ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ದುಗ್ಗಾಣಿಯು ದೊಡ್ಡದಲ್ಲಾ ನಿನ್ನ ಪೆಗ್ಗೆಗೆ ಯವiನಾಳು ಹೊರಿಸ್ಯಾರು ಕಲ್ಲಾ ಪ ಬಗ್ಗಿಸಿ ಆರೆಂಟು ನುಗ್ಗಿ ನೋಡಿ ಬರುವ ಪೆಗ್ಗೆಯನಳಿದವರ ಅಗ್ಗದಿಂದಾಡಿದರು ಅ.ಪ ಒಂದೆರಡು ಮೂರೆಂಬ ಅಂದವು ಗುರುವಿನೊಳು ಚಂದದಿಂ ಕೇಳಿಕೊಳ್ಳೆಲೊ ಮಂಕುಜೀವಿ ಮುಂದೀಗ ಬರುವಂಥ ದುಂದುಗಾರರ ಕಂಡು ಕೊಂದುಹಾಕಲು ಚಂದ್ರಾಯುಧವ ಹಿಡಿದವಗೆ 1 ಒಂಬತ್ತು ಗೇಟಿನಾ ಮೋಟದೊಳು ನೋಡಯ್ಯ ಅಂಬಿಹರುಳುವಂತ ದುಂಬಿಗಳ ಕಾಟಾ ಅಂಬಾರಿಯೇರಲು ನಂಬೀಗೆ ಕೊಟ್ಟಿರ್ಪ ಶಂಭುನುತ ಶ್ರೀ ತುಲಸಿ ಕಂಬವ ಹಿಡಿದವಗೆ2
--------------
ಚನ್ನಪಟ್ಟಣದ ಅಹೋಬಲದಾಸರು
ಮನ್ಮಥಪಿತ ವಿಠಲ ನೀನಿವಳ ಸಲಹೊ ಹರಿಯೇಮನ್ಮನೋರಥ ಭಿನ್ನಪವ ಸಲಿಸೋ ಪ ಜನ್ಮಜನ್ಮಾಂತರದ ಪುಣ್ಯ ಸಂಚಯ ಫಲಿಸಿನಿನ್ನ ದಾಸತ್ವದಲಿ ಕಾಂಕ್ಷೆ ಬಹುಯಿರಿಸೆನನ್ನೆಯಿಂದಲಿ ಪೂಜೆ ಪರಿಕರಂಗಳ ಕೊಂಡುಸ್ವಪ್ನ ಸೂಚಕದಂತೆ ನಿನ್ನರ್ಚನೆಯ ಕಾತುರಳ 1 ತರತಮದಿ ಸುಜ್ಞಾನ ಹರಿಗುರೂ ಸದ್ಭಕ್ತಿಪರಮ ವೈರಾಗ್ಯವನು ವಿಷಯಾದಿಗಳಲೀಪರತತ್ವ ಹರಿಯೆಂಬ ವರಮತಿಯ ನೀನಿತ್ತುಗುರುಮಧ್ವ ಮತದಲ್ಲಿ ಪರಮದೀಕ್ಷೆಯನೀಯೋ 2 ಪತಿ ಸುತರು ಹಿತರಲ್ಲಿ | ಗತಿದಾತ ಗುರುವಿನೊಳುಕ್ಷಿತಿರಮಣ ತವವ್ಯಾಪ್ತಿ ಮತಿಯ ಪಾಲಿಸುತಗತಿ ದೋರೊ ಸನ್ಮುಕುತಿ ಪಥವನೀ ಸಲಿಸುತ್ತಹುತವಹಕ್ಷಾಂತರ್ಗತ ಮನದಿ ನೆಲಸುತಲೀ 3 ಸಂಜೀವ ಪಿತನೇ |ನಂಜು ಸಂಸ್ಕøತಿ ಬಂಧ ಮೋಚಕೇಚ್ಛೆಯ ಮಾಡಿಅಂಜಿಕೆಯನೆ ಕಳೆಯೊ | ಕಂಜಾಕ್ಷ ಹರಿಯೇ 4 ಪಾವಮಾನಿಯ ಪ್ರೀಯ ಭಾವುಕಳ ಹೃದ್ಗತನೆನೀವೊಲಿದು ತವಸ್ಮರಣೆ ಸರ್ವದಾ ಸರ್ವತ್ರಈವುದಿವಳಿಗೆ ಎನ್ನ ಬಿನ್ನಪವ ಸಲ್ಲಿಪುದುಗೋವಿದಾಂಪತಿಯೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಪ ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ 1 ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ 2 ಉರಿಯೊಳು ಜನಿಸಿದವನ ನಿಜ ತಂಗಿಯಸೆರಗ ಪಿಡಿದ ಖಳನಣ್ಣನ ತಂಗಿಯವರನ ತಲೆಯನು ಕತ್ತರಿಸಿದ ಧೀರನಗುರುವಿನೊಳುದಿಸಿದನಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನಕರೆದು ವರವನಿತ್ತು ಮನ್ನಿಸಿ ಸಲಹುವಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ 3
--------------
ಕನಕದಾಸ