ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶುಕಾಚಾರ್ಯರ ಸ್ತೋತ್ರ) ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ ಪಡದ ಮೃಡಾತ್ಮನ ಪಾಡಿ ಪ. ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ ಪರೀಕ್ಷಿತ ಲಾಲಿಸುವಂತೆರ- ಮಾಲಯ ಗುಣವರುಣಾಲಯ ತಿಳಿಸಿದ 1 ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ ದೀಪವು ತಿಮಿರವ ಕಳವಂದದಿ ನಿ- ಲೋಪಗೊಳಿಸುವ ಪರೋಪಕಾರಿಯನು 2 ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ ತಾಗುಬಾಗುವೊಳಗಾಗದ ತೆರದಲಿ ನಾಗ ಗಿರೀಂದ್ರನು ನಲಿವನು ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ಧ್ರುವ ರಾಜತೇಜೋನಿಧಿ ರಾಜ ರಾಜೇಂದ್ರ ಮಣಿ ಸುರೇಂದ್ರ ಮಣಿ ಸಾಂದ್ರ ಅಜಸುರ ಸೇವಿತ ಸುಜ್ಞಾನ ಸುಮೋದ 1 ಅಗಣಿತ ಗುಣ ಅಗಾಧ ಅಪಾರ ನಿಗಮಗೋಚರ ನಿರುಪಮ ನಿರ್ಧಾರ ಸಗುಣ ನಿರ್ಗುಣನಹುದೊ ಸಾಕ್ಷಾತ್ಕಾರ ಭಕ್ತವತ್ಸಲ ಮುನಿಜನ ಮಂದಾರ 2 ಧೀರ ಉದಾರ ದಯಾನಿಧಿ ಪೂರ್ಣ ತಾರಕ ಸ್ವಾಮಿ ಸದ್ಗುರು ನಿಧಾನ ತರಳ ಮಹಿಪತಿ ಜನ್ಮೋದ್ಧರಣ ಚರಣ ಸ್ಮರಣಿ ನಿಮ್ಮ ಸಕಲಾಭರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಹುದೊ ಎನ್ನ ಸ್ವಾಮಿ ಧ್ರುವ ಅನಾಥ ಬಂದು ನೀ ಙÁ್ಞನ ಶಿಖಾಮಣಿ ಧ್ಯಾನಕ ಸಾಧನಿ ನೀನೆ ಎನ್ನ ಗುರುಮುನಿ 1 ಜೀವಕ ಜೀವ ನೀ ಭಾವಕ ಭಾವ ನೀ ದೇವಾಧಿದೇವ ನೀ ಕಾವ ನೀನೆ ಕರುಣಿ ನೀ 2 ಬಾಹ್ಯಾಂತ್ರ ಪೂರ್ಣ ನೀ ಇಹಪರದಾತ ನೀ ಮಹಿಗೆ ಮಹೀಪತಿ ನೀ ಸಾಹ್ಯಮಾಡೊ ಸಗುಣಿ ನೀ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹನುಮಂತ ದೇವರು (ದಂಡಕ) ಅಂಜನಿಯ ಉದರದಿಂ ಪುಟ್ಟುತಾರ್ಭಟಿಸುತಲಿ ಕಂಜಮಿತ್ರಂಗೆ ಹಾರ್ದೆ ಧೀರಾ ವಾಯುಕುಮಾರಾ ರಣರಂಗಧೀರಾ ಕದನಕಂಠೀರಾ ದಿನಮಣಿಯ ಪಿಡಿದು ನುಂಗುವೆನೆಂಬೊ ಸಮಯದೋಳ್ ಬರಲು ದೇವತೆ ನಿಕರಗಳೆಲ್ಲಾ ಬೆದರಿಸಿದಿ ಎಲ್ಲಾ ಭಾಪು ಭಲ ಭಲ್ಲ ಭಾರತಿಯ ನಲ್ಲ ಸೂರ್ಯಸುತನಂ ಕಂಡು ಪಂಪಾಸರೋವರದಿ ಭಾಸ್ಕರಾನ್ವಯಗೆರಗಿ- ದೆಂದು ಜಯ ಜಗದ್ಬಂಧು ಕಾರುಣ್ಯಸಿಂಧು ಸೀತಾಪತಿಯ ಕರುಣದಿಂದ ಗಗನಕ್ಕೆ ಖ್ಯಾತಿಯಿಂದಲಿ ಬ್ಯಾಗ ಬೆಳದಿ ವೃಷಿಗಳನಳದಿ ದೈತ್ಯರ ತುಳದಿ ರಾಮಮುದ್ರಿಯ ಕೊಂಡು ಅಜನಸುತ ಸಹಿತಾಗಿ ನೇಮದಿಂ ಶರಧಿಯಂ ನೋಡಿ ದುರಿತಗಳ ದೂಡಿ ಪಾಡಿ ಕೊಂಡಾಡಿ ಕೋಟಿ ಸಿಡಿಲಬ್ಬರಣೆಯಿಂದ ಜಲಧಿಯ ಜಿಗಿದು ದಾಟಿದಿ ಲಂಕಾಪುರ- ವನ್ನು ಪೇಳಲಿನ್ನೇನು ಭುಜಬಲವನ್ನು ತೃಣಬಿಂದು ಋಷಿಯ ಕಾಣುತಲಲ್ಲಿ ಕುಣಿದಾಡಿ ಪರಿಪರಿಯ ಚೇಷ್ಟೆ- ಗಳಿಂದ ಮಾಡಿದೈ ಛಂದ ಅಂಜನೆಯ ಕಂದ ಪುನಹ ಲಂಕೆಗೆ ಹಾರಿ ಲಂಕಿಣಿಯ ಸಂಹರಿಸಿ ಭೂಜಾತೆಯನು ಅರಸು- ತಲ್ಲಿ ಅತಿರೋಷದಲ್ಲಿ ತಿರುತಿರುಗುತಲ್ಲಿ ರಾಮನಾಮಾಮೃತವ ಜಿಹ್ವಾಗ್ರದೋಳ್ ಸುರಿವ ಭೂವಿಜಯ ಚರಣಮಂ ಕಂಡು.... ಮಾಡಿದೈ ಗಂಡು ರಘುವರನ ಮುದ್ರೆಯನಿತ್ತು ನಿಜಮಾತೆಗೆ ಹರುಷಬಡಿಸಿದಿ ಹನೂ- ಮಂತಾ ಗುರುಮುನಿಯ ಶಾಂತಾ ದಿವಸಾಧಿಪತಿಕೋಟಿತೇಜದಿಂ ಮೆರೆವಂಥಾ ಜಯ ಹನುಮ ಭೀಮ ಬಲವಂತಾ ಬಾಲದಿಂ ಬೆಂಕಿಯಂ ಹಚ್ಚಿ ಲಂಕಾಪುರವ ಲೀಲೆಯಿಂದಲಿ ದಹನಮಾಡಿ ಸುತ್ತ ಓಡ್ಯಾಡಿ ದೈತ್ಯರಂ ಕಾಡಿ ಸುರನಿಕರವಂದು ಆಕಾಶಮಾರ್ಗದಿ ಎಲ್ಲ ದೇವದುಂದುಭಿನಾದ ಗೈದು ..................................ಮಹಿಮೆ ಹೌಧೌದು ತ್ರಿಭುವನದೊಳಗಧಿಕನೈ ಕದರುಂಡಲಗಿರಾಯಾ ಅಭಯಮಂ ಕೊಡು ಎನ್ನ ಧೊರೆಯೆ ನಾ ನಿನ್ನ ಮರೆಯೆ ಅಗಡಿಪುರದಲಿ ನಿನ್ನ ಕೃಪೆಯಿಂದ ಪೇಳ್ದೆನೈ ಸೊಗಸಿನಿಂದ ಇಡು ಮಹಾರಾಯ ಅವನಾಯುಗೇಯಾ ಹನುಮಂತರಾಯಾ ಶ್ರೀಹನುಮಂತಗೌಡರ್À ಬಹಾದ್ದೂರರನ್ನು ಸರ್ಪಸುತಪುರದಲ್ಲಿ ಕಾಯ್ವ ಇಷ್ಟಾರ್ಥವೀವ ಭಕುತ ಸಂಜೀವ ಶ್ರೀ ಹನುಮಂತ ದಂಡಕವ ಕೇಳ್ದರ್ಗೆ ಇಹಪರದಿ ಶ್ರೀಹರಿಯೆ ಬಂದು ಅವರಲ್ಲಿ ನಿಂದು ಕಾರುಣ್ಯಸಿಂಧು ಪರಾಕು ಪರಾಕು
--------------
ಕದರುಂಡಲಗಿ ಹನುಮಯ್ಯ