಚಿಸಿ ಜರೆವರೆಕೊಲೆಗೆ ಗುರಿಯಾದೆ ಕಾಣೊ ಈ ಕೋಪಹೊಲೆಗೆ ಸರಿಯಲ್ಲವೇನೊ ನಿನ್ನಹುಳುಕು ಬುದ್ಧಿಯನು ಮಾಣೊ ಪ್ರಾಣಿ 4 ಮರೆದು ಕಳೆ ಕ್ರೋಧವನು ಮಾಡದಿರು ಲೋಭವನುಗುರುಹಿರಿಯರಾದವರಿಗೆರಗೂ ಅನಾ-ಥರಿಗೆ ಚೆನ್ನಾಗಿ ಮರುಗೊ ಇದೆಪರಮಗತಿಯ ಸೆರಗೊ ಭಕ್ತರಿಗೆಸಿರಿಯರಸ ಹಯವದನನೊಡೆಯ ಲೋಕಪರನಿಂದಕರಿಂಮುಕ್ತಿಪಡೆಯೊ ಭಜಿಸಿದುರಿತ ಸಂಕಲೆಯ ಕಡಿಯೊ ಪ್ರಾಣಿ 5
--------------
ವಾದಿರಾಜ