ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಬಣ್ಣಿಸಲಿ ಗುರುರಾಯನಾ | ತಾ ನೆನೆದವರ ಧನ್ಯಗೈಸುವನಾ ಮಹಿಮೆ ಪ ಧರಿಯೊಳಜ್ಞಾನ ತಮಹರಣ ಭಾಸ್ಕರ ನೆನಿಪ | ಕರ ಕಮಲದಲಿ ಜನಿಸೀ | ವರಮೂಲ ಮಂತ್ರವನೆ ಗುರು ಮಹಿಪತಿಯಂಬಾ | ನಿರುತ ಖ್ಯಾತಿಯ ನಾಮ ಧರಿಸಿ ಬಂದನ ಮಹಿಮೆ1 ಘನಸಾರ ವಿದ್ಯದಾಕಾರವೋ | ಶುದ್ಧಜ್ಞಾನ ಕಲ್ಪ ದ್ರುಮವಿನಾ | ಮುದ್ದು ಫಲವೋಯನಲು ಸಿದ್ಧ ಸಾಧಕರ ನಡು | ಗದ್ದುಗೆಯೊಳೆಸೆವ ಗುಣ ನದ್ವೀತಿಯನ ಮಹಿಮೆ 2 ಸ್ವಸ್ಥ ಮನದಿಂದ ಭಕುತಿ ಸ್ತವನ ಮಾಡಲಿಕೆ | ಮಸ್ತಕದ ಮ್ಯಾಲಭಯ ಹಸ್ತನೀಡೀ | ಅಸ್ತಿ ಭಾತಿ ಪ್ರಿಯಂ ವಸ್ತು ವಿದೇಶ ಸಕಲ ಹೃದ | ಯಸ್ಥನೆಂದನು ಭವವ ವಿಸ್ತರಿಸುವನ ಮಹಿಮೆ 3 ಆರಿಗಳವಡದಿಹ ನೈರಾಸ್ಯ ವೃತ್ತಿಯಾ | ತಾರದಲಿ ನಡೆದು ಮುನಿ ವೈರಾಗ್ಯದಾ | ಸಿರಿ ಸಂಪದವ ತೋರಿದನು ನೋಡಲಿಕೆ | ಸಾರ ಸಾಂಖ್ಯವು ಯೋಗ ದಾರಿ ಬಲ್ಲನ ಮಹಿಮೆ4 ಹೊಂದಿದ್ದವರ ಚಿದಾನಂದ ಸುಖಸಾಗರದಿ | ನಿಂದು ಲೋಲ್ಯಾಡಿಸಿದ ನಂದಿಗಿಂದು | ತಂದೆ ಮಹಿಪತಿ ತನ್ನ ದ್ವಂದ್ವಪಾದುಕೆಗಳನು | ನಂದನ ಸಿರದಲ್ಲಿಟ್ಟು ಛಂದ ನೋಡುವನ ಮಹಿಮೆ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡೆ ಗುರುರಾಯನಾ ಸುರಮನೋಪ್ರಿಯನಾ ಪ ತೊಂಡವತ್ಸಲ ಧರ - ದಂಡ ಕಮಂಡಲ ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ಅ.ಪ ಮಣಿ ವಿಭವಾ ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ ಕಪೋಲ ಯುಗ ಭಾಸವಾ ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ 1 ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ ಪೊಂದಿ ಪೊಳೆವೊದದರ ಛವಿಯಾ ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ ಭುಜದಳೊಪ್ಪುವ ಮುದ್ರನಾಮವ ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ 2 ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ ಕದಳಿ ಸ್ತಂಭವಾ ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ 3 ಕರಿರದೋಪಮ ಜಂಘೆಗಳಾ - ಗುಲ್ಫ ವರರತ್ನ ಪಾದಾಂಗುಲಿ ಸಂಫÀಗಳ ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ ದುರಿತ ನಿರುತ ನೀಡುವೋ ನಭೀಷ್ಟವಾ ಭಕುತರೊಳಗೆ ತಾನಾಡುವಾ ಹಾ - ಹಾ - ಹಾ 4 ನೀತ ಗುರುಜಗನ್ನಾಥಾ ವಿಠಲಪಾದ ಪ್ರೀತಿಪೂರ್ವಕ ಭಜಿಸುತ ಭೂತ ಪ್ರೇತದ ಭಾಧೆUಳನೆಲ್ಲ ಕಳೆಯುವಾ ಸಕಲ ಸೌಖ್ಯನೀಡುವಾ ನಂಬಿದರೀತ ಪೊರೆಯುವಾ ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ 5
--------------
ಗುರುಜಗನ್ನಾಥದಾಸರು
ಗುರುರಾಯನಾ ಮನಿಯಾ ನಾಯಿ ನಾನು ಪ ಗುರು ಗುರು ಎನುತಲಿ ಇರುವೆ ಬಾಗಿಲದೊಳು | ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯನಾ 1 ಹರಿ ಶರಣರ ಕಂಡು ಗರುವಿಸಿ ಕೆಲಿಯೆನು | ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ 2 ಒಡೆಯನ ಮುಂದೆ ಯನ್ನಾ ಒಡಲವ ತೋರುವೆ | ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ3 ಹರಿನಾಮದಿಂದ ಭೋಂಕರಿಸಿ ವದರುವೆ | ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ 4 ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ | ನಿಂದು ತನ್ನ ಬಿರುದಕ ಹಾಕಿದ ನಮ್ಮಯ್ಯನ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಸುಖಿಸಿ ಹೊಂದಿ ಸುಖಿಸಿ ಒಂದು ಮನದ ಭಾವದಿಂದಾ ನಂದನೀವ ಜನಕ ನಮ್ಮಗುರುರಾಯನಾ ಪ ದಿಟ್ಟತನದಿ ಸಾಗರಧಿಂ ಮುಟ್ಟಿ ಮುದ್ರೆಯ ಕೊಟ್ಟ ಬಳಿಕ ವನವ ಛೇದಿಸಿ ದುಷ್ಟ ರಾವಣ ತನುಜನಬೆ ನ್ನಟ್ಟಿ ಕುಟ್ಟಿ ಲಂಕೆಯನು ಸುಟ್ಟ ಬಿಟ್ಟ ಬಂದು ಪೊಡ ಮಟ್ಟ ಹನುಮಾ 1 ಆಪ ನೋಡದೆ ಭೂಪರಾಸಭೆ | ಲೋಪಗಡಿ ಮಂಡಿಸಿ ಗೆಲವು | ಲೋಪವಾಗೆ ದ್ರೌಪದಿಯನು ಛಲನೆ ಮಾಡಿದ || ಪಾಪಿಕೌರವ ಧೀಪ ನೆಜ್ಞ ಸ | ಮೀಪಪಶುವಿನೋ ಪಾದಿಯಲಿ ಕೊಪದಿಂದಲಿ ಘಾತಿಸಿದ ಭೂಪಭೀಮನಾ2 ಮತ್ರ್ಯ ದೊಳಗ ಬೆರ್ತು ವಿಷಯ ಅರ್ತುಚರಣ ನಿರ್ತದ್ಹುಗಲು ತೀರ್ಥಚರಣನು ಸಾರ್ಥಕವನು ಮಾಳ್ಪಾನಂದ ಮೂರ್ತಿ ಮರುತನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು