ಒಟ್ಟು 17 ಕಡೆಗಳಲ್ಲಿ , 4 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಥಾ ಸಮರ್ಥ ಗುರುನಾಥಗೆ ಮಂಗಳ |ಪ್ರೀತಾ ಭಕ್ತರ ನಿಜ ದಾತಾಗೆ ಮಂಗಳ 1 ಜನನ ಮರಣ ದಾಂಟಿಸುವಗೆ ಮಂಗಳ |ಘನಕೆ ಘನವಾದ ಸ್ಥಾನ ನಿತ್ಯಗೆ ಮಂಗಳ 2 ಭೀಮಾಶಂಕರ ಗುರುಮೂರ್ತಿಗೆ ಮಂಗಳ |ಪ್ರೇಮಾ ಸ್ಫುರಿತ ನಿಜಗಿರಿಗೆ ಮಂಗಳ 3
--------------
ಭೀಮಾಶಂಕರ
ಮಂಗಳ ಜಯಮಂಗಳ ಶುಭ ಮಂಗಳ ಶ್ರೀ ಗುರುಮೂರ್ತಿಗೆ ಧ್ರುವ ವೇದೋದ್ಧಾರ ಶ್ರೀಮತ್ಸ್ಯಗೆ ಮಂಗಳ ಮೇದಿನಿಯ ಪೊತ್ತ ಕೂರ್ಮಗೆ ಮಂಗಳ ಕಾದಿ ಗೆದ್ದ ಶ್ರೀವರಾಹಗೆ ಮಂಗಳ ಒದಗಿ ಮೂಡಿದ ನರಸಿಂಹಗೆ ಮಂಗಳ 1 ಧರಿಯೆ ದಾನವಕೊಂಡ ವಾಮನಗೆ ಮಂಗಳ ಶೂರ ಪರಶುರಾಮಗೆ ಮಂಗಳ ಶರಣ ರಕ್ಷಕ ಶ್ರೀರಾಮಗೆ ಮಂಗಳ ಸಿರಿಯನಾಳುವ ಶ್ರೀಕೃಷ್ಣಗೆ ಮಂಗಳ 2 ಗುಹ್ಯ ಗೋಪ್ಯದಲಿಹ ಬೌದ್ದಗೆ ಮಂಗಳ ಹಯವನೇರಿದ ಕಲ್ಕಿಗೆ ಮಂಗಳ ಜಯ ಜಯ ಮಹಿಪತಿಸ್ವಾಮಿಗೆ ಮಂಗಳ ದಯುವುಳ್ಳ ಶ್ರೀದೇವಿದೇವಗೆಮಂಗಳ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಆಡುವರೇಚಕ ಪೂರಕ ನಂದಿಯ | ಜೋಡಿಸಿ ಎರಡನು ಮೆರೆವಸುಷಮ್ನಿಯ | ನಾಡಿಯ ರಥಿಕರ ಹೂಡುತ ಮೆಲ್ಲನೆ | ನಿಜಮನ ಸಾರಥಿಯಾ | ಕೂಡಿಸಿ ಹರುಷಲೇರಿ ನಡೆಸುತ ಸ | ವಾಡಿಕಿಯಿಂದಲಿ ಮೇಲ್ಗುರಿಯಾತ್ರೆಯ | ಮಾಡಿ ವಿಲಾಸದಲಾಡಿದ ಮಹಿಪತಿ | ಗುರುಮೂರ್ತಿಗೆ ಶರಣು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಈ ಮಹಿಮೆಗೆ ಏನೆನಬಹುದು ಧ್ರುವ ರೂಪವಿಲ್ಲದೆ ರೂಪಾಗಿ ರೂಪಕ ಅರೂಪನಾದ ಅಪಾ ಮೂರು ಲೋಕಕ ಚಿದ್ರೂಪನಾದ ಮೂರ್ತಿಗೆ 1 ಸರ್ವರೊಳು ಸಾಕ್ಷವಾಗಿ ನಿರ್ವಿಕಲ್ಪ ನಿರ್ಗುಣಿ ತಾ ನಿರ್ವಿಕಾರನಾದ ನಿರ್ಭರ ನಿರ್ವಿಶೇಷಗೆ 2 ಭಾವಕ ಸ್ವಭಾವನಾದ ಪವಿತ್ರಪಾವನನೀತ ಭವನಾಶಗೈಸಿದ ಮಹಿಪತಿ ಗುರುಮೂರ್ತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ ಉದ್ಧರಿಸುವ ನೆಲೆನಿಭ ಸ್ಥಾನ ಬೆಳಗಾಗಲಿಕ್ಕೇರಿತು ನೀ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 1 ಒಳಮುಖನಾಗರಿಯೋ ನೀ ಸುಲಲಿತ ಜ್ಞಾನ ಅಲೇಶ ಮಾಡದೆ ನೀ ಬ್ಯಾಗ ಬಲಿ ನಿಜಧ್ಯಾನ ಥಳಥಳಗುಡುತಲ್ಯದ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 2 ತೊಳಿಬೇಕೆಲೊ ಮನದ ಹೀನ ಮಲಿನಗುಣ ಕರ್ಮ ತಮಂಧತನ ಕಳೆಕಾಂತಿಯುಳ್ಳ ಕರುಣಾರ್ಣವ ಸ್ವಾಮಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 3 ಸಲೆ ಮೊರೆಹೊಕ್ಕು ನೀ ಸದಾಬಲಿ ಭಕ್ತಿ ಪೂರ್ಣ ಅನುದಿನ ಸದ್ವಸ್ತು ಶರಣ ಸಕಳ ಸುರವುತಲ್ಯದೆ ಬಲ್ಲ ಸ್ವಾಮಿ ಕರುಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 4 ಇಳೆಯೊಳಿದೆ ಸಕಲಪುಣ್ಯಶಿರೋನಿಧಾನ ಘಳಿಸುವದೊಂದೆ ಸುಫಳಿತ ಸುದಿವ್ಯ ಘನ ತಿಳಿಯೊ ಸುಮನವೆ ಮಹಿಪತಿಸ್ವಾಮಿ ಪೂರ್ಣ ಒಲುವಾಂಗೆ ಮಾಡು ಗುರುಮೂರ್ತಿಗೆ ಸುನಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ ಜಯಜಯವೆನ್ನಿರೊ ಧ್ರುವ ಕಂಗಳದೆರಸಿ ಅಂತರಂಗದೋರಿದವಗೆ ಮುಂಗಡÀಲೆ ಇದ್ದು ಸುಸಂಗದೋರಿದವಗೆ ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ ಮಂಗಳಾತ್ಮಕನ ಸಂಗಸುಖ ಬೀರಿದವಗೆ 1 ಆರು ಅರಿಯದ ವಸ್ತು ಸಾರಿದೋರಿದವಗೆ ಶಿರದಲಿ ಕರವಿಟ್ಟು ಕರುಣಿಸಿದವಗೆ ಮೂರುಗುಣಕೆ ಮೀರಿದ ತಾರಕ ಗುರುವಿಗೆ ಸಾರವಾಡದಲಿ ನಿಂದು ಪಾರದೋರಿದವಗೆ 2 ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ ಗುಹ್ಯ ಗುರುತ ತೋರಿದ ಗುರುಮೂರ್ತಿಗೆ ಕೈಪಿಡಿದು ಮಹಿಪತಿಗೆ ದಯಮಾಡಿದವಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳ ಜಯಮಂಗಳ | ಶುಭಮಂಗಳ | ಮಂಗಳ ಮಹೀಪತಿ ಗುರುಮೂರ್ತಿಗೆ | ಮಂಗಳ ಶರಣರ ಸಾರಥಿಗೆ ಪ ಹಲವು ಸಾಧನದಿಂ ತೊಳಲುತ ತತ್ವದ | ನೆಲೆಗಾಣದವರನು ತಾರಿಸಲಿ | ಒಲಿದು ಶ್ರೀಗುರು ರೂಪದಿಂದಲಿ ನರದೇಹ | ಇಳೆಯೊಳು ಧೃಡಿಸ್ಯವತರಿಸಿದಗೆ 1 ಬೇಡಿದಿಷ್ಟಾರ್ಥವ ಕಾಮ್ಯ ಭಕುತರಿಗೆ | ನೀಡುತ ನಿರುಪಾಧಿಕ ಜನರಾ | ಮಾಡಿ ಜೀವನ್ಮುಕ್ತರ ನಿಜಬೋಧದ ಲಾಡುವ ಕರುಣಾಸಾಗರಗೆ 2 ಎಡಬಲದಲಿ ಯೋಗ ಭೋಗ ಚಾಮರದಿಂ | ದೃಢಸಿಂಹಾಸನ ಲೊಪ್ಪವಗೆ | ಪೊಡವಿಲಿ ಮೂಢ ನಂದನ ಕೈಯ್ಯವ | ಬಿಡನೆಂದಭಯವಿತ್ತ ಸ್ವಾನಂದಗೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರತರ ತಾ ಮರವಲ್ಲದು ನೋಡಲು | ಅರತರತಾ ಅರವಲ್ಲದು ನಿಜದೊಳು | ಘನದರುವೇ ತಾನಾಗಿ | ಕುರುವಿನೊಳಿರುವಾಗಿಹ ಸ್ವಾನಂದದಿ | ತೆರವಿಲ್ಲದೆ ಸಲೆ ತುಂಬಿತುಳುಕುತಿಹ | ಜಯ ಜಯತು 1 ತೋರುವ ದೃಶ್ಯವ ಕಾಂಬುವ ನಯನಕ | ಸಾರಿಯಮನವನು ನೋಡುವ ಬುದ್ಧಿಗೆ | ನಿತ್ಯ ನಿರಂಜನ ವಿಶ್ವ ಭರಿತನೆಂದು || ಸಾರುವ ಶೃತಿಯಿಂದಾತ್ಮ ಪ್ರಚೀತಿಯ | ಭವ | ವಾರಿಸಿ ಚಿತ್ಸುಖಲಿರಿಸಿದ ಮಹಿಪತಿ | ಸದ್ಗುರು ಜಯ ಜಯತು 2 ಮೊದಲಿಗೆ ಜಯದಾರ್ಜ ಲಕ್ಷಣವನು | ಹೃದಯದಿ ನೆಲೆಗೊಳಿಸಿ | ಇದರದರಿಸಿ ಭವದ್ಹೆದರಿಕೆÉ ಹಾರಿಸಿ | ಸದಮಲ ಬ್ರಹ್ಮನ ಕಳೆಯನು ತೋರಿಸಿ | ಗುರುಮೂರ್ತಿಗೆ ಶರಣು 3 ಆಡುವ ರೇಚಕ ಪೂರ್ವಕ ನಂದಿಯ | ಜೋಡಿಸಿ ಯರಡನೆ ಮೆರೆವಸುಷಮ್ನಿಯ | ನಿಜವiನ ಸಾರಥಿಯಾ | ಕೂಡಿಸಿ ಹರುಷದ ತೇರಿ ನಡಸುತ ಸ | ಫಾಡಿರೆಯಿಂದಲಿ ಮೇಲ್ಗಿರಿಯಾತ್ರೆಯ | ಗುರುಮೂರ್ತಿಗೆ ಶರಣ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸದ್ಭಾವದಿಂದ ಗುರುವೇ ಗುರುವೆಂದು ಬಾಗಿ ಸದ್ಭಕ್ತನಾಗಿ ಮರಿಯಾ ಮರಿಯಾದೆ ಹೋಗಿ ಸದ್ಭೋಧಸಾರ ಗರವಾ ಗರವಾಮೃತಾದಾ ಚಿದ್ಭಾನುದೋರಿ ಹೊರೆವಾ ಹರಿವಾಭವಾಂಧಾ 1 ಗುರುಪಾದ ಕಾಣದನಕಾದನ ಕಾವನಾಗೀ ಮರದೆನ್ನ ತನ್ನದೆನುತಾದೆನುತಾಂನರಾಗಿ ಅರಿತೀಗ ಮಾಡಿ ಗುರುತಾಗುರು ತಾತನಂಘ್ರಿ ಪರಮಾರ್ಥವಸ್ತು ವರ ದೇವರ ದೇಶಸಾರಿ 2 ಗುರುಮಾರ್ಗ ಬಿಟ್ಟು ಬರುದೇ ಬರುದೇನೊ ಪ್ರಾಣಿ ಅರತೇನುಶಾಸ್ತ್ರ ಪರಮಾಪರಮಾರ್ಥಗಣೀ ಇಂದು 3 ಗುರುಹಸ್ತಮಸ್ತಕದಲೀ ಕದಲೀತೆ ಕ್ಲೇಶಾ ದೊರವನು ಹೃತ್ಕಮಲದಾಮಲದಾತ್ಮ ಈಶಾ ಗುರುಮಿತ್ರ ಮಾತೃ ಜಕನಕಾಜನಕಾರ್ತಬಂಧು ಶರಣ್ಹೋಕ್ಕು ನೋಡಿ ಸುಖವಾ ಸುಖವಾಗದೆಂದು4 ಇರುತಿಪ್ಪನೆಲ್ಲಿ ಗುರುತಾ ಗುರುತಾದ ಕಾಶೀ ನೆರೆಗಂಗಿ ಪಾದತೀರ್ಥತೀರಥಾಧರಾಶಿ ಗುರು ವಿಶ್ವನಾಥನೆನುವಾನೆನುವಾವನೆಲ್ಲಿ ನರರೋಳು ಧನ್ಯ ತಮನುತ್ತ ಮನೊರ್ವಿಯಲ್ಲಿ5 ಕಾಣದೆ ಕಂಗಳಲಿತಾ ಲಲಿತಾದ ನೋಟಾ ಜಾಣೀಸಿ ಕೋಟಿ ತರಣೀ ತರುಣೀಯ ಕೂಟಾ ಕಾಣೀಸಿ ಉನ್ನಮನೆಯಾ ಮನಿಯಾವೆ ನೋಡಿ ಪ್ರಾಣವಕಾವ ಗುರುವೀ ಗುರುವೀನ ಪಾಡಿ 6 ಮನಮುಟ್ಟಿಮುದ್ರಿ ಸಲಿತಾಸತಿತಾಳಭೇರಿ ಅನುಹಾತ ಘೋಷಶ್ರವಣಾಶ್ರವಣಕ್ಕೆ ಬೀರಿ ತನುಭಾವವನ್ನು ಮರಸೀ ಮೆರಸೀದನೆಂದು ನೆನಿಬೇಕು ಸದ್ಗುರುವಿನಾರೂವ್ಹಿನಾಗತಂದು 7 ಗುರುಮೂರ್ತಿಗೆಂದನರನೇ ನರನೇವನವನು ಗುರುಭಕ್ತಿ ಗಳ್ಳಕುಶಲಾಕುಶಲಾದವನು ಗುರುನಾಮ ಕೂಗದವನೈದುವನೇ ಗತಿಯಾ ಗುರುಪಾದಪೂಜಿಮರತಾ ಮರತಾವನೀಯಾ 8 ಗುರುಅಷ್ಟಕದ ಮಹಿಮಾ ಮಹಿಮಗೇಬಲಾ ಸ್ಮರಿಸೀದನ್ನು ಭಕುತೀಭಕುತೀವದೆಲ್ಲಾ ಗುರು ಮಹೀಪತಿ ಕರುಣಾ ಕರುಣ ನುಪಾಡೀ ಕರಕೊಂಡುಜ್ಞಾನಸುಧೆಯಾ ಸುಧಿಯಾದೆ ನೋಡಿ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪೂಜೆಯ ಮಾಡುವೆನೊ ಸದ್ಗುರುವಿನ |ಪೂಜೆಯ ಮಾಡುವೆನು ||ಮಾಜದೆ ತನು ಮನ ಧನವೆಲ್ಲ ಅರ್ಪಿಸಿ |ಪೂಜೆಯ ಮಾಡುವೆನುಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗಣಪತಿ ಹರಿಹರರಾ ನಿಜಶಕ್ತಿ ದಿನಪತಿ ನಿಜಭಾಸವು |ತನುವೆಂಬ ಅಷ್ಟಕಂಬದ ಮನೆಯೊಳು ನಾಲ್ಕುಗುಣದ ಚೌಕಿಯನಿಡುವೆ1ವೃತ್ತಿಉದಾಸೀನಕೆ ನಿರ್ಗುಣವಾದಸುತ್ತ ರೇಖೆಯ ಬರೆದು | ಚಿತ್ತವೆಂಬಷ್ಟದಳದಕಮಲದೊಳಿಷ್ಟಮೂರ್ತಿಯ ಧ್ಯಾನಿಸುವೆ2ವೇದಾದಿ ಕಾರಣದಿ ಉಪನಿಷದಾದಿಅರ್ಥದಿ ಶಿರಸಾಮೇದಿನಿ ಮೊದಲಾದತತ್ತ್ವಭೂಷಣದಿಂದ ಆದಿನಾಥನ ಪೂಜೆಯ3ಪ್ರವೃತ್ತಿ ಸ್ಥಾನದಲ್ಲಿ ಫಣಿಯಲ್ಲಿ ನಿವೃತ್ತಿ ವಿಭೂತಿಯುನಿರ್ವಂಚನೆಯಾದ ಆಚಮನ ಕೊಡುವೆನುಸರ್ವಾತ್ಮ ಗುರುಮೂರ್ತಿಗೆ4ಭಕ್ತಿಯ ಜಲದಿಂದಲಿ ಸದ್ಗುರುವಿನನಿತ್ಯಚರಣತೊಳೆದು |ಮುಕ್ತಿಯ ಪಾವನ ಮಾಡುವ ಗುರುಪಾದ ತೀರ್ಥವಂದಿಸಿಕೊಂಬುವೆ5ಸದ್ವಾಸನೆ ಗಂಧವ ಶ್ರೀಗುರುವಿಗೆ ಚಿದ್ ವೃತ್ತಿಯಕ್ಷತೆಯು |ಸದ್ಭಾವದಿಂದಲಿ ತೋರುವ ಪರಿಮಳಮದ್ಗುರುವಿನ ತನುವಿಗೆ6ಮೂರು ಮಾತ್ರೆಯ ಹೊಸೆದು | ನಿರ್ಗುಣವಾದ ಧಾರವಶಿವಸೂತ್ರಕ್ಕೆ | ತೋರುವ ವಿಶ್ವಚರಾಚರ ಪುಷ್ಪದ ಹಾರಕೊರಳಿಗೆ ಹಾಕುವೆ7ನಾನೆಂಬ ಧೂಪ ಸುಟ್ಟು ಸದ್ಗುರುವಿಗೆ ಜ್ಞಾನದೇಕಾರತಿಯು |ಬೋನ ನೈವೇದ್ಯ ಜೀವದ ಭಾವವರ್ಪಿಸಿ ಜ್ಞಾನಕರೋದ್ವರ್ತಿಯ8ವಾಚ್ಯಾರ್ಥ ತಂಬೂಲವಾ ಸದ್ಗುರುವಿಗೆ |ಲಕ್ಷ್ಯಾರ್ಥವೆ ದಕ್ಷಿಣಾ ಲಕ್ಷ್ಯಾತೀತಗೆ ಮಂಗಳಾರತಿಬೆಳಗುವೆಅಕ್ಷಯಮಂತ್ರಪುಷ್ಪ9ಸಂತ ಸನಕಾದಿಕರೂ ಸುರರೆಲ್ಲ ಅಂತರಿಕ್ಷದಿ ಬಂದರು |ತಂತಿ ಮದ್ದಳಿ ತಾಳ ಗೀತ ಶಂಖದ ವಾದ್ಯತಿಂತಿಣಿಯಲಿ ಕುಣಿಯುತ10ಅದ್ವೈತಸಾಷ್ಟಾಂಗವಾ ಸದ್ಗುರುವಿಗೆ | ಚಿದ್ಬೋಧದಿಎರಗಲು ಶುದ್ಧಿ ಸಿದ್ಧಿಗಳೆಂಬ ಚರ್ಯವ ತೋರುವಮುದ್ರೆ ಶ್ರೀ ಗುರುಗಿಟ್ಟೆನು11
--------------
ಜಕ್ಕಪ್ಪಯ್ಯನವರು