ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜ್ಞರಿಗೆಯಿದುನೋಡೆ ಹಾಸ್ಯವಾಗುವುದು ಪ ಜೀವ ಪರಮಾತ್ಮನಂ ತಿಳಿವದಡಕೆಲೆ ಶಾಸ್ತ್ರ ದೇವಧರ್ಮವು ಬರುವುದೇ ನಿಶ್ವಿತಾರ್ಥ ನಾವೆಂಬುವುದು ಬಿಡುವುದೆ ಭಾಜಾಭಜಂತ್ರಿಗಳು 1 ಗುರುಹಿರಿಯರಾಜ್ಞೆಯೆ ನಗನಾಣ್ಯಜವಳಿಗಳು ಸರವರಿಗು ಮರಿಯಾದೆ ಸಭೆಯ ಪೂಜೆ ದುರುಳನು ನಿಂದಿಪೋದು ಬೀಗತಿಯ ಹಾಡು 2 ಅಂತರ್ಮುಖತ್ವವೇ ಭೂಮದೂಟ ತತ್ವಗಳ ಮರೆಯದಿರುವುದೆ ದಿವ್ಯತಾಂಬೂಲ ಸತ್ವಗುಣ ವೃತ್ತಿಗಳೆ ನಿತ್ಯಸಂತೋಷ 3 ಕೊಬ್ಬಿದವರಿದು ಬಿಟ್ಟು ಹಣಕಾಸು ಕಳಕೊಂಡು ಕೋರಿಕೆಗಳಿಂದ ಸತಿಯೊಡನೆ ಕಾದುವರು 4 ಮಹಾಗುರುವೆ ಪರಮಾತ್ಮ ಶಿಷ್ಯರು ಜೀವರಾಶಿ ಅರಿತವರಿಗಿದರರ್ಥ ಅಮೃತಪಾನಕೆ ಸಮವು ಗುರುರಾಮ ವಿಠಲನು ಮನದಿ ಹೊಳೆಯುವನು 5
--------------
ಗುರುರಾಮವಿಠಲ
ಖುಲ್ಲ ಮಾತುಗಳು ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ ಅರಸು ಸಣ್ಣವನೆಂದು ಸರಸವಾಡಲು ಸಲ್ಲ ಕರೆಸಿ ಕೇಳದ ಮಾತು ಆಡಸಲ್ಲ ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ 1 ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ ಹಗೆಯೊಡನೆ ಸ್ನೇಹವನು ಮಾಡಸಲ್ಲ ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ 2 ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ ದೃಢವಾದ ಮೂರ್ಖನೊಳು ಕದನ ಮಾತಿಲ್ಲ 3 ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ ಗುರುಹಿರಿಯರಾದವರ ಜರೆಯ ಸಲ್ಲ ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ ಪರಿ ಸಲ್ಲ 4 ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ ವರಾಹ ತಿಮ್ಮಪ್ಪನಿರಲು ಬಲ್ಲ ನರನು ಹರಿದೂಷಕರ ಸರಿಯೊಳಗೆ ನಿಲ್ಲ 5
--------------
ವರಹತಿಮ್ಮಪ್ಪ
ಯಾಕೆ ಮೈಮರೆದೆ ನೀನು ಪ. ಯಾಕೆ ಮೈಮರೆದೆ ಶ್ರೀ ಹಯವದನನ ಪಾದವನುಬೇಕೆಂದು ಬಿಡದೆ ಭಜಿಸೊ ನಿನ್ನಕಾಕು ವ್ಯಸನಗಳ ತ್ಯಜಿಸೊ ಈ ದೇಹತಾ ಕಂಡ ಕನಸೋ ಸ್ಥಿರವಲ್ಲ ಇನ್ನುನೀ ಕೇಳದಿರೆ ನಿನ್ನ ಮನಸೋ ಪ್ರಾಣಿ ಅ.ಪ. ಪರಹೆಣ್ಣುಗಳ ನೋಡಿ ಪಾತಕಿಗಳ ನೀಡಾಡಿಹರಿದೆದ್ದು ಕಡೆಗೆ ಕರೆವೆ ಎಲೆಮರುಳೆ ಹರುಷದಿಂದವಳ ನೆರೆವೆ ಅಕಟಕಟದುರುಳ ಜೀವನೆ ನಿನಗೆ ತರವೆ ಮತ್ತೊ-ಬ್ಬರಿಗೆ ಬರಿದೆ ನೀ ಹೇಳುವೆಲ್ಲೊ ಶಾಸ್ತ್ರಗಳನೊರದೊರದು ಕೇಳ್ವೆಯಲ್ಲೊ ನೀ ಹೋಗಿನರಕದೊಳು ಬೀಳ್ವೆಯಲ್ಲೊ ಪ್ರಾಣಿ 1 ಧನವ ಕೂಡಿಸಿಕೊಂಡು ದಾನ ಧರ್ಮವ ಮಾಡ-ದೆನಗಾರು ಸಾಟಿಯೆಂಬೆ ಇಷ್ಟಜನರ ಬಿಟ್ಟೊಬ್ಬನುಂಬೆ ಎಲೊ ಎಲೊಮುನಿದು ಸಕಲರ ಮುನಿಯಗೊಂಬೆ ಆಧನವು ಮನಶುದ್ಧವಾಗಿ ಇಹುದೆ ಅದು ಸಾವದಿನದೆ ಸಂಗಡ ಬಾಹುದೆ ಕುಬೇರನಬಿಟ್ಟು ಕಡೆಗೆ ಹೋಹುದೆ ಪ್ರಾಣಿ 2 ಅಳೆವ ಕೊಳಗದ ಮಾಟ ಆತ್ಮನಿನ್ನೋಡಾಟ ಸರ-ಕಳೆದ ಬಳಿಕ ನೋಡೊ ದೇಹ ತಾ-ನುಳಿಯದು ಹಮ್ಮು ಮಾಣೊ ಎಲೆ ಮರುಳೆಗಳಿಸಿರೋ ಧರ್ಮಗಳ ವ್ಯರ್ಥ ಕೆಡಬ್ಯಾಡೊ ದಿನಮಾನಗಳ ಕಳೆಯದಿರು ನಿತ್ಯವಲ್ಲ ಇದಕೆಉಳಿದರ್ಥ ಕೆಲಸಕಿಲ್ಲ ಹಿಂದೆಉಳಿದವರೊಬ್ಬರಿಲ್ಲ ಪ್ರಾಣಿ 3 ಕೊಲೆ ದೋಷವೆಂದರಿಯೆ ಕೊಸರು ಒಬ್ಬನ ಜರೆವೆಇಳೆಯೊಳದಾವನೀತ ನಿನಗೆ ನೀತಿಳಿದುಕೊ ನಿನ್ನಮಾತ ನೀಖಿಲಗೊಳಬೇಡ ಆಭಾಸ ಸೂಚಿಸಿ ಜರೆವರೆಕೊಲೆಗೆ ಗುರಿಯಾದೆ ಕಾಣೊ ಈ ಕೋಪಹೊಲೆಗೆ ಸರಿಯಲ್ಲವೇನೊ ನಿನ್ನಹುಳುಕು ಬುದ್ಧಿಯನು ಮಾಣೊ ಪ್ರಾಣಿ 4 ಮರೆದು ಕಳೆ ಕ್ರೋಧವನು ಮಾಡದಿರು ಲೋಭವನುಗುರುಹಿರಿಯರಾದವರಿಗೆರಗೂ ಅನಾ-ಥರಿಗೆ ಚೆನ್ನಾಗಿ ಮರುಗೊ ಇದೆಪರಮಗತಿಯ ಸೆರಗೊ ಭಕ್ತರಿಗೆಸಿರಿಯರಸ ಹಯವದನನೊಡೆಯ ಲೋಕಪರನಿಂದಕರಿಂಮುಕ್ತಿಪಡೆಯೊ ಭಜಿಸಿದುರಿತ ಸಂಕಲೆಯ ಕಡಿಯೊ ಪ್ರಾಣಿ 5
--------------
ವಾದಿರಾಜ
ವಾಯುವಂದಿತ ವಿಠಲ | ಪೊರೆಯ ಬೇಕಿವನಾ ಪ ಪಾದ | ಭಜಕನಾದವನಾಅ.ಪ. ಗುರುಹಿರಿಯರಾ ಸೇವೆ | ನಿರುತ ಗೈಯುವ ಮನವಕರುಣಿಸುವುದಿವ ನೀಗೆ | ಮರುತಾಂತರಾತ್ಮಗರುಡ ಗಮನನೆ ದೇವ | ಗರ್ವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಇವನಾ 1 ಹರಿಯೆ ಪರನೆಂಬಂಥ | ವರಸುಜ್ಞಾನವ ಕೊಟ್ಟುತರತಮಂಗಳು ಅಂತೆ | ಎರಡು ಮೂರುರ್ಭೇದಾಪರಮ ಸತ್ಯವು ಎಂಬ | ವರಜ್ಞಾನ ಪಾಲಿಸುತಪರಿಪರಿಯ ಭವಭಂದ | ಪರಿಹರಿಸೊ ಹರಿಯೇ 2 ಕಾಕು ಸಂಗಮಕೆಡಿಸೊಪ್ರಾಕ್ಕುಕರ್ಮವ ಕಳೆಯೊ | ಶ್ರೀ ಕರಾರ್ಚಿತನೆ 3 ದುರಿತವನ ಕುಠಾರ | ಶರಣಜನ ವತ್ಸಲನೆದುರಿತಾಳಿ ದೂರೈಸಿ | ಪೊರೆಯೊ ಹರಿಯೇಕರುಣ ನಿಧಿ ನೀನೆಂದು | ಮರೆಹೊಕ್ಕೆ ತವಪಾದಚರಣ ದಾಸನ ಪೊರೆಯೊ | ಹರಿಯೆ ಪರಮಾಪ್ತ 4 ಶ್ರೀವರನೆ ಸರ್ವೇಶ | ಭಾವದಲಿ ಮೈದೋರಿಭಾವುಕನ ಪೊರೆ ಎಂದು | ದೇವ ಪ್ರಾರ್ಥಿಸುವೇಈ ವಿಧದ ಬಿನ್ನಪವ | ನೀವೊಲಿದು ಸಲಿಸುವುದುದೇವ ದೇವೇಶ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಿಶೇಷ ಕೀರ್ತನೆಗಳು ಮುಟ್ಟಬೇಡಿ ಮುಟ್ಟಬೇಡಿ ಮುರಹರನ ಭಕ್ತರನು ಪ. ಭ್ರಷ್ಟರಾಗದಿರಿಯೆಂದು ಕಟ್ಟು ಮಾಡಿದ ಯಮನು ಅ.ಪ. ಹರಿನಾಮ ಪಾರಾಯಣ ನಿರುತರಾಗಿರುತಿಹರ ಹರಿದಾಸರಾ ದಾಸ್ಯದೋಳಿರುತಿಹರಂ 1 ಗುರುಹಿರಿಯರಾಣತಿಗೆ ಶಿರಬಾಗಿ ನಡೆವವರ ವರಸತ್ಯಸಂಧರ ಹರಿಶರಣರ 2 ಪತಿಪಾದ ಸೇವಾನಿರತೆಯಾಗಿಹ ಸತಿಯ ಪತಿಗತಿಯನನುಸರಿಪ ಸುಗುಣ ಸುವ್ರತೆಯ ಪತಿಹಿತೆಯಾಗಿ ಹಿತಬಾಂಧವರ ಮಾನಿಸುವ ಸತೀಸಾಧ್ವಿಯರ ಶ್ರೀಪತಿ ಶರಣೆಯರ 3 ಘಾಸಿ ಪಡೆಯುವಿರೆಂzವ ಯಮಧರ್ಮ ನಯದಿಂದ4
--------------
ನಂಜನಗೂಡು ತಿರುಮಲಾಂಬಾ
ಹರಿ ಪುಟ್ಟಿಸಿದಾ ವೃಕ್ಷದಿ ಪುಟ್ಟಿದ ಎಳೆಸಸಿಯೆ ಬಾಳೆನ್ನ ಕುಲದಾ ಬೆಳದಿಂಗಳೆ ಪ. ತಂದೆ ತಾಯಿಯ ಮಾತು ಮರೆಯದಿರು ಎಲೆಸಸಿಯೆ ಇಂದಿರಾಪತಿ ಕರುಣಕ್ಕೆ ಪಾತ್ರನೆಂದೆನಿಸಿ ಇಂದು ನೀನಖಿಳಜನ ಸಂದಣಿಯೊಳು ಬೆಳಗು ಚಂದ್ರ ಬಾನೊಳಗೆಸೆವ ತೆರನಂತೆ ಪೊಳೆದು1 ಬಾ ಹಿರಿಮೆ ಬೇಡವು ನಿನಗೆ ಹಿರಿಯರಾಜ್ಞೆಲಿರಿರಲು ಕರೆಕರೆಯುಬಾರದೊ ತರಳ ಶಿಶುವೆ ಹಿರಿಮೆಗೆ ಕೊರತೆಯುಂಟೆ ಗುರುಹಿರಿಯರಾಜ್ಞೆಯಲಿರಲು ದುರುಳರನು ಸರಸದೊಳು ಕೆಣಕದಿರು ಎಲೆಸಸಿಯೆ 2 ದಧಿ ಮಧುರಾಕಿಂತ ಅಧಿಕದ ಚೊಕ್ಕ ಮಾತುಗಳಾಡು ನಿನ್ನ ದಿಟ್ಟ ಬಾಯೊಳಗೆ ಚಿಕ್ಕವನಲ್ಲವೇ ಭಕ್ತಪ್ರಲ್ಹಾದ ಧ್ರುವ ಕೇಳೊ ಅವರಂತೆ ಚಿಕ್ಕ ಶ್ರೀ ಶ್ರೀನಿವಾಸನ ಹರಕೆಯಲಿ ಬಾಳೊ 3
--------------
ಸರಸ್ವತಿ ಬಾಯಿ